ಅರಬಿಂದೋ ಫಾರ್ಮಾಸ್ ರೆಡ್ಡಿಯಿಂದ ಬಿಜೆಪಿಗೆ ಕೋಟ್ಯಂತರ ರೂ. ಪಾವತಿ: ಎಎಪಿ ನಾಯಕಿ ಅತಿಶಿ

ಅಬಕಾರಿ ನೀತಿ ಹಗರಣದಲ್ಲಿ ಹಲವು ದಾಳಿಗಳು, ಬಂಧನಗಳು ಮತ್ತು ಎರಡು ವರ್ಷಗಳ ಸುದೀರ್ಘ ತನಿಖೆಗಳ ಹೊರತಾಗಿಯೂ ಯಾವುದೇ ಎಎಪಿ ನಾಯಕನ ವಿರುದ್ಧ ಹಣದ ಜಾಡು ಹಿಡಿಯುವಲ್ಲಿ ಜಾರಿ ನಿರ್ದೇಶನಾಲಯಕ್ಕೆ ಸಾಧ್ಯವಾಗಿಲ್ಲ ಎಂದು ದೆಹಲಿ ಸಚಿವ ಅತಿಶಿ ಶನಿವಾರ ಹೇಳಿದ್ದಾರೆ.
ಅತಿಶಿ
ಅತಿಶಿ

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಹಲವು ದಾಳಿಗಳು, ಬಂಧನಗಳು ಮತ್ತು ಎರಡು ವರ್ಷಗಳ ಸುದೀರ್ಘ ತನಿಖೆಗಳ ಹೊರತಾಗಿಯೂ ಯಾವುದೇ ಎಎಪಿ ನಾಯಕನ ವಿರುದ್ಧ ಹಣದ ಜಾಡು ಹಿಡಿಯುವಲ್ಲಿ ಜಾರಿ ನಿರ್ದೇಶನಾಲಯಕ್ಕೆ ಸಾಧ್ಯವಾಗಿಲ್ಲ ಎಂದು ದೆಹಲಿ ಸಚಿವ ಅತಿಶಿ ಶನಿವಾರ ಹೇಳಿದ್ದಾರೆ. ಶರದ್ ಪಿ ರೆಡ್ಡಿ ಅವರ ಹೇಳಿಕೆಯನ್ನು ಆಧರಿಸಿ ಜಾರಿ ನಿರ್ದೇಶನಾಲಯ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಗುರುವಾರ ಬಂಧಿಸಿದೆ ಎಂದು ಅವರು ತಿಳಿಸಿದರು.

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಬಿಂದೋ ಫಾರ್ಮಾದ ರೆಡ್ಡಿ ಅವರನ್ನು ನವೆಂಬರ್‌ನಲ್ಲಿ ಇಡಿ ಬಂಧಿಸಿತ್ತು. ಅವರು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ ಕೋಟ್ಯಂತರ ರೂಪಾಯಿ ನೀಡಿದ್ದಾರೆ ಎಂದು ಅವರು ಆರೋಪಿಸಿದರು.

ಅತಿಶಿ
ಅಬಕಾರಿ ನೀತಿ ಪ್ರಕರಣ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ 6 ದಿನ ಇಡಿ ವಶಕ್ಕೆ

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಅವರ ಪಾತ್ರದ ಬಗ್ಗೆ "ವಿವರವಾದ ಮತ್ತು ನಿರಂತರ ವಿಚಾರಣೆಗಾಗಿ" ಸ್ಥಳೀಯ ನ್ಯಾಯಾಲಯ ಶುಕ್ರವಾರ ಕೇಜ್ರಿವಾಲ್ ಅವರನ್ನು ಮಾರ್ಚ್ 28 ರವರೆಗೆ ಇಡಿ ವಶಕ್ಕೆ ನೀಡಿದೆ.

ಅಬಕಾರಿ ನೀತಿ ಹಗರಣ ಎಂದು ಕರೆಯಲ್ಪಡುವ ಹಣದ ಜಾಡು ಕೇಸರಿ ಪಕ್ಷಕ್ಕೆ ಕಾರಣವಾಗುತ್ತದೆ ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಪ್ರಕರಣ ದಾಖಲಿಸಲು ಇಡಿಗೆ ಅತಿಶಿ ಸವಾಲು ಹಾಕಿದರು.

ಬಿಜೆಪಿ ತನ್ನ ಬ್ಯಾಂಕ್ ಖಾತೆಗಳಲ್ಲಿ "ಅಪರಾಧದ ಆದಾಯ" ಪಡೆದಿದೆ ಎಂದು ಆರೋಪಿಸಿದರಲ್ಲದೇ, ಕೇಸರಿ ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ಅವರನ್ನು ಕೇಂದ್ರ ಸಂಸ್ಥೆ ಬಂಧಿಸಬೇಕು ಎಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com