'ನನ್ನನ್ನು ಜೈಲಿನಲ್ಲಿಡಲು ಸಾಧ್ಯವಿಲ್ಲ, ಶೀಘ್ರದಲ್ಲೇ ಹೊರಬರುತ್ತೇನೆ': ED ಕಸ್ಟಡಿಯಿಂದ ಕೇಜ್ರಿವಾಲ್ ಸಂದೇಶ

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್‌ ಕೇಜ್ರಿವಾಲ್‌ ಬಂಧನದ ನಂತರ ಅವರು ಇಡಿ ಕಸ್ಟಡಿಯಿಂದ ಬರೆದಿರುವ ಸಂದೇಶವನ್ನು ಅವರ ಪತ್ನಿ ಸುನೀತಾ ತಮ್ಮ ಮೊದಲ ಭಾಷಣದಲ್ಲಿ ಹಂಚಿಕೊಂಡಿದ್ದಾರೆ.
ಕೇಜ್ರಿವಾಲ್ ಪತ್ನಿ ಸುನೀತಾ
ಕೇಜ್ರಿವಾಲ್ ಪತ್ನಿ ಸುನೀತಾ
Updated on

ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್‌ ಕೇಜ್ರಿವಾಲ್‌ ಬಂಧನದ ನಂತರ ಅವರು ಇಡಿ ಕಸ್ಟಡಿಯಿಂದ ಬರೆದಿರುವ ಸಂದೇಶವನ್ನು ಅವರ ಪತ್ನಿ ಸುನೀತಾ ತಮ್ಮ ಮೊದಲ ಭಾಷಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಜೀವನದ ಪ್ರತಿ ಕ್ಷಣವನ್ನು ದೇಶ ಸೇವೆಗೆ ಮುಡಿಪಾಗಿಟ್ಟಿರುವುದಾಗಿ ದೆಹಲಿ ಮುಖ್ಯಮಂತ್ರಿ ಪ್ರತಿಪಾದಿಸಿರುವ ಸಂದೇಶವನ್ನು ಓದಿದ್ದಾರೆ.

ವಿಡಿಯೋ ಸಂವಾದದಲ್ಲಿ ಇಡಿ ಕಸ್ಟಡಿಯಲ್ಲಿರುವ ದೆಹಲಿ ಮುಖ್ಯಮಂತ್ರಿ ಬರೆದಿರುವ ಸಂದೇಶವನ್ನು ಹಂಚಿಕೊಂಡ ಸುನೀತಾ, ಯಾವುದೇ ಕಾನೂನು ನನ್ನನ್ನು ಜೈಲಿನೊಳಗೆ ಇಡಲು ಸಾಧ್ಯವಿಲ್ಲ, ಶೀಘ್ರದಲ್ಲೇ ಹಿಂತಿರುಗುತ್ತೇನೆ." ನನ್ನ ಬಂಧನದಿಂದಾಗಿ ಬಿಜೆಪಿಗರನ್ನು ದ್ವೇಷಿಸಬೇಡಿ; ಅವರು ನಮ್ಮ ಸಹೋದರರು ಎಂದು ಎಎಪಿ ಕಾರ್ಯಕರ್ತರಿಗೆ ಸಂದೇಶ ನೀಡಿದ್ದಾರೆ.

ನನ್ನ ಪ್ರೀತಿಯ ದೇಶವಾಸಿಗಳೇ ನನ್ನನ್ನು ಬಂಧಿಸಲಾಗಿದೆ. ನಾನು ಜೈಲಿನಲ್ಲಿದ್ದರೂ ಇಲ್ಲದಿರಲಿ, ನಾನು ದೇಶಕ್ಕಾಗಿ ಸೇವೆಯನ್ನು ಮುಂದುವರಿಸುತ್ತೇನೆ. ನನ್ನ ಇಡೀ ಜೀವನ ದೇಶಕ್ಕಾಗಿ ಮುಡಿಪಾಗಿದೆ. ನನ್ನ ಜೀವನದಲ್ಲಿ ಸಾಕಷ್ಟು ಹೋರಾಟ ಮಾಡಿದ್ದೇನೆ, ಇದು ಮುಂದುವರಿಯುತ್ತದೆ ಎಂದು ನನಗೆ ತಿಳಿದಿದೆ. ಆದ್ದರಿಂದ ಈ ಬಂಧನವಾಗಿದ್ದು, ಇದು ನನಗೆ ಆಶ್ಚರ್ಯ ತಂದಿಲ್ಲ ಎಂದು ಬರೆದಿರುವುದಾಗಿ ತಿಳಿಸಿದರು.

ಕೇಜ್ರಿವಾಲ್ ಪತ್ನಿ ಸುನೀತಾ
ಅಬಕಾರಿ ನೀತಿ ಪ್ರಕರಣ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ 6 ದಿನ ಇಡಿ ವಶಕ್ಕೆ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಶುಕ್ರವಾರ ಮಾರ್ಚ್ 28 ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಲಾಯಿತು. ಅಬಕಾರಿ ನೀತಿ "ಹಗರಣ"ಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರನ್ನು ಬಂಧಿಸಿದ ಒಂದು ದಿನದ ನಂತರ2013ರ ಭ್ರಷ್ಟಾಚಾರ ವಿರೋಧಿ ಆಂದೋಲನದ ನಾಯಕ ಹಾಗೂ ಆಮ್ ಆದ್ಮಿ ಪಕ್ಷಕ್ಕೆ ಭಾರಿ ದೊಡ್ಡ ಹೊಡೆತ ಉಂಟಾಗಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಪ್ರಕರಣಗಳ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರು ಮಾರ್ಚ್ 28 ರಂದು ಮಧ್ಯಾಹ್ನ 2 ಗಂಟೆಗೆ ಕೇಜ್ರಿವಾಲ್ ಅವರನ್ನು ಮತ್ತೆ ನ್ಯಾಯಾಲಯಕ್ಕೆ ಕರೆತರುವಂತೆ ಇಡಿಗೆ ಆದೇಶಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com