ಕೇಂದ್ರ ಮಂತ್ರಿ ಪಿಯೂಷ್ ಗೋಯಲ್ ಪುತ್ರನ ಸೆಮಿನಾರ್ ನಲ್ಲಿ ಭಾಗವಹಿಸಲು ಒತ್ತಡ: ಮುಂಬೈ ಕಾಲೇಜಿನಲ್ಲಿ ವಿವಾದ!

ಮುಂಬೈ ನ ಕಾಂದಿವಲಿ ಪ್ರದೇಶದಲ್ಲಿರುವ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳಿಗೆ ಕೇಂದ್ರ ಮಂತ್ರಿ ಪಿಯೂಷ್ ಗೋಯಲ್ ಪುತ್ರನ ಸೆಮಿನಾರ್ ನಲ್ಲಿ ಭಾಗವಹಿಸಲು ಒತ್ತಡ ಹೇರಲಾಗುತ್ತಿದೆ ಎಂದು ವಿಪಕ್ಷ ಎನ್ ಸಿಪಿ (ಎಸ್ ಪಿ) ಹಾಗೂ ಶಿವಸೇನೆ (ಯುಬಿಟಿ) ಆರೋಪಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರTNIE

ಮುಂಬೈ: ಮುಂಬೈ ನ ಕಾಂದಿವಲಿ ಪ್ರದೇಶದಲ್ಲಿರುವ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳಿಗೆ ಕೇಂದ್ರ ಮಂತ್ರಿ ಪಿಯೂಷ್ ಗೋಯಲ್ ಪುತ್ರನ ಸೆಮಿನಾರ್ ನಲ್ಲಿ ಭಾಗವಹಿಸಲು ಒತ್ತಡ ಹೇರಲಾಗುತ್ತಿದೆ ಎಂದು ವಿಪಕ್ಷ ಎನ್ ಸಿಪಿ (ಎಸ್ ಪಿ) ಹಾಗೂ ಶಿವಸೇನೆ (ಯುಬಿಟಿ) ಆರೋಪಿಸಿವೆ.

ಪಿಯೂಷ್ ಗೋಯಲ್ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದು ಅವರ ಪುತ್ರ ಧ್ರುವ್ ಗೋಯಲ್ ಸೆಮಿನಾರ್ ನಲ್ಲಿ ಮಾತನಾಡಲಿದ್ದಾರೆ. ಧ್ರುವ್ ಗೋಯಲ್ ಭಾಷಣದ ವೇಳೆ ವಿದ್ಯಾರ್ಥಿಗಳು ಉಪಸ್ಥಿತರಿರುವುದನ್ನು ಖಾತ್ರಿಪಡಿಸಿಕೊಳ್ಳುವುದಕ್ಕಾಗಿ ವಿದ್ಯಾರ್ಥಿಗಳ ಐಡಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಆರೋಪಿಸಿದ್ದಾರೆ. ಇನ್ನು ಎನ್ ಸಿಪಿ (ಎಸ್ ಪಿ) ಶಾಸಕರೊಬ್ಬರು ವಿದ್ಯಾರ್ಥಿಗಳು ತಮ್ಮ ಮೇಲೆ ಒತ್ತಡ ಹೇರುತ್ತಿರುವುದನ್ನು ವಿರೋಧಿಸುತ್ತಿರುವ ವೀಡಿಯೋವನ್ನು ಅಪ್ ಲೋಡ್ ಮಾಡಿದ್ದಾರೆ.

ಸಂಗ್ರಹ ಚಿತ್ರ
ಬಿಜೆಪಿ 2ನೇ ಪಟ್ಟಿಯಲ್ಲಿ ಗಡ್ಕರಿ, ಪಿಯೂಷ್ ಗೋಯಲ್ ಸೇರಿದಂತೆ ಮೂವರು ಮಾಜಿ ಮುಖ್ಯಮಂತ್ರಿಗಳಿಗೆ ಟಿಕೆಟ್

ಠಾಕೂರ್ ಕಾಲೇಜ್ ಆಫ್ ಸೈನ್ಸ್ ಅಂಡ್ ಕಾಮರ್ಸ್, ವಿವಾದದ ಬಳಿಕ ಸ್ಪಷ್ಟನೆ ನೀಡಿದ್ದು, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು, ವಿಶೇಷವಾಗಿ ಮೊದಲ ಬಾರಿಗೆ ಮತದಾರರನ್ನು ಉತ್ತೇಜಿಸಲು ಈವೆಂಟ್ ಉದ್ದೇಶಿಸಿದೆ ಆದರೆ ವಿದ್ಯಾರ್ಥಿಗಳಿಗೆ ಹಾಜರಾಗಲು ಬಲವಂತ ಮಾಡಲಾಗಿರುವ ವಿಷಯವನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಶಿವಸೇನೆ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರ ವಿರುದ್ಧ ಆರೋಪ ಮಾಡಿರುವ ಕಾಲೇಜು, "ರಾಜಕೀಯ ಪ್ರೇರಣೆಯೊಂದಿಗೆ ಸಂವಹನಕ್ಕೆ ಸಂಬಂಧಿಸಿದ ತಿರುಚಿದ ವೀಡಿಯೊವನ್ನು ಪ್ರಸಾರ ಮಾಡಿದ್ದಾರೆ" ಎಂದು ಹೇಳಿದೆ.

ಈ ವಿಷಯವಾಗಿ ಎಕ್ಸ್‌ನಲ್ಲಿನ ತಮ್ಮ ಸಂದೇಶದಲ್ಲಿ ಠಾಕ್ರೆ, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ಘಟನೆ ದೇಶ ಇನ್ನು ಮುಂದೆ ಪ್ರಜಾಪ್ರಭುತ್ವವಾಗಿ ಉಳಿಯಬೇಕೆಂದು ಬಯಸುವುದಿಲ್ಲ ಎಂಬ ಸಂದೇಶವನ್ನು ಜಗತ್ತಿಗೆ ಕಳುಹಿಸುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com