ಮದ್ಯ ಹಗರಣದ ಆರೋಪಿ ಬಸ್ತಾರ್‌ನ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ!

ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಾಜಿ ಅಬಕಾರಿ ಸಚಿವ ಮತ್ತು ಮದ್ಯ ಹಗರಣದ ಆರೋಪಿ ಕವಾಸಿ ಲಖ್ಮಾ ಛತ್ತೀಸ್‌ಗಢದ ಬಸ್ತಾರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.
ಕವಾಸಿ ಲಖ್ಮಾ
ಕವಾಸಿ ಲಖ್ಮಾTNIE
Updated on

ರಾಯ್‌ಪುರ: ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಾಜಿ ಅಬಕಾರಿ ಸಚಿವ ಮತ್ತು ಮದ್ಯ ಹಗರಣದ ಆರೋಪಿ ಕವಾಸಿ ಲಖ್ಮಾ ಛತ್ತೀಸ್‌ಗಢದ ಬಸ್ತಾರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.

ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ ಮದ್ಯ ಹಗರಣ ಪ್ರಕರಣದಲ್ಲಿ ಇತರ 70 ಆರೋಪಿಗಳ ಪೈಕಿ ಲಖ್ಮಾ ಅವರ ಹೆಸರೂ ಸೇರಿದೆ. 2023ರಲ್ಲಿ ಕೊಂಟಾ (ಸುಕ್ಮಾ, ದಕ್ಷಿಣ ಬಸ್ತಾರ್) ವಿಧಾನಸಭೆ ಕ್ಷೇತ್ರದಿಂದ ಸತತ ಆರನೇ ಬಾರಿಗೆ ಗೆದ್ದಿರುವ ಪ್ರಮುಖ ಬುಡಕಟ್ಟು ಮುಖ್ಯಸ್ಥ ಕವಾಸಿ ಲಖ್ಮಾ ಅವರನ್ನು ಬಸ್ತಾರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ನ ಹಾಲಿ ಸಂಸದ ಮತ್ತು ರಾಜ್ಯಾಧ್ಯಕ್ಷ ದೀಪಕ್ ಬೈಜ್ ಅವರ ಬದಲಿಗೆ ಆಯ್ಕೆ ಮಾಡಲಾಗಿದೆ.

ಶನಿವಾರ ತಡರಾತ್ರಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ನಾಲ್ಕನೇ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿದೆ. ಪೂರ್ವ-ಪ್ರಾಬಲ್ಯದ ಬುಡಕಟ್ಟು ಜನಸಂಖ್ಯೆಯನ್ನು ಒಳಗೊಂಡಿರುವ ಮಾವೋವಾದಿ ಪೀಡಿತ ಬಸ್ತಾರ್ ಕ್ಷೇತ್ರಕ್ಕೆ ಏಪ್ರಿಲ್ 19ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ.

ಕವಾಸಿ ಲಖ್ಮಾ
ವಾರಣಾಸಿ: ನರೇಂದ್ರ ಮೋದಿ ವಿರುದ್ಧ 2 ಬಾರಿ ಸೋತಿದ್ದ ಅಭ್ಯರ್ಥಿ ಮೂರನೇ ಬಾರಿಗೂ ಸ್ಪರ್ಧೆ

ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ಲಖ್ಮಾ ವಿರುದ್ಧ ಪ್ರಕರಣ ದಾಖಲಿಸಲು ಇಡಿ ಕಳೆದ ವರ್ಷ ಅರ್ಜಿ ಸಲ್ಲಿಸಿತ್ತು. ಆದರೆ, ಇದೀಗ ಛತ್ತೀಸ್‌ಗಢ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆಪಾದಿತ ಹಗರಣದಲ್ಲಿ ಆರೋಪಿಗಳು ಸುಮಾರು 2,161 ಕೋಟಿ ರೂಪಾಯಿ ಅಕ್ರಮ ಆದಾಯವನ್ನು ಗಳಿಸಿದ್ದಾರೆ ಎಂದು ಅಂದಾಜಿಸಲಾಗಿದೆ.

ಏತನ್ಮಧ್ಯೆ, ಕಾಂಗ್ರೆಸ್ ತನ್ನ ಪಕ್ಷದ ಅಭ್ಯರ್ಥಿ ವಿರುದ್ಧದ ಆರೋಪಗಳನ್ನು ನಿರಾಕರಿಸಿದೆ. ಎಫ್‌ಐಆರ್‌ನಲ್ಲಿ ಮಾಜಿ ಸಚಿವರನ್ನು ಹೆಸರಿಸಿರುವುದು ಲೋಕಸಭೆ ಚುನಾವಣೆಗೆ ಮುನ್ನ ಪಕ್ಷದ ಮಾನಹಾನಿ ಮಾಡುವ ಪ್ರಯತ್ನವಾಗಿದೆ ಎಂದು ಆರೋಪಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com