ಬೆಂಕಿಯಿಂದ ಗಾಯಗೊಂಡ ಅರ್ಚಕರು
ಬೆಂಕಿಯಿಂದ ಗಾಯಗೊಂಡ ಅರ್ಚಕರು

ದೇಶಾದ್ಯಂತ ಹೋಳಿ ಸಂಭ್ರಮಾಚರಣೆ: ಉಜ್ಜಯಿನಿ ಮಹಾಕಾಳೇಶ್ವರ ದೇವಾಲಯದ ಗರ್ಭಗೃಹದಲ್ಲಿ ಬೆಂಕಿ, 14 ಅರ್ಚಕರಿಗೆ ಗಾಯ

ದೇಶಾದ್ಯಂತ ಸಡಗರ-ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಬಣ್ಣಗಳ ಹಬ್ಬ ಎಂದೂ ಕರೆಯಲ್ಪಡುವ ಹೋಳಿಯು ವಸಂತಕಾಲದ ಆಗಮನ ಮತ್ತು ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ. ಬೆಳಗ್ಗೆಯಿಂದಲೇ ದೇವಾಲಯಗಳಿಗೆ ಆಗಮಿಸುತ್ತಿರುವ ಜನರು, ದೇವರ ದರ್ಶನ ಪಡೆದು, ಪರಸ್ಪರ ಬಣ್ಣ ಎರಚುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
Published on

ಉಜ್ಜಯಿನಿ: ದೇಶಾದ್ಯಂತ ಸಡಗರ-ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಬಣ್ಣಗಳ ಹಬ್ಬ ಎಂದೂ ಕರೆಯಲ್ಪಡುವ ಹೋಳಿಯು ವಸಂತಕಾಲದ ಆಗಮನ ಮತ್ತು ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ. ಬೆಳಗ್ಗೆಯಿಂದಲೇ ದೇವಾಲಯಗಳಿಗೆ ಆಗಮಿಸುತ್ತಿರುವ ಜನರು, ದೇವರ ದರ್ಶನ ಪಡೆದು, ಪರಸ್ಪರ ಬಣ್ಣ ಎರಚುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.

ಬೆಂಕಿಯಿಂದ ಗಾಯಗೊಂಡ ಅರ್ಚಕರು
ಉತ್ತರಪ್ರದೇಶದಲ್ಲಿ ಕಟ್ಟೆಚ್ಚರ: ಹೋಳಿ ಹಿನ್ನಲೆ ಅಲಿಘರ್‌ನಲ್ಲಿ ಮಸೀದಿಗಳನ್ನು ಕಪ್ಪು ಟಾರ್ಪಾಲ್‌ನಿಂದ ಮುಚ್ಚಲಾಗಿದೆ, ವಿಡಿಯೋ!

ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಜಾರ್ಖಂಡ್ ನ ಬೈದನಾಥ ದೇವಾಲಯ, ಕೊಲ್ಲಂನ ಚವಾರದಲ್ಲಿರುವ ಕೊಟ್ಟಂಕುಳಂಗರ ದೇವಿ ದೇವಸ್ಥಾನ ಸೇರಿದಂತೆ ದೇಶದ ಹಲವೆಡೆ ದೇವಾಲಯಗಳು ಜನರಿಂದ ತುಂಬಿ ತುಳುಕುತ್ತಿದ್ದು, ವಿಶೇಷ ಪ್ರಾರ್ಥನೆ, ಪೂಜಾ ಕೈಂಕರ್ಯಗಳು ನೆರವೇರುತ್ತಿವೆ.

ಈ ನಡುವೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಅವಘಡವೊಂದು ಸಂಭವಿಸಿದೆ. ಮಹಾಕಾಳೇಶ್ವರ ದೇವಾಲಯದ ಗರ್ಭಗೃಹದಲ್ಲಿ ಕಾಣಿಸಿಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಭಸ್ಮಾರತಿ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 14 ಅರ್ಚಕರು ಗಾಯಗೊಂಡಿದ್ದಾರೆ. ಅವರೆಲ್ಲರನ್ನೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗುಲಾಲ್’ನಿಂದಾಗಿ ‘ಗರ್ಭಗೃಹ’ದಲ್ಲಿ ಬೆಂಕಿ ಸಂಭವಿಸಿದ್ದು, ಗಾಯಾಳುಗಳನ್ನು ಉಜ್ಜಯಿನಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೇವಾಲಯದ ಆರ್ಚಕ ಅಶಿಶ್ ಶರ್ಮಾ ತಿಳಿಸಿದರು.

ದೇವಾಲಯದ ಗರ್ಭಗೃಹದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 14 ಆರ್ಚಕರಿಗೆ ಸುಟ್ಟ ಗಾಯಗಳಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ ಎಂದು ಉಜ್ಜಯಿನಿ ಕಲೆಕ್ಟರ್ ನೀರಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಹೋಳಿ ಹಬ್ಬದ ಸಂದರ್ಭದಲ್ಲಿ ಗುಲಾಲ್ ಎಸೆಯುವ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com