ಹೊಸ ಮನೆ ಕಟ್ಟುವ ಆಸೆ: 23 ಲಕ್ಷ ರೂ. ಹಣಕ್ಕಾಗಿ ವಿದ್ಯಾರ್ಥಿ ಅಪಹರಿಸಿ ಕೊಲೆ!

ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದ ವಿದ್ಯಾರ್ಥಿಯನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬಯಿ: ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದ ವಿದ್ಯಾರ್ಥಿಯನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಪ್ರಕರಣದ ಪ್ರಮುಖ ಆರೋಪಿ ಸಲ್ಮಾನ್‌ ಮೌಲ್ವಿ ಎಂದು ತಿಳಿದುಬಂದಿದೆ. ಈತ ಹೊಸ ಮನೆ ಕಟ್ಟಲು ಯೋಜಿಸಿದ್ದ. ಅದಕ್ಕಾಗಿ ಹಣ ಬೇಕಿತ್ತು. ಸಲ್ಮಾನ್ ಮೌಲ್ವಿ ಇದ್ದ ಪ್ರದೇಶದಲ್ಲೇ ವಾಸವಾಗಿದ್ದ ಟೈಲರ್‌ ಸಲ್ಮಾನ್‌ನಿಂದ 23 ಲಕ್ಷ ರೂ. ಸುಲಿಗೆ ಮಾಡುವ ಉದ್ದೇಶದಿಂದ ಆತನ ಮಗನನ್ನು ಅಪಹರಿಸಿದ್ದ.

ಮನೆ ಕಟ್ಟಲು ಹಣಕಾಸಿನ ಅಗತ್ಯತೆಯಿಂದ ಈ ಹೇಯ ಕೃತ್ಯ ನಡೆಸುವ ಉದ್ದೇಶ ಹೊಂದಿದ್ದ. ಸಂಜೆಯ ಪ್ರಾರ್ಥನೆಯ ನಂತರ ಬಾಲಕ ಮನೆಗೆ ಹಿಂದಿರುಗಿರಲಿಲ್ಲ. ಇದರಿಂದ ಅನುಮಾನಗೊಂಡ ಪೋಷಕರು ಹುಡುಕಾಟ ನಡೆಸಿದ್ದರು. ಅದೇ ವೇಳೆಗೆ ನಿಮ್ಮ ಮಗ ಇಬಾದ್‌ ಸುರಕ್ಷಿತವಾಗಿ ಮನೆಗೆ ವಾಪಸ್‌ ಆಗಬೇಕೆಂದರೆ ಹಣ ಕೊಡಬೇಕು ಎಂದು ಬೆದರಿಕೆ ಕರೆ ಬಂದಿತ್ತು.

ಸಾಂದರ್ಭಿಕ ಚಿತ್ರ
Another Indian Dies in US: ವಾಷಿಂಗ್ಟನ್ ನಲ್ಲಿ ಹಲ್ಲೆ ನಡೆಸಿ ಭಾರತೀಯನ ಕೊಲೆ, ವರ್ಷಾರಂಭದಲ್ಲೇ 5 ಮಂದಿ ಸಾವು

ಈ ವಿಚಾರವನ್ನು ಮುದ್ದಾಸಿರ್‌ ಪೊಲೀಸರಿಗೆ ತಿಳಿಸಿದರು. ಸೋಮವಾರ ಮಧ್ಯಾಹ್ನ ಪೊಲೀಸರು ಆರೋಪಿ ಸಲ್ಮಾನ್ ನಿವಾಸದ ಸ್ಥಳವನ್ನು ಪತ್ತೆಹಚ್ಚಿದರು. ಅಷ್ಟೊತ್ತಿಗಾಗಲೇ ಬಾಲಕನ ಹತ್ಯೆಯಾಗಿತ್ತು. ಇಬಾದ್‌ನ ದೇಹವನ್ನು ಗೋಣಿಚೀಲದಲ್ಲಿ ತುಂಬಿ, ಮನೆಯ ಹಿಂದೆ ಮುಚ್ಚಿಡಲಾಗಿತ್ತು.

ಸಲ್ಮಾನ್ ಹಾಗೂ ಸಹೋದರ ಸಫುವಾನ್ ಮೌಲ್ವಿಯನ್ನು ಅಪಹರಣ, ಕೊಲೆಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಎಫ್‌ಐಆರ್ ದಾಖಲಾಗಿದ್ದು, ಸಲ್ಮಾನ್‌ನನ್ನು ಪ್ರಮುಖ ಶಂಕಿತ ಎಂದು ಗುರುತಿಸಲಾಗಿದೆ ಎಂದು ಹಿರಿಯ ಬದ್ಲಾಪುರ ಪೊಲೀಸ್ ಅಧಿಕಾರಿ ಗೋವಿಂದ್ ಪಾಟೀಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com