ಲೋಕಸಭೆ ಚುನಾವಣೆ: ಪಂಜಾಬ್‌ನಲ್ಲಿ ಬಿಜೆಪಿ ಏಕಾಂಗಿ ಸ್ಪರ್ಧೆ, ಎಸ್‌ಎಡಿ ಜೊತೆ ಮೈತ್ರಿ ಇಲ್ಲ

ಮುಂಬರುವ ಲೋಕಸಭೆ ಚುನಾವಣೆಗೆ ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿದಳ(ಎಸ್‌ಎಡಿ) ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಕೇಸರಿ ಪಕ್ಷ ಮಂಗಳವಾರ ಘೋಷಿಸಿದೆ.
ಸುನಿಲ್ ಜಾಖರ್
ಸುನಿಲ್ ಜಾಖರ್

ಚಂಡೀಗಢ: ಮುಂಬರುವ ಲೋಕಸಭೆ ಚುನಾವಣೆಗೆ ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿದಳ(ಎಸ್‌ಎಡಿ) ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಕೇಸರಿ ಪಕ್ಷ ಮಂಗಳವಾರ ಘೋಷಿಸಿದೆ.

ಪಂಜಾಬ್‌ನಲ್ಲಿ ಏಕಾಂಗಿಯಾಗಿ ಲೋಕಸಭೆ ಚುನಾವಣೆ ಎದುರಿಸುವ ಪಕ್ಷದ ನಿರ್ಧಾರವನ್ನು ಪಂಜಾಬ್ ಬಿಜೆಪಿ ಅಧ್ಯಕ್ಷ ಸುನಿಲ್ ಜಾಖರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೊ ಹೇಳಿಕೆ ಮೂಲಕ ಪ್ರಕಟಿಸಿದ್ದಾರೆ.

"ಜನರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿದ ನಂತರ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಈ ನಿರ್ಧಾರವು ಪಂಜಾಬ್‌ನ ಯುವಕರು, ರೈತರು, ವ್ಯಾಪಾರಿಗಳು ಮತ್ತು ಹಿಂದುಳಿದ ವರ್ಗಗಳ ಉಜ್ವಲ ಭವಿಷ್ಯದ ಗುರಿಯನ್ನು ಹೊಂದಿದೆ ಎಂದು ಜಾಖರ್ ಹೇಳಿದ್ದಾರೆ.

ಸುನಿಲ್ ಜಾಖರ್
ಲೋಕಸಭೆ ಚುನಾವಣೆ: ಪಂಜಾಬ್ ಮಾಜಿ ಸಿಎಂ ಅಮರೀಂದರ್ ಸಿಂಗ್ ಪತ್ನಿ ಬಿಜೆಪಿ ಸೇರ್ಪಡೆ

ರಾಜ್ಯದ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಮತ್ತು ಜೂನ್ 1 ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂದು ನನಗೆ ಖಾತ್ರಿಯಿದೆ'' ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಕರ್ತಾರ್‌ಪುರ ಕಾರಿಡಾರ್ ತೆರೆಯುವ ಮೂಲಕ ಗಡಿಯಾಚೆಗಿನ ಕರ್ತಾರ್‌ಪುರ ದೇಗುಲಕ್ಕೆ ಭೇಟಿ ನೀಡುವ ಸಿಖ್ಖರ ಶತಮಾನಗಳ ಹಳೆಯ ಕನಸು ನನಸು ಮಾಡಲಾಯಿತು ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com