ಜೈಲಿನಲ್ಲಿದ್ದ ಗ್ಯಾಂಗ್‏ಸ್ಟರ್, ರಾಜಕಾರಣಿ ಮುಕ್ತಾರ್ ಅನ್ಸಾರಿ ನಿಧನ

ಜೈಲಿನಲ್ಲಿದ್ದ ಗ್ಯಾಂಗ್‏ಸ್ಟರ್, ರಾಜಕಾರಣಿ ಮುಕ್ತಾರ್ ಅನ್ಸಾರಿ ಹೃದಯಾಘಾತದಿಂದ ಇಂದು ನಿಧನರಾದರು.
ಜೈಲಿನಲ್ಲಿದ್ದ ಗ್ಯಾಂಗ್‏ಸ್ಟರ್, ರಾಜಕಾರಣಿ ಮುಕ್ತಾರ್ ಅನ್ಸಾರಿ ನಿಧನ

ಲಖನೌ: ಜೈಲಿನಲ್ಲಿದ್ದ ಗ್ಯಾಂಗ್‏ಸ್ಟರ್, ರಾಜಕಾರಣಿ ಮುಕ್ತಾರ್ ಅನ್ಸಾರಿ ಹೃದಯಾಘಾತದಿಂದ ಇಂದು ನಿಧನರಾದರು. ಬಾಂದ ಜೈಲಿನಲ್ಲಿದ್ದ ಅನ್ಸಾರಿಗೆ ಹೃದಯಾಘಾತ ಉಂಟಾಗಿ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅನ್ಸಾರಿ ನಿಧನದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಲಖನೌ, ಘಾಜಿಪುರ, ವಾರಣಾಸಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಎರಡು ದಿನಗಳಲ್ಲಿ ಇದು ಎರಡನೇ ಬಾರಿಗೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಮಂಗಳವಾರ, 60 ವರ್ಷದ ಅನ್ಸಾರಿ ಅವರು ಹೊಟ್ಟೆ ನೋವಿನಿಂದ ಬಳಲಿದ್ದ ಕಾರಣ ಬಾಂದದಲ್ಲಿ ಸುಮಾರು 14 ಗಂಟೆಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು. ಆದಾಗ್ಯೂ, ನಂತರ ಅವರನ್ನು ಬಿಡುಗಡೆ ಮಾಡಲಾಯಿತು ಮತ್ತು ಜೈಲು ಆಡಳಿತ ಅವರನ್ನು ಮತ್ತೆ ಜೈಲಿಗೆ ಕರೆದೊಯ್ಯಿತು.

ಜೈಲಿನಲ್ಲಿದ್ದ ಗ್ಯಾಂಗ್‏ಸ್ಟರ್, ರಾಜಕಾರಣಿ ಮುಕ್ತಾರ್ ಅನ್ಸಾರಿ ನಿಧನ
2009ರ ಕೊಲೆ ಯತ್ನ ಪ್ರಕರಣ: ಮುಕ್ತಾರ್ ಅನ್ಸಾರಿ ಖುಲಾಸೆಗೊಳಿಸಿದ ಕೋರ್ಟ್

ಈ ಹಿಂದೆ, ಅವರ ಸಹೋದರ ಮತ್ತು ಗಾಜಿಪುರ ಸಂಸದ ಅಫ್ಜಲ್ ಅನ್ಸಾರಿ ಅವರಿಗೆ ಜೈಲಿನಲ್ಲಿ ವಿಷ ನೀಡಲಾಗಿದೆ ಎಂದು ಆರೋಪಿಸಿದ್ದರು. ಮುಖ್ತಾರ್ ಅನ್ಸಾರಿ ಅವರು ಮೌ ಸದರ್ ಕ್ಷೇತ್ರದಿಂದ ಐದು ಬಾರಿ ಮಾಜಿ ಶಾಸಕರಾಗಿದ್ದರು ಮತ್ತು 2005 ರಿಂದ ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಜೈಲಿನಲ್ಲಿದ್ದರು. ಅವರ ವಿರುದ್ಧ 60 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿವೆ. ಯುಪಿಯ ವಿವಿಧ ನ್ಯಾಯಾಲಯಗಳಿಂದ ಸೆಪ್ಟೆಂಬರ್ 2022 ರಿಂದ ಎಂಟು ಪ್ರಕರಣಗಳಲ್ಲಿ ಆತನಿಗೆ ಶಿಕ್ಷೆ ವಿಧಿಸಲಾಗಿದೆ ಮತ್ತು ಬಾಂದ ಜೈಲಿನಲ್ಲಿ ಇರಿಸಲಾಗಿತ್ತು.

ಅನ್ಸಾರಿ ನಿಧನದ ಹಿನ್ನೆಲೆಯಲ್ಲಿ ಪ್ರಗಾತ್ ರಾಜ್, ಮೌ ಗಳಲ್ಲಿ ಸೆಕ್ಷನ್ 144 ನ್ನು ಜಾರಿಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com