ಕಾಂಗ್ರೆಸ್ ಗೆ ಶಾಕ್ ಮೇಲೆ ಶಾಕ್: ಮತ್ತೆ ಐಟಿ ನೋಟಿಸ್, 1,745 ಕೋಟಿ ರೂ. ಡಿಮ್ಯಾಂಡ್!

ಕಾಂಗ್ರೆಸ್ ಗೆ ಆದಾಯ ತೆರಿಗೆ ಇಲಾಖೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. 1,800 ಕೋಟಿ ರೂಪಾಯಿಗೂ ಹೆಚ್ಚು ತೆರಿಗೆ ನೋಟಿಸ್ ಬೆನ್ನಲ್ಲೇ ಮತ್ತೆ ಹೊಸ ನೋಟಿಸ್ ನೀಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕಾಂಗ್ರೆಸ್ ಗೆ ಆದಾಯ ತೆರಿಗೆ ಇಲಾಖೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. 1,800 ಕೋಟಿ ರೂಪಾಯಿಗೂ ಹೆಚ್ಚು ತೆರಿಗೆ ನೋಟಿಸ್ ಬೆನ್ನಲ್ಲೇ ಮತ್ತೆ ಹೊಸ ನೋಟಿಸ್ ನೀಡಲಾಗಿದೆ. 2014-15 ರಿಂದ 2016-17ರವರೆಗಿನ ಆರ್ಥಿಕ ವರ್ಷಗಳಿಗೆ ಸಂಬಂಧಿಸಿದಂತೆ 1,745 ಕೋಟಿ ರೂಪಾಯಿ ತೆರಿಗೆ ಪಾವತಿಗೆ ನೋಟಿಸ್ ಬಂದಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ. ಇದರೊಂದಿಗೆ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷದಿಂದ ಒಟ್ಟು 3,567 ಕೋಟಿ ರೂ. ತೆರಿಗೆ ಪಾವತಿಸುವಂತೆ ಡಿಮ್ಯಾಂಡ್ ಮಾಡಿದೆ.

ಮೂಲಗಳ ಪ್ರಕಾರ ಹೊಸ ನೋಟಿಸ್ ಗಳು 2014-15 (ರೂ. 663 ಕೋಟಿ), 2015-16 (ಸುಮಾರು ರೂ. 664 ಕೋಟಿ) ಮತ್ತು 2016-17 (ಸುಮಾರು ರೂ. 417 ಕೋಟಿ) ಗೆ ಸಂಬಂಧಿಸಿವೆ. ರಾಜಕೀಯ ಪಕ್ಷಗಳಿಗೆ ಲಭ್ಯವಿರುವ ತೆರಿಗೆ ವಿನಾಯಿತಿಯನ್ನು ಕೊನೆಗೊಳಿಸಲಾಗಿದ್ದು, ಸಂಪೂರ್ಣ ಸಂಗ್ರಹಕ್ಕಾಗಿ ತೆರಿಗೆ ವಿಧಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿರುವುದಾಗಿ ತಿಳಿದು ಬಂದಿದೆ.

ಸಾಂದರ್ಭಿಕ ಚಿತ್ರ
ಐಟಿ ಇಲಾಖೆ 1800 ಕೋಟಿ ರೂ. ನೋಟಿಸ್: ಚುನಾವಣೆ ವೇಳೆ ಆರ್ಥಿಕವಾಗಿ ವಿಪಕ್ಷಗಳ ಕತ್ತು ಹಿಸುಕುತ್ತಿದೆ ಬಿಜೆಪಿ; ಕಾಂಗ್ರೆಸ್ ಕಿಡಿ

ಐಟಿ ದಾಳಿ ವೇಳೆ ಕಾಂಗ್ರೆಸ್ ನ ಕೆಲವು ನಾಯಕರಿಂದ ವಶಪಡಿಸಿಕೊಂಡ ಡೈರಿಗಳಲ್ಲಿ ಮಾಡಿದ "ಮೂರನೇ ವ್ಯಕ್ತಿ ನಮೂದು" ಗಳಿಗೂ ತೆರಿಗೆ ವಿಧಿಸಲಾಗಿದೆ ಎನ್ನಲಾಗಿದೆ. ಶುಕ್ರವಾರ ನೀಡಲಾದ ನೋಟಿಸ್ ನಲ್ಲಿ ಸುಮಾರು 1,823 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ಕಾಂಗ್ರೆಸ್ ಪಕ್ಷಕ್ಕೆ ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com