ಅಮಿತ್ ಶಾ ಭಾಷಣದ ವೀಡಿಯೋ ತಿರುಚಿದ ಪ್ರಕರಣ: ಜಾರ್ಖಂಡ್ ಕಾಂಗ್ರೆಸ್ ಎಕ್ಸ್ ಖಾತೆ ಸ್ಥಗಿತ!

ಜಾರ್ಖಂಡ್ ಕಾಂಗ್ರೆಸ್ ನ ಅಧಿಕೃತ ಟ್ವಿಟರ್ ಖಾತೆ ಸ್ಥಗಿತಗೊಂಡಿದೆ.
ಕಾಂಗ್ರೆಸ್ ಖಾತೆ ಸ್ಥಗಿತ
ಕಾಂಗ್ರೆಸ್ ಖಾತೆ ಸ್ಥಗಿತonline desk

ಜಾರ್ಖಂಡ್ ಕಾಂಗ್ರೆಸ್ ನ ಅಧಿಕೃತ ಟ್ವಿಟರ್ ಖಾತೆ ಸ್ಥಗಿತಗೊಂಡಿದೆ. ಅಮಿತ್ ಶಾ ಅವರ ಭಾಷಣದ ವಿಡಿಯೋವನ್ನು ತಿರುಚಿದ್ದ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಟ್ವಿಟ್ ಖಾತೆ ಸ್ಥಗಿತಗೊಳ್ಳುವುದಕ್ಕೂ ಮೊದಲು ಈ ಹ್ಯಾಂಡಲ್ ನಿಂದ ಅಮಿತ್ ಶಾ ಗೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು.

ಒಬಿಸಿ ಹಾಗೂ ಎಸ್ ಸಿ/ ಎಸ್ ಟಿ ಮೀಸಲಾತಿ ರದ್ದುಗೊಳಿಸುತ್ತೇವೆ ಎಂದು ಅಮಿತ್ ಶಾ ಚುನಾವಣಾ ಭಾಷಣದಲ್ಲಿ ಹೇಳಿರುವುದು ವೈರಲ್ ಆಗತೊಡಗಿದೆ" ಎಂದು ಟ್ವೀಟ್ ಖಾತೆಯಲ್ಲಿ ಆರೋಪಿಸಲಾಗಿತ್ತು. ಅಮಿತ್ ಶಾ ಅವರ ಚುನಾವಣಾ ಭಾಷಣವನ್ನು ತಿರುಚಿ ಅದರಲ್ಲಿ ಒಬಿಸಿ ಹಾಗೂ ಎಸ್ ಸಿ/ ಎಸ್ ಟಿ ಮೀಸಲಾತಿ ರದ್ದುಗೊಳಿಸುತ್ತೇವೆ ಎಂದು ಹೇಳಿರುವಂತೆ ಬಿಂಬಿಸಲಾಗಿತ್ತು ಈ ತಿರುಚಿದ್ದ ವೀಡಿಯೋ ವೈರಲ್ ಆಗಿತ್ತು.

ಕಾಂಗ್ರೆಸ್ ಖಾತೆ ಸ್ಥಗಿತ
ಅಮಿತ್ ಶಾ ವಿಡಿಯೋ ತಿರುಚಿದ ಪ್ರಕರಣ: ದೆಹಲಿ ಪೊಲೀಸರಿಂದ ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಮನ್ಸ್

ಮಾರ್ಫ್ ಮಾಡಿದ ವೀಡಿಯೊದಲ್ಲಿ, ಬಿಜೆಪಿ ಮುಸ್ಲಿಂ ಮೀಸಲಾತಿಯನ್ನು ಕೊನೆಗೊಳಿಸುತ್ತದೆ ಎಂದು ಅಮಿತ್ ಶಾ ಹೇಳುತ್ತಿದ್ದಾರೆ ಎಂದು ಬಿಂಬಿಸಲಾಗಿದೆ, ಆದರೆ ವಾಸ್ತವದಲ್ಲಿ ಗೃಹ ಸಚಿವರು ತೆಲಂಗಾಣದಲ್ಲಿ ಮುಸ್ಲಿಮರಿಗೆ ಶೇಕಡಾ 4 ರಷ್ಟು ಅಸಾಂವಿಧಾನಿಕ ಮೀಸಲಾತಿಯನ್ನು ತೆಗೆದುಹಾಕುವ ಬಗ್ಗೆ ಮಾತನಾಡುತ್ತಿದ್ದರು. ಏಪ್ರಿಲ್ 23 ರಂದು ತೆಲಂಗಾಣದ ವಿಜಯ ಸಂಕಲ್ಪ ಸಭೆಯಲ್ಲಿ ಈ ಭಾಷಣವನ್ನು ಮಾಡಿದ್ದರು.

ಗೃಹ ಸಚಿವಾಲಯವು ಮಾರ್ಫ್ ಮಾಡಲಾದ ವೀಡಿಯೊ ಬಗ್ಗೆ ಉಲ್ಲೇಖಿಸುತ್ತಿದ್ದಂತೆಯೇ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಗೆ ನೋಟಿಸ್ ನೀಡಲಾಗಿದೆ. ದೆಹಲಿ ಪೊಲೀಸ್ ವಿಶೇಷ ಕೋಶ ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್ ಅವರಿಗೆ CrPC ಯ ಸೆಕ್ಷನ್ 91 ರ ಅಡಿಯಲ್ಲಿ ನೋಟಿಸ್ ನೀಡಿದೆ, ಜಾರ್ಖಂಡ್ ಕಾಂಗ್ರೆಸ್ X ಹ್ಯಾಂಡಲ್ ಸಹ ವೀಡಿಯೊವನ್ನು ಹಂಚಿಕೊಂಡಿರುವ ಕಾರಣ ಮೇ 2 ರಂದು ಕಚೇರಿಯಲ್ಲಿ ಹಾಜರಾಗುವಂತೆ ಕೇಳಿದೆ.

ದೆಹಲಿ ಪೊಲೀಸರಿಂದ ಸಮನ್ಸ್ ಪಡೆದಿರುವ ರೇವಂತ್ ರೆಡ್ಡಿ ಮತ್ತು ಇತರ ನಾಲ್ವರು ನಾಯಕರ ಕಾನೂನು ಸಲಹೆಗಾರರು ಹಾಜರಾಗಲು ಹೆಚ್ಚಿನ ಸಮಯ ಕೇಳಿದರು. ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ಸಮನ್ಸ್‌ಗಳನ್ನು ಅನುಸರಿಸಲು ತಮ್ಮ ಕಕ್ಷಿದಾರರ ಅಸಮರ್ಥತೆಯನ್ನು ವಕೀಲರು ವ್ಯಕ್ತಪಡಿಸಿದರು.

'ತಿರುಚಿದ' ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಮೊದಲ ವ್ಯಕ್ತಿ ರೀತೋಮ್ ಸಿಂಗ್ ಅವರನ್ನು ಅಸ್ಸಾಂ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com