ಗುಜರಾತ್ ನಲ್ಲಿ ಪಾರ್ಸಲ್ ಬಾಂಬ್ ಗೆ ತಂದೆ ಮಗಳು ಸಾವು!

ಗುಜರಾತ್ ನ ಸಬರ್ಕಾಂತ ಜಿಲ್ಲೆಯಲ್ಲಿ ಬಾರ್ಸಲ್ ಬಾಂಬ್ ಸ್ಫೋಟಗೊಂಡಿದ್ದು ತಂದೆ ಮಗಳು ಸಾವನ್ನಪ್ಪಿದ್ದಾರೆ.
ಪಾರ್ಸಲ್ ಬಾಂಬ್ ಸ್ಫೋಟ
ಪಾರ್ಸಲ್ ಬಾಂಬ್ ಸ್ಫೋಟonline desk

ಅಹ್ಮದಾಬಾದ್: ಗುಜರಾತ್ ನ ಸಬರ್ಕಾಂತ ಜಿಲ್ಲೆಯಲ್ಲಿ ಬಾರ್ಸಲ್ ಬಾಂಬ್ ಸ್ಫೋಟಗೊಂಡಿದ್ದು ತಂದೆ ಮಗಳು ಸಾವನ್ನಪ್ಪಿದ್ದಾರೆ.

ಅಪರಿಚಿತ ವ್ಯಕ್ತಿಯೋರ್ವ ತಂದುಕೊಟ್ಟ ಎಲೆಕ್ಟ್ರಾನಿಕ್ ವಸ್ತು ಸಿಡಿದ ಪರಿಣಾಮ ಈ ಅನಾಹುತ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಪಾರ್ಸಲ್ ಬಾಂಬ್ ಸ್ಫೋಟ
ತಮಿಳುನಾಡಿನ ಕಲ್ಲು ಕ್ವಾರಿಯಲ್ಲಿ ಭಾರೀ ಸ್ಫೋಟ, ಮೂವರ ಸಾವು, ಹಲವರಿಗೆ ಗಾಯ

ಪಾರ್ಸಲ್ ತಂದು ಕೊಟ್ಟ ವ್ಯಕ್ತಿಯ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ. ಎಲೆಕ್ಟ್ರಾನಿಕ್ ವಸ್ತುವನ್ನು ಚಾಲೂ ಮಾಡಿದ ಬೆನ್ನಲ್ಲೇ ಅದು ಸ್ಫೋಟಗೊಂಡಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

ಜಿತು ವಂಝಾರ (33) ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡ ಮೂವರು ಬಾಲಕಿಯರನ್ನು ವಡಾಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮತ್ತು ಅಲ್ಲಿಂದ ಹಿಮತ್‌ನಗರ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಯಲ್ಲಿ ಬಾಲಕಿ ಮೃತಪಟ್ಟಿದ್ದಾರೆ. ಆಕೆಯ ಸಹೋದರಿ ಹಾಗೂ ಸೋದರ ಸಂಬಂಧಿ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡ ಬಾಲಕಿಯರ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ ಎಂದು ಸಹಾಯಕ ನಿವಾಸಿ ವೈದ್ಯಾಧಿಕಾರಿ ವಿಪುಲ್ ಜಾನಿ ತಿಳಿಸಿದ್ದಾರೆ. ಆಟೊರಿಕ್ಷಾದಲ್ಲಿ ಪಾರ್ಸೆಲ್ ತಲುಪಿಸಲಾಗಿದೆ ಎಂದು ಸಂತ್ರಸ್ತರ ಸಂಬಂಧಿಯೊಬ್ಬರು ತಿಳಿಸಿದ್ದಾರೆ. ಕುಟುಂಬವು ವಸ್ತುವನ್ನು ಆರ್ಡರ್ ಮಾಡಿದ್ದರೇ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದುಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com