ರಾಹುಲ್ ಗಾಂಧಿ ಆಸ್ತಿ ಘೋಷಣೆ; 20 ಕೋಟಿ ರೂ. ಮೌಲ್ಯ; ಆದ್ರೂ ಕಾರು, ಮನೆ ಇಲ್ಲ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 4.2 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಸೇರಿದಂತೆ 20 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ರಾಯ್ ಬರೇಲಿ: ಲೋಕಸಭೆ ಚುನಾವಣೆಗೆ ಶುಕ್ರವಾರ ರಾಯ್ ಬರೇಲಿಯಿಂದ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 4.2 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಸೇರಿದಂತೆ 20 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಆದರೆ ಅವರು ಯಾವುದೇ ಮನೆ ಅಥವಾ ಕಾರು ಇಲ್ಲ ಎಂದು ಹೇಳಿದ್ದಾರೆ.

4,33,60,519 ರೂಪಾಯಿ ಮೌಲ್ಯದ ಷೇರುಗಳು ಮತ್ತು 3,81,33,572 ರೂಪಾಯಿಗಳ ಮ್ಯೂಚುವಲ್ ಫಂಡ್‌, 26,25,157 ರೂಪಾಯಿಗಳ ಬ್ಯಾಂಕ್ ಬ್ಯಾಲೆನ್ಸ್ ಮತ್ತು 15,21,740 ರೂಪಾಯಿಗಳ ಚಿನ್ನದ ಬಾಂಡ್‌ಗಳು ಸೇರಿದಂತೆ 9,24,59,264 ರೂಪಾಯಿಗಳ ಚರಾಸ್ತಿ ಇದೆ. ಜೊತೆಗೆ 11,15,02,598 ರೂ. ಮೌಲ್ಯದ ಸ್ಥಿರಾಸ್ತಿ ಘೋಷಿಸಿದ್ದು, ಇವುಗಳಲ್ಲಿ ಪ್ರಸ್ತುತ 9,04,89,000 ಮೌಲ್ಯದ ಸ್ವಯಂ ಆಸ್ತಿಗಳು ಮತ್ತು 2,10,13,598 ಮೌಲ್ಯದ ಪಿತ್ರಾರ್ಜಿತ ಆಸ್ತಿ ಸೇರಿವೆ.

ತಮ್ಮ ಕೈಯಲ್ಲಿ 55,000 ರೂಪಾಯಿ ನಗದು ಮತ್ತು 49,79,184 ರೂಪಾಯಿ ಸಾಲ ಇದೆ. 2022-23ರ ಹಣಕಾಸು ವರ್ಷದ ಪ್ರಕಾರ ವಾರ್ಷಿಕ ಆದಾಯ 1,02,78,680 ರೂ. ಇದೆ ಎಂದು ರಾಹುಲ್ ಗಾಂಧಿ ತಮ್ಮ ನಾಮಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ರಾಹುಲ್ ಗಾಂಧಿ ಯಾವುದೇ ವಸತಿ ಅಪಾರ್ಟ್ಮೆಂಟ್ ಮತ್ತು ಕಾರು ಹೊಂದಿಲ್ಲ.

ರಾಹುಲ್ ಗಾಂಧಿ
LokSabha Election 2024: ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ; ಸೋನಿಯಾ, ಖರ್ಗೆ ಉಪಸ್ಥಿತಿ!

ಸ್ಥಿರ ಆಸ್ತಿಗಳಲ್ಲಿ ದೆಹಲಿಯ ಮೆಹ್ರೌಲಿ ಗ್ರಾಮದ ಸುಲ್ತಾನ್‌ಪುರದಲ್ಲಿ ಸುಮಾರು 3.778 ಎಕರೆ ವಿಸ್ತೀರ್ಣದ ಕೃಷಿ ಭೂಮಿಯನ್ನು ಅವರು ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಜಂಟಿಯಾಗಿ ಹೊಂದಿದ್ದಾರೆ ಮತ್ತು ಗುರುಗ್ರಾಮ್‌ನ ಸಿಗ್ನೇಚರ್ ಟವರ್ಸ್‌ನಲ್ಲಿರುವ 5,838 ಚದರ ಅಡಿ ಅಳತೆಯ ವಾಣಿಜ್ಯ ಅಪಾರ್ಟ್‌ಮೆಂಟ್‌ಗಳು(ಕಚೇರಿ ಸ್ಥಳ) ಸೇರಿವೆ. ಈ ಎರಡು ವಾಣಿಜ್ಯ ಅಪಾರ್ಟ್‌ಮೆಂಟ್‌ಗಳು ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು 9.05 ಕೋಟಿ ರೂ. ಎಂದು ತಿಳಿಸಿದ್ದಾರೆ.

ನಾಮಪತ್ರದ ಪ್ರಕಾರ, ರಾಹುಲ್ ಗಾಂಧಿ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನಿಂದ ಎಂಫಿಲ್ ಪದವಿ ಪಡೆದಿದ್ದು, ಫ್ಲೋರಿಡಾದ ರೋಲಿನ್ಸ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com