ಅಮಿತ್ ಶಾ ಪುತ್ರನಿಗೆ ಬ್ಯಾಟ್ ಹಿಡಿಯುವುದು ಗೊತ್ತಿದೆಯೇ? AAP ಸಂಸದ ಸಂಜಯ್ ಸಿಂಗ್ ಪ್ರಶ್ನೆ; ವಿಡಿಯೋ

ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ರಿಕೆಟ್ ಆಟಗಾರ ಅಲ್ಲದಿದ್ದರೂ ಅವರು ಬಿಸಿಸಿಐ ಅಧ್ಯಕ್ಷರಾಗಿರುವುದನ್ನು ಹಲವರು ಆಗಾಗ್ಗೆ ಪ್ರಶ್ನಿಸುತ್ತಲೇ ಇದ್ದಾರೆ. ಇದೀಗ ಎಎಪಿ ಸಂಸದ ಸಂಜಯ್ ಸಿಂಗ್ ಕೂಡಾ ಜಯ್ ಶಾ ಹುದ್ದೆ ಕುರಿತು ಪ್ರಶ್ನಿಸಿದ್ದಾರೆ.
ಸಂಜಯ್ ಸಿಂಗ್
ಸಂಜಯ್ ಸಿಂಗ್

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ರಿಕೆಟ್ ಆಟಗಾರ ಅಲ್ಲದಿದ್ದರೂ ಅವರು ಬಿಸಿಸಿಐ ಅಧ್ಯಕ್ಷರಾಗಿರುವುದನ್ನು ಹಲವರು ಆಗಾಗ್ಗೆ ಪ್ರಶ್ನಿಸುತ್ತಲೇ ಇದ್ದಾರೆ. ಇದೀಗ ಎಎಪಿ ಸಂಸದ ಸಂಜಯ್ ಸಿಂಗ್ ಕೂಡಾ ಜಯ್ ಶಾ ಹುದ್ದೆ ಕುರಿತು ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅಮಿತ್ ಶಾ ಅವರ ಮಗನಿಗೆ ಬ್ಯಾಟ್ ಹಿಡಿಯುವುದು ತಿಳಿದಿದೆಯೇ? ಆದರೆ, ಅವರು ಬಿಸಿಸಿಐ ಅಧ್ಯಕ್ಷರಾಗಿದ್ದಾರೆ ಎಂದು ಕಿಡಿಕಾರಿದರು. 73ನೇ ವಯಸ್ಸಿನಲ್ಲಿ ಪ್ರಧಾನಿ ಮೋದಿ ದೇಶದ ಪ್ರಧಾನಿಯಾಗಲು ಬಯಸಿದ್ದಾರೆ. ಜವಾನ್ ರೊಬ್ಬರು 21ನೇ ವಯಸ್ಸಿನಲ್ಲಿ ನಿವೃತ್ತಿಯಾಗುತ್ತಾರೆ? ಎಂದು ಪ್ರಶ್ನಿಸಿದ ಅವರು, ಇವರೆಲ್ಲರೂ 'ಘೋರ್ ಪರಿವಾರವಾದಿಗಳು' ಎಂದರು.

ಸಂಜಯ್ ಸಿಂಗ್
3ನೇ ಬಾರಿಗೆ ಎಸಿಸಿ ಅಧ್ಯಕ್ಷರಾಗಿ BCCI ಕಾರ್ಯದರ್ಶಿ ಜಯ್ ಶಾ ಆಯ್ಕೆ

ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಬಿಜೆಪಿಗೆ ಅವರ ಕುಟುಂಬ ಮತ್ತು ಸ್ನೇಹಿತರನ್ನು ಬೆಳೆಸಲು ನೆರವಾಗುವುದು ಹೊರತುಪಡಿಸಿ ಬೇರೆ ಯಾವುದೇ ಕೆಲಸವಿಲ್ಲ. ನಾವು ದೇಶಕ್ಕಾಗಿ ಕೆಲಸ ಮಾಡುತ್ತಿದ್ದೇವೆ, ಆದರೆ ಅವರು ತಮ್ಮ ಸ್ನೇಹಿತರಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com