ಮುಸ್ಲಿಂ ಮೀಸಲಾತಿ ಕುರಿತ ಬಿಜೆಪಿಯ ಅನಿಮೇಟೆಡ್ ವಿಡಿಯೋ 'ತಕ್ಷಣ' ತೆಗೆದುಹಾಕಿ: X ಗೆ ಚುನಾವಣಾ ಆಯೋಗ ಆದೇಶ

ಬಿಜೆಪಿ ಕರ್ನಾಟಕ ಘಟಕ ಹಂಚಿಕೊಂಡಿರುವ ಅನಿಮೇಟೆಡ್ ಕಾರ್ಟೂನ್ ವಿಡಿಯೋವನ್ನು 'ತಕ್ಷಣ' ತೆಗೆದುಹಾಕುವಂತೆ ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್' ಗೆ ನಿರ್ದೇಶನ ನೀಡಿದೆ.
ಅನಿಮೇಟೆಡ್ ಕಾರ್ಟೂನ್
ಅನಿಮೇಟೆಡ್ ಕಾರ್ಟೂನ್

ನವದೆಹಲಿ: ಮುಸ್ಲಿಂ ಸಮುದಾಯದ ಮೀಸಲಾತಿಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಕರ್ನಾಟಕ ಘಟಕ ಹಂಚಿಕೊಂಡಿರುವ ಅನಿಮೇಟೆಡ್ ಕಾರ್ಟೂನ್ ವಿಡಿಯೋವನ್ನು 'ತಕ್ಷಣ' ತೆಗೆದುಹಾಕುವಂತೆ ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್' ಗೆ ನಿರ್ದೇಶನ ನೀಡಿದೆ.

ಈ ಸಂಬಂಧ 'X' ನ ನೋಡಲ್ ಅಧಿಕಾರಿಗೆ ಬರೆದ ಪತ್ರದಲ್ಲಿ, ಕರ್ನಾಟಕ ಬಿಜೆಪಿ ಘಟಕ ಮಾಡಿರುವ ಪೋಸ್ಟ್ ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟನ್ನು ಉಲ್ಲಂಘಿಸುತ್ತದೆ. ಆದ್ದರಿಂದ ಈ ಪೋಸ್ಟ್ ಅನ್ನು ತಕ್ಷಣ ತೆಗೆದುಹಾಕುವಂತೆ ಚುನಾವಣಾ ಆಯೋಗ, ಎಕ್ಸ್ ಗೆ ನಿರ್ದೇಶನ ನೀಡಿದೆ.

ಪತ್ರದ ಜೊತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ ಈಗಾಗಲೇ ದಾಖಲಾಗಿರುವ ಎಫ್ಐಆರ್ ಪ್ರತಿಯನ್ನು ಸಹ ಚುನಾವಣಾ ಆಯೋಗ ಲಗತ್ತಿಸಿದೆ.

ಅನಿಮೇಟೆಡ್ ಕಾರ್ಟೂನ್
ಮೀಸಲಾತಿ ಕುರಿತು ವೀಡಿಯೋ ಪೋಸ್ಟ್: ಜೆಪಿ ನಡ್ಡಾ, ಅಮಿತ್ ಮಾಳವೀಯಾ, ವಿಜಯೇಂದ್ರ ವಿರುದ್ಧ FIR!

ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಈ ಸಂಬಂಧ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಐಟಿ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ಪ್ರಕಾರ ಆಕ್ಷೇಪಾರ್ಹ ಪೋಸ್ಟ್ ಅನ್ನು ತೆಗೆದುಹಾಕಲು ಮೇ 5 ರಂದು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗಳು 'ಎಕ್ಸ್' ಗೆ ನಿರ್ದೇಶನ ನೀಡಿದ್ದಾರೆ. ಆದಾಗ್ಯೂ ಆ ಪೋಸ್ಟ್ ಅನ್ನು ಇನ್ನೂ ತೆಗೆದು ಹಾಕಿಲ್ಲ. ಆ ಪೋಸ್ಟ್ ಅನ್ನು ತಕ್ಷಣವೇ ತೆಗೆದುಹಾಕಲು ನಿರ್ದೇಶಿಸಲಾಗಿದೆ" ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

ಕರ್ನಾಟಕದ ಉಳಿದ 14 ಲೋಕಸಭಾ ಸ್ಥಾನಗಳಲ್ಲಿ ಮತದಾನ ನಡೆಯುತ್ತಿರುವ ದಿನವೇ 'X' ಗೆ ಚುನಾವಣಾ ಆಯೋಗ ಈಗ ಹೊಸ ನಿರ್ದೇಶನ ನೀಡಿದೆ.

ಬಿಜೆಪಿಯು ಮುಸ್ಲಿಂ ಮತ್ತು ಎಸ್‌ಸಿ/ಎಸ್‌ಟಿ ಸಮುದಾಯಗಳ ನಡುವೆ ದ್ವೇಷ ಉತ್ತೇಜಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ಕಾಂಗ್ರೆಸ್, ಅನಿಮೇಟೆಡ್ ಕಾರ್ಟೂನ್ ವಿಡಿಯೋ ವಿರುದ್ಧ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com