ಸ್ಯಾಮ್ ಪಿತ್ರೋಡಾ ಜನಾಂಗೀಯ ಹೇಳಿಕೆ ಸಂಪೂರ್ಣ ತಪ್ಪಲ್ಲ: ಮೈತ್ರಿ ತೊರೆಯುವ ಪ್ರಧಾನಿ ಸವಾಲಿಗೆ ಡಿಎಂಕೆ ಪ್ರತಿಕ್ರಿಯೆ!

ಕಾಂಗ್ರೆಸ್ ನ ನಾಯಕ ಸ್ಯಾಮ್ ಪಿತ್ರೋಡಾ ಭಾರತದ ವಿವಿಧ ಪ್ರಾಂತ್ಯಗಳ ಜನರ ಲಕ್ಷಣಗಳ ಬಗ್ಗೆ ಜನಾಂಗೀಯ ಹೇಳಿಕೆ ಕುರಿತು ದೇಶಾದ್ಯಂತ ಆಕ್ಷೇಪ ವ್ಯಕ್ತವಾಗುತ್ತಿದೆ.
ಡಿಎಂಕೆ ನಾಯಕ ಸ್ಟ್ಯಾಲಿನ್-ಪ್ರಧಾನಿ ಮೋದಿ
ಡಿಎಂಕೆ ನಾಯಕ ಸ್ಟ್ಯಾಲಿನ್-ಪ್ರಧಾನಿ ಮೋದಿonline desk

ಚೆನ್ನೈ: ಕಾಂಗ್ರೆಸ್ ನ ನಾಯಕ ಸ್ಯಾಮ್ ಪಿತ್ರೋಡಾ ಭಾರತದ ವಿವಿಧ ಪ್ರಾಂತ್ಯಗಳ ಜನರ ಲಕ್ಷಣಗಳ ಬಗ್ಗೆ ಜನಾಂಗೀಯ ಹೇಳಿಕೆ ಕುರಿತು ದೇಶಾದ್ಯಂತ ಆಕ್ಷೇಪ ವ್ಯಕ್ತವಾಗುತ್ತಿದೆ.

ಈ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡ ನಂತರ ಇತ್ತೀಚಿನ ಮಾಹಿತಿಯ ಪ್ರಕಾರ ಸ್ಯಾಮ್ ಪಿತ್ರೋಡಾ ಕಾಂಗ್ರೆಸ್ ನಲ್ಲಿದ್ದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಸ್ಯಾಮ್ ಪಿತ್ರೋಡಾ ಹೇಳಿಕೆಯನ್ನು ಕಾಂಗ್ರೆಸ್ ಸೇರಿದಂತೆ ತಮ್ಮ ರಾಜಕೀಯ ವಿರೋಧಿಗಳನ್ನು ಟೀಕಿಸುವುದಕ್ಕೆ ಬಳಸಿಕೊಂಡ ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ ಕಾಣುತ್ತಾರೆ ಎಂಬ ಪಿತ್ರೋಡಾ ಹೇಳಿಕೆಯನ್ನು ಉಲ್ಲೇಖಿಸಿ, ಕಾಂಗ್ರೆಸ್ ನ ನಾಯಕ ಇಂತಹ ಹೇಳಿಕೆ ನೀಡಿದ್ದಾರೆ. ಭಾರತದ ದಕ್ಷಿಣ ಸಂಸ್ಕೃತಿಯನ್ನು ಗೌರವಿಸುವ ಸಲುವಾಗಿ ಡಿಎಂಕೆ ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಮುರಿದುಕೊಳ್ಳುತ್ತೀರಾ? ಎಂದು ಸವಾಲು ಹಾಕಿದ್ದರು ಅಲ್ಲದೇ ಇಂತಹ ಹೇಳಿಕೆಗಳನ್ನು ಸಮರ್ಥಿಸುತ್ತೀರಾ? ಎಂದು ಭಾರತದ ದಕ್ಷಿಣ ಪ್ರದೇಶಗಳ ಸಿಎಂ ಗಳನ್ನು ಪ್ರಶ್ನಿಸಿದ್ದರು.

ಡಿಎಂಕೆ ನಾಯಕ ಸ್ಟ್ಯಾಲಿನ್-ಪ್ರಧಾನಿ ಮೋದಿ
ಭಾರತದ ಪೂರ್ವದಲ್ಲಿರುವವರು ಚೀನೀಯರಂತೆ, ದಕ್ಷಿಣದವರು ಆಫ್ರಿಕನ್ನರಂತೆ ಕಾಣ್ತಾರೆ: ಸ್ಯಾಮ್​ ಪಿತ್ರೋಡಾ ಹೇಳಿಕೆಗೆ ಭಾರಿ ಆಕ್ರೋಶ

ಪ್ರಧಾನಿಯ ಈ ಹೇಳಿಕೆಗೆ ಡಿಎಂಕೆ ಅತ್ಯಂತ ಜಾಗರೂಕ ಪ್ರತಿಕ್ರಿಯೆ ನೀಡಿದ್ದು, ಪಿತ್ರೋಡಾ ಹೇಳಿಕೆ ಸ್ವೀಕಾರಾರ್ಹವಾದುದ್ದಲ್ಲ, ಆದರೆ ಅವರ ಹೇಳಿಕೆ ಸಂಪೂರ್ಣ ತಪ್ಪೂ ಅಲ್ಲ ಎಂದು ಡಿಎಂಕೆ ಹೇಳಿದೆ. ಈ ಹಿಂದೆ ಬಿಜೆಪಿ ಸಹ ಇದೇ ಮಾದರಿಯಲ್ಲಿ ಹೇಳಿಕೆ ನೀಡಿದ್ದಾಗ ಪ್ರಧಾನಿ ಮೋದಿ ಮೌನ ವಹಿಸಿದ್ದರು ಎಂದು ಡಿಎಂಕೆ ಹೇಳಿದೆ.

ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್ ಉತ್ತರಾಧಿಕಾರ ತೆರಿಗೆಯಂತಹ ಹೇಳಿಕೆಗಳಿಂದ ತೀವ್ರ ಮುಜುಗರ ಎದುರಿಸಿದ್ದ ಬೆನ್ನಲ್ಲೇ ಸ್ಯಾಮ್ ಪಿತ್ರೋಡಾ ಭಾರತೀಯರ ಬಗ್ಗೆ ಜನಾಂಗೀಯ ಹೇಳಿಕೆ ನೀಡಿದ್ದಾರೆ.

ಸ್ಯಾಮ್ ಪಿತ್ರೋಡಾ ಅವರ ಹೇಳಿಕೆಗಳು ಸ್ವೀಕಾರಾರ್ಹವಲ್ಲ. ಆದರೆ ವೈವಿಧ್ಯತೆಗೆ ಸಂಬಂಧಿಸಿದಂತೆ ಅವರ ಮೂಲ ಪರಿಕಲ್ಪನೆಯೂ ತಪ್ಪಲ್ಲ, ವಿವಿಧ ಜನಾಂಗಗಳು ಸೇರಿ ಭಾರತ ಆಗಿದೆ ಎಂಬುದು ವಾಸ್ತವ ಎಂದು ಡಿಎಂಕೆ ವಕ್ತಾರ ಡಾ.ಎಸ್ಎಎಸ್ ಹಫೀಜುಲ್ಲಾ ಹೇಳಿದ್ದು, ಸ್ಯಾಮ್ ಪಿತ್ರೋಡಾ INDIA ಮೈತ್ರಿಕೂಟಕ್ಕೆ ಸಂಬಂಧಿಸಿದಂತೆ ಯಾರೂ ಅಲ್ಲ. ಅವರು ಮೈತ್ರಿಯ ಮೇಲೆ ಯಾವುದೇ ಪರಿಣಾಮವನ್ನೂ ಉಂಟುಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com