ಅರಾಜಕತೆ ಸೃಷ್ಟಿಸುವ ಯತ್ನ: ಮತದಾನ ಪ್ರಮಾಣದ ಬಗ್ಗೆ ಖರ್ಗೆ ಹೇಳಿಕೆಗೆ ಚುನಾವಣಾ ಆಯೋಗ ತರಾಟೆ!

ಲೋಕಸಭಾ ಚುನಾವಣೆ2024 ರ ಮತದಾನಕ್ಕೆ ಅಡ್ಡಿ ಪಡಿಸುವಂತಹ ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಚುನಾವಣಾ ಆಯೋಗ ತರಾಟೆಗೆ ತೆಗೆದುಕೊಂಡಿದೆ.
mallikarjuna Kharge
ಮಲ್ಲಿಕಾರ್ಜುನ ಖರ್ಗೆ
Updated on

ನವದೆಹಲಿ: ಲೋಕಸಭಾ ಚುನಾವಣೆ2024 ರ ಮತದಾನಕ್ಕೆ ಅಡ್ಡಿ ಪಡಿಸುವಂತಹ ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಚುನಾವಣಾ ಆಯೋಗ ತರಾಟೆಗೆ ತೆಗೆದುಕೊಂಡಿದೆ.

ಮತದಾನ ಪ್ರಮಾಣದ ಅಂಕಿ-ಅಂಶಗಳ ಬಗ್ಗೆ ಕಾಂಗ್ರೆಸ್ ಅಧ್ಯಕ್ಷರು ಚುನಾವಣೆ ಪ್ರಕ್ರಿಯೆ ಮಧ್ಯದಲ್ಲಿ ಆಧಾರ ರಹಿತ ಹೇಳಿಕೆ ನೀಡಿದ್ದಾರೆ. ಈ ರೀತಿಯ ಹೇಳಿಕೆಗಳು ಗೊಂದಲ, ಮುಕ್ತ ಮತ್ತು ನ್ಯಾಯಸಮ್ಮತವಾದ ಮತದಾನವನ್ನು ನಡೆಸುವಲ್ಲಿ ತಪ್ಪು ನಿರ್ದೇಶನ ಮತ್ತು ಅಡೆತಡೆಗಳನ್ನು ಉಂಟುಮಾಡಲಿವೆ ಎಂದು ಆಯೋಗ ಹೇಳಿದೆ.

mallikarjuna Kharge
ಚುನಾವಣೆಯಾದ 11 ದಿನಗಳ ನಂತರ ಮತದಾನ ಪ್ರಮಾಣ ಬಿಡುಗಡೆ: ಇಸಿ ವಿಶ್ವಾಸಾರ್ಹತೆ ಬಗ್ಗೆ ಕಪಿಲ್ ಸಿಬಲ್ ಕಳವಳ!

ಇಂತಹ ಹೇಳಿಕೆಗಳು ಮತದಾರರ ಭಾಗವಹಿಸುವಿಕೆಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಮತ್ತು ರಾಜ್ಯಗಳಾದ್ಯಂತ ದೊಡ್ಡ ಚುನಾವಣಾ ವ್ಯವಸ್ಥೆಗಳನ್ನು ನಿರಾಶೆಗೊಳಿಸಬಹುದು ಎಂದು ಆಯೋಗ ಹೇಳಿದೆ.

ಖರ್ಗೆ ಹೇಳಿಕೆಗೆ ತೀಕ್ಷ್ಣ ಎಚ್ಚರಿಕೆ ನೀಡಿರುವ ಆಯೋಗ, ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಗಳು ನೇರ ಚುನಾವಣಾ ಕಾರ್ಯಾಚರಣೆಗಳ ಪ್ರಾಮುಖ್ಯತೆ ಮೇಲೆ ಆಕ್ರಮಣಶೀಲತೆಯಾಗಿದೆ, ಖರ್ಗೆ ಹಾಗೂ ಇತರ INDI ಮೈತ್ರಿಕೂಟದ ನಾಯಕರು ಮತದಾನದ ಪ್ರಮಾಣದ ಬಗ್ಗೆ ನೀಡಿರುವ ಹೇಳಿಕೆಯನ್ನು ಆಯೋಗ ಗಮನಿಸಿದ್ದು, ಇಂತಹ ಹೇಳಿಕೆಗಳು ಅನಪೇಕ್ಷಿತವಾಗಿದೆ ಈ ರೀತಿಯ ಹೇಳಿಕೆಗಳು ಅನುಮಾನಗಳು ಮತ್ತು ಅಸಂಗತತೆಯ ಜೊತೆಗೆ ಅರಾಜಕ ಪರಿಸ್ಥಿತಿಯನ್ನು, ಪಕ್ಷಪಾತದ ನಿರೂಪಣೆಯನ್ನು ಸೃಷ್ಟಿಸಬಹುದು ಎಂದು ಆಯೋಗ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com