
ಲಖನೌ: ಉತ್ತರ ಪ್ರದೇಶದ ಗೋರಖ್ ಪುರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಪಕ್ಷೇತರ ಅಭ್ಯರ್ಥಿ ರಾಜನ್ ಯಾದವ್ ಮಂಗಳವಾರ 'ಚಟ್ಟ'ದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ‘ಆರ್ತಿ ಬಾಬಾ’ ಎಂದೇ ಹೆಸರಾಗಿರುವ ಯಾದವ್,ಎಂಬಿಎ ಮಾಡಿದ್ದರೂ ಈಗ ಬೌದ್ಧ ಸನ್ಯಾಸಿಯಾಗಿದ್ದು, ಭಿಕ್ಷೆಯಿಂದ ಜೀವನ ನಡೆಸುತ್ತಿರುವುದಾಗಿ ಹೇಳುತ್ತಾರೆ.
ಈ ಹಿಂದೆಯೂ ಅವರು ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ತಮ್ಮ ಚುನಾವಣಾ ಕಚೇರಿಯನ್ನು ಸ್ಮಶಾನದ ಮೈದಾನದಲ್ಲಿ ತೆರೆದಿರುವುದಾಗಿ ಹೇಳುವ ಯಾದವ್, ಹೊಸ ಮೋಟಾರು ವಾಹನ ಕಾಯ್ದೆಯಡಿ ವಾಹನ ದಂಡದಂತಹ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ತೆಗೆದುಹಾಕಬೇಕೆಂದು ಬಯಸುತ್ತಾರೆ.
"ನಿರುದ್ಯೋಗಿ ಕಾರ್ಮಿಕರು ಇಷ್ಟು ದೊಡ್ಡ ಮೊತ್ತದ ದಂಡ ಪಾವತಿಸಲು ಹಣ ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸುವ ಯಾದವ್, "ಮೊಬೈಲ್ ಫೋನ್‌ಗಳಲ್ಲಿ ಸ್ಥಗಿತಗೊಂಡಿರುವ ಜೀವಮಾನದ ಒಳಬರುವ ಕರೆಗಳ ಸೌಲಭ್ಯವನ್ನು ಮರುಪ್ರಾರಂಭಿಸಬೇಕು" ಎಂದರು. ದೇಶದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಲು ತನ್ನ ಜೀವನವನ್ನು ಮುಡಿಪಾಗಿಡಲು ಬಯಸಿದ್ದರಿಂದ ಅವಿವಾಹಿತನಾಗಿ ಉಳಿಯಲು ನಿರ್ಧರಿಸಿರುವುದಾಗಿ ಅವರು ಹೇಳಿದರು.
Advertisement