ಈ ಚುನಾವಣೆ ಬಿಜೆಪಿಯ ಸಂತುಷ್ಟಿಕರಣ ನೀತಿ vs INDIA ಬಣದ ತುಷ್ಟೀಕರಣ ರಾಜಕಾರಣದ ನಡುವಿನ ಹೋರಾಟ: ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉತ್ತರ ಪ್ರದೇಶದಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು. ತುಷ್ಟೀಕರಣ ರಾಜಕೀಯ, ಹುಸಿ ಜಾತ್ಯತೀತತೆ, ಕುಟುಂಬ ರಾಜಕಾರಣ, ಸಿಎಎ ಮತ್ತು "ಮತ-ಜಿಹಾದ್" ವರೆಗಿನ ಅನೇಕ ವಿಷಯ ಪ್ರಸ್ತಾಪಿಸಿ INDIA ಬಣ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಲಖನೌ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉತ್ತರ ಪ್ರದೇಶದಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು. ತುಷ್ಟೀಕರಣ ರಾಜಕೀಯ, ಹುಸಿ ಜಾತ್ಯತೀತತೆ, ಕುಟುಂಬ ರಾಜಕಾರಣ, ಸಿಎಎ ಮತ್ತು "ಮತ-ಜಿಹಾದ್" ವರೆಗಿನ ಅನೇಕ ವಿಷಯ ಪ್ರಸ್ತಾಪಿಸಿ INDIA ಬಣ ವಿರುದ್ಧ ವಾಗ್ದಾಳಿ ನಡೆಸಿದರು.

ಅಜಂಗಢ, ಜಾನ್ ಪುರ, ಭದೋಹಿ ಮತ್ತು ಪ್ರತಾಪ್‌ಗಢದಲ್ಲಿ ನಾಲ್ಕು ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಈ ಬಾರಿ ನಡೆಯುತ್ತಿರುವ ಚುನಾವಣೆ ಬಿಜೆಪಿಯ ಸಂತುಷ್ಟಿಕರಣ ನೀತಿ vs INDIA ಬಣದ ತುಷ್ಟೀಕರಣ ರಾಜಕಾರಣದ ನಡುವಿನ ಹೋರಾಟ ಎಂದು ಬಣ್ಣಿಸಿದರು.

ಪ್ರಧಾನಿ ಮೋದಿ
ಬಜೆಟ್‌ನ ಶೇ.15 ರಷ್ಟು ಹಣವನ್ನು ಕಾಂಗ್ರೆಸ್ ಮುಸ್ಲಿಮರಿಗೆ ಹಂಚಿಕೆ ಮಾಡಲಿದೆ: ಪ್ರಧಾನಿ ಮೋದಿ

ಜಾನ್ ಪುರದಲ್ಲಿ ಮಾತನಾಡಿದ ಮೋದಿ “ತಮ್ಮ ಮತಬ್ಯಾಂಕ್ ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಸಂವಿಧಾನವನ್ನು ಬದಲಿಸಲು ಮತ್ತು ಕರ್ನಾಟಕದಲ್ಲಿ ಈಗಾಗಲೇ ಮಾಡಿದಂತೆ ಮುಸ್ಲಿಮರಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿಗೆ ಮೀಸಲಾದ ಕೋಟಾವನ್ನು ನೀಡಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.

ತಮ್ಮ ಜೀವಿತಾವಧಿಯಲ್ಲಿ ಎಂದಿಗೂ ಮಾಡಲು ಅನುಮತಿಸದ ಕೋಮು ಆಧಾರದ ಮೇಲೆ ಕೋಟಾ ನೀಡುವ ಅದೇ ಕರ್ನಾಟಕ ಮಾದರಿಯನ್ನು ದೇಶಾದ್ಯಂತ ಅನ್ವಯಿಸಲು INDIA ಬಣ ಬಯಸುತ್ತಿವೆ.

ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವಲ್ಲಿ ನಿರತರಾಗಿರುವಾಗ, ಎಸ್‌ಪಿ-ಕಾಂಗ್ರೆಸ್ ಮೈತ್ರಿ ತುಷ್ಟೀಕರಣ ರಾಜಕಾರಣದಲ್ಲಿ ತೊಡಗಿವೆ ಎಂದು ಟೀಕಾ ಪ್ರಹಾರ ನಡೆಸಿದರು.

ಪ್ರಧಾನಿ ಮೋದಿ
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ನಾಶ, ಮೀಸಲಾತಿ ರದ್ದುಗೊಳಿಸುತ್ತದೆ: ರಾಹುಲ್ ಗಾಂಧಿ

ಇದಕ್ಕೂ ಮುನ್ನಾ ಅಜಂಗಢದಲ್ಲಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಎರಡೂ ತುಷ್ಟೀಕರಣ ರಾಜಕೀಯ ಮಾಡುತ್ತಿವೆ. ಅವರು ವಿಭಿನ್ನ ರಾಜಕೀಯ ಘಟಕಗಳಾಗಿದ್ದರೂ, ಉತ್ತರ ಪ್ರದೇಶದಲ್ಲಿ INDIA ಪಾಲುದಾರರು ತುಷ್ಟೀಕರಣ, ಸುಳ್ಳು, ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರ ಮಾರಾಟ ಮಾಡುವ ಸಾಮಾನ್ಯ ಅಂಗಡಿಗಳನ್ನು ಹೊಂದಿವೆ ಎಂದು ಅವರು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com