
ನವದೆಹಲಿ: ಎಎಪಿ ಸಂಸದೆ ಸ್ವಾತಿ ಮಲಿವಾಲ್ ಮೇಲೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಪ್ತ ಸಹಾಯಕ ಬಿಭವ್ ಕುಮಾರ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯ ಮೊದಲ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋ ಅರವಿಂದ್ ಕೇಜ್ರಿವಾಲ್ ರನ್ನು ಭೇಟಿ ಮಾಡಲು ಬಂದ ಸಂಸದೆಯನ್ನು ಭದ್ರತಾ ಸಿಬ್ಬಂದಿ ತಡೆಯುತ್ತಾರೆ. ಹೀಗಾಗಿ ಅಲ್ಲಿಗೆ ಬಂದ ಕೇಜ್ರಿವಾಲ್ ಆಪ್ತ ಸಹಾಯಕ ಬಿಭವ್ ಕುಮಾರ್ ನೀವು ಈಗ ಭೇಟಿ ಮಾಡಲು ಸಾಧ್ಯವಿಲ್ಲ. ನೀವು ಇಲ್ಲಿಂದ ಹೊರಡಿ ಎಂದು ಸ್ವಾತಿ ಮಲಿವಾಲ್ ಗೆ ಸೂಚಿಸುತ್ತಾರೆ.
ಈ ವೇಳೆ ಇಲ್ಲ ನಾನು ಇಲ್ಲಿಯೇ ಇರುತ್ತೇನೆ. ನೀವು ನನ್ನ ಮೇಲೆ ದಬ್ಬಾಳಿಕೆ ನಡೆಸಿದರೆ, ನನ್ನನ್ನು ಮುಟ್ಟಿದರೆ ನಾನು ಪೊಲೀಸರಿಗೆ ಕರೆ ಮಾಡಬೇಕಾಗುತ್ತದೆ ಎಂದು ಸ್ವಾತಿ ಹೇಳುತ್ತಾರೆ. ಮುಂದೆ ನಿಮ್ಮ ಕೆಲಸ ಸಹ ಹೋಗಬಹುದು ಎಂದು ಎಚ್ಚರಿಸುತ್ತಾರೆ.
ಈ ವೇಳೆ ಮಾತಿಗೆ ಮಾತು ಬೆಳೆದು ಸ್ವಾತಿ ಅವರು, ಬಿಭವ್ ಗೆ 'ಗಾಂಜಾ ಸಾಲಾ' ಎಂದು ಕರೆಯುತ್ತಾಳೆ. ಅಲ್ಲಿಗೆ ವಿಡಿಯೋ ಕಟ್ ಆಗುತ್ತದೆ. ಇದಾದ ನಂತರ ಹಲ್ಲೆ ನಡೆದಿರಬಹುದು. ಸ್ವಾತಿ ಆರೋಪಿಸುವಂತೆ ಬಿಭವ್ ಎಂಟು ಬಾರಿ ಕಪಾಳಕ್ಕೆ ಹೊಡೆದಿದ್ದಾರೆ. ನನ್ನ ಎದೆಗೆ ಕಾಲಿನಿಂದ ಹೊದ್ದಿದ್ದಾರೆ ಎಂದು ಆರೋಪಿಸಿದ್ದು ಈ ಸಂಬಂಧ ಬಿಭವ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
Advertisement