INDIA ಮೈತ್ರಿಕೂಟಕ್ಕೆ 'ಮಹಾ' ನಿರೀಕ್ಷೆ; ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ 46 ಸ್ಥಾನಗಳ ಗೆಲುವಿನ ವಿಶ್ವಾದಲ್ಲಿ ಖರ್ಗೆ, ಪವಾರ್!

ಕಾಂಗ್ರೆಸ್ ನೇತೃತ್ವದ INDIA ಮೈತ್ರಿಕೂಟ ಮಹಾರಾಷ್ಟ್ರದಲ್ಲಿ 48 ಸ್ಥಾನಗಳ ಪೈಕಿ 46 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಹೊಂದಿದೆ.
Congress President Mallikarjun Kharge with NCP (Sharad) Chief Sharad Pawar and Shiv Sena (UBT) Chief Uddhav Thackeray during an INDIA alliance press conference, in Mumbai, Saturday, May 18, 2024. (Photo | PTI)
INDIA ಮೈತ್ರಿಕೂಟದ ನಾಯಕರೊಂದಿಗೆ ಖರ್ಗೆ ಪತ್ರಿಕಾಗೋಷ್ಠಿonline desk
Updated on

ಮುಂಬೈ: ಕಾಂಗ್ರೆಸ್ ನೇತೃತ್ವದ INDIA ಮೈತ್ರಿಕೂಟ ಮಹಾರಾಷ್ಟ್ರದಲ್ಲಿ 48 ಸ್ಥಾನಗಳ ಪೈಕಿ 46 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಹೊಂದಿದೆ. ಮೇ.20 ರಂದು ಮಹಾರಾಷ್ಟ್ರದಲ್ಲಿ ಮುಂಬೈ ನ 6 ಲೋಕಸಭಾ ಕ್ಷೇತ್ರಗಳು ಸೇರಿ ಒಟ್ಟು 13 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಇದಕ್ಕೂ ಮುನ್ನ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಸದಸ್ಯ-ಎನ್ ಸಿಪಿ ನಾಯಕ ಶರದ್ ಪವಾರ್, ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಖರ್ಗೆ ಈಗಿನ ಟ್ರೆಂಡ್ ನ್ನು ಗಮನಿಸುತ್ತಿದ್ದರೆ, ಮಹಾರಾಷ್ಟ್ರದಲ್ಲಿ 48 ಸ್ಥಾನಗಳ ಪೈಕಿ 46 ರಲ್ಲಿ ನಾವು ಗೆಲ್ಲಲಿದ್ದೇವೆ ಎಂದು ಹೇಳಿದ್ದಾರೆ.

Congress President Mallikarjun Kharge with NCP (Sharad) Chief Sharad Pawar and Shiv Sena (UBT) Chief Uddhav Thackeray during an INDIA alliance press conference, in Mumbai, Saturday, May 18, 2024. (Photo | PTI)
ಮೋದಿಯವರು ಜನರನ್ನು ಪ್ರಚೋದಿಸಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ- ಖರ್ಗೆ; ಜೂನ್ 4 ನಂತರ 'ಅಚ್ಛೇ ದಿನ್' ಬರುತ್ತದೆ- ಉದ್ಧವ್ ಠಾಕ್ರೆ

ಈ ಹಿಂದೆ ಮಹಾವಿಕಾಸ್ ಅಘಾಡಿ ಮೈತ್ರಿಕೂಟ ಮಹಾರಾಷ್ಟ್ರದಲ್ಲಿ 30-35 ಲೋಕಸಭಾ ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಿದ್ದ ಶರದ್ ಪವಾರ್ ಸಹ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ INDIA ಮೈತ್ರಿಕೂಟಕ್ಕೆ ಸೇರುತ್ತಾರೆ ಎಂದು ಖರ್ಗೆ ಪ್ರತಿಪಾದಿಸಿದರು. ಸರ್ಕಾರದಲ್ಲಿ ಸಕ್ರಿಯವಾಗಿ ಭಾಗವಹಿಸುವ ಉದ್ದೇಶವನ್ನು ವ್ಯಕ್ತಪಡಿಸಲು ಬಾಹ್ಯ ಬೆಂಬಲವನ್ನು ನೀಡುವುದರೆಡೆಗೆ ಬ್ಯಾನರ್ಜಿಯವರ ನಿಲುವಿನಲ್ಲಿ ಪರಿವರ್ತನೆಯಾಗಿರುವುದನ್ನು ಖರ್ಗೆ ಉಲ್ಲೇಖಿಸಿದ್ದಾರೆ.

ನೀತಿ ಪ್ರಸ್ತಾಪಗಳಿಗೆ ಸಂಬಂಧಿಸಿದಂತೆ ಮಾತನಾಡಿರುವ ಖರ್ಗೆ, 30 ಲಕ್ಷ ಸರ್ಕಾರಿ ಖಾಲಿ ಹುದ್ದೆಗಳನ್ನು ತುಂಬಲು, ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಮತ್ತು ಗ್ರಾಮೀಣ ಕಾರ್ಮಿಕರಿಗೆ MNREGA ಕಾರ್ಯಕ್ರಮದಂತೆಯೇ ನಗರ ಯುವಕರಿಗೆ ವೃತ್ತಿಪರ ತರಬೇತಿಯನ್ನು ನೀಡಲು ವಾಗ್ದಾನ ಮಾಡಿದರು. "ನಾವು ನಗರ ಪ್ರದೇಶದ ಯುವಕರಿಗೆ ತರಬೇತಿ ನೀಡುತ್ತೇವೆ ಮತ್ತು ಗ್ರಾಮೀಣ ಕಾರ್ಮಿಕರಿಗೆ MNREGA ಮೂಲಕ ನಾವು ಕೆಲಸ ಮಾಡುತ್ತೇವೆ. ಈ ಕಾರ್ಮಿಕರಿಗೆ ನಾವು ರೂ 25 ಲಕ್ಷ ವಿಮೆ ಜೊತೆಗೆ ರೂ 1 ಲಕ್ಷವನ್ನು ನೀಡುತ್ತೇವೆ. ನಾವು ಟ್ರ್ಯಾಕ್ಟರ್‌ಗಳಂತಹ ಕೃಷಿ ಉಪಕರಣಗಳು, ರಸಗೊಬ್ಬರಗಳ ಮೇಲಿನ ಜಿಎಸ್‌ಟಿಯನ್ನು ಸಹ ತೆಗೆದುಹಾಕುತ್ತೇವೆ ಎಂದು ಖರ್ಗೆ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com