
ಬೆಂಗಳೂರು: ಕ್ಯಾಪ್ಟನ್ ಗೋಪಿಚಂದ್ ತೋಟಕೂರ ಬ್ಲೂ ಒರಿಜಿನ್ ಎನ್ಎಸ್-25 ಮಿಷನ್ ಮೂಲಕ ಮೇ.19 ರಂದು ಬಾಹ್ಯಾಕಾಶಕ್ಕೆ ತೆರಳಲಿದ್ದು, ಹೊಸ ಇತಿಹಾಸ ನಿರ್ಮಾಣವಾಗಲಿದೆ.
ನ್ಯೂ ಶೆಫರ್ಡ್ ನ 7 ನೇ ಬಾಹ್ಯಾಕಾಶ ನೌಕೆಯಲ್ಲಿ ಗೋಪಿಚಂದ್ ಸೇರಿ ಇನ್ನೂ 6 ಮಂದಿ ಇರಲಿದ್ದಾರೆ. ಈ ನೌಕೆ ಭೂಮಿಯ ವಾತಾವರಣ ಹಾಗೂ ಅಂತರಿಕ್ಷವನ್ನು ಪ್ರತ್ಯೇಕಿಸುವ ಕರ್ಮನ್ ಲೈನ್ನ್ನು ದಾಟಿ ಭೂಮಿಗೆ ವಾಪಸ್ಸಾಗಲಿದ್ದಾರೆ.
ಈ ಮಿಷನ್ ಬಾಹ್ಯಾಕಾಶ ರೇಸ್ ಗೆ ಭಾರತದ ಪ್ರವೇಶದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದ್ದು, ವಿಶೇಷವಾದ ಗಗನಯಾತ್ರಿಗಳ ಸಿಬ್ಬಂದಿಗಳಿರುವ ಕಾರಣ ಐತಿಹಾಸಿಕ ಬಾಹ್ಯಾಕಾಶ ಪ್ರಯಾಣವಾಗಲಿದೆ.
1984 ರಲ್ಲಿ ಸೋಯುಜ್ ಟಿ-11 ನಲ್ಲಿ ಪ್ರಯಾಣಿಸಿದ್ದ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರ ಐತಿಹಾಸಿಕ ಪ್ರಯಾಣದ 4 ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಗೋಪಿಚಂದ್ ಬಾಹ್ಯಾಕಾಶ ಪ್ರಯಾಣ ಕೈಗೊಳ್ಳುತ್ತಿದ್ದಾರೆ.
ನ್ಯೂ ಶೆಫರ್ಡ್ ನ 7 ನೇ ಬಾಹ್ಯಾಕಾಶ ನೌಕೆಯ ಪ್ರಯಾಣವನ್ನು ಸಂಜೆ 7 ಗಂಟೆ ನಂತರ ಬ್ಲೂ ಆರ್ಜಿನ್ ವೆಬ್ ಸೈಟ್ ನಲ್ಲಿ ನೇರ ಪ್ರಸಾರವಾಗಲಿದೆ.
ಮುಂದಿನ ಪೀಳಿಗೆಯ STEAM (ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಕಲೆ ಮತ್ತು ಗಣಿತ) ವೃತ್ತಿಪರರನ್ನು ಪ್ರೋತ್ಸಾಹಿಸಲು ಮತ್ತು ಬೆಂಬಲಿಸಲು ವಿನ್ಯಾಸಗೊಳಿಸಲಾದ ಕಾರ್ಯಕ್ರಮಕ್ಕಾಗಿ ಕ್ಲಬ್ ಫಾರ್ ದಿ ಫ್ಯೂಚರ್ ಪರವಾಗಿ ಗಗನಯಾತ್ರಿಗಳು ಪೋಸ್ಟ್‌ಕಾರ್ಡ್‌ಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವುದು ಮಿಷನ್ ನ ಮುಖ್ಯ ಉದ್ದೇಶವಾಗಿದೆ.
ಆಂಧ್ರಪ್ರದೇಶದ ವಿಜಯವಾಡದ ಮೂಲದ ಗಗನಯಾತ್ರಿ ಈ ಪ್ರಯಾಣದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. “ಬ್ಲೂ ಒರಿಜಿನ್‌ನ NS-25 ಮಿಷನ್‌ನೊಂದಿಗೆ ಈ ಐತಿಹಾಸಿಕ ಪ್ರಯಾಣವನ್ನು ಪ್ರಾರಂಭಿಸುತ್ತಿರುವ ಮೊದಲ ನಾಗರಿಕ ಭಾರತೀಯ ಗಗನಯಾತ್ರಿಯಾಗಿ, ಈ ಸಮುದ್ರಯಾನದಲ್ಲಿ ಭಾರತವನ್ನು ಪ್ರತಿನಿಧಿಸಲು ನನಗೆ ಗೌರವವಿದೆ. ವಿಶ್ವಾದ್ಯಂತ ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತ ಛಾಪು ಮೂಡಿಸುತ್ತಿದೆ. ಈ ಯಾನವು ಜಾಗತಿಕ ಮಟ್ಟದಲ್ಲಿ ಮಾನವ ಪ್ರಯತ್ನ ಮತ್ತು ಜಾಣ್ಮೆಯ ಚೈತನ್ಯದ ಸಂಕೇತವಾಗಿದೆ. ಬಾಹ್ಯಾಕಾಶ ಪರಿಶೋಧನೆಯ ಗಡಿಗಳನ್ನು ನಾವು ಒಟ್ಟಿಗೆ ಸೇರಿಸುವುದರಿಂದ ಈ ಪರಿಶೋಧನೆಯು ಭವಿಷ್ಯದ ಪೀಳಿಗೆಯ STEAM ವೃತ್ತಿಪರರನ್ನು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಗೋಪಿಚಂದ್ ಹೇಳಿದ್ದಾರೆ.
ಇದು ಬಿಲಿಯನೇರ್ ಜೆಫ್ ಬೆಜೋಸ್ ಅವರು 2000 ರಲ್ಲಿ ಸ್ಥಾಪಿಸಿದ ಬ್ಲೂ ಒರಿಜಿನ್‌ನ 25 ನೇ ಬಾಹ್ಯಾಕಾಶ ಯಾನವಾಗಿದೆ. ಇದು ಈಗಾಗಲೇ 31 ಜನರನ್ನು ಕರ್ಮಾನ್ ಲೈನ್‌ಗೆ ಕೊಂಡೊಯ್ದಿದೆ.
Advertisement