ಡಿಫೆನ್ಸ್ ಎಕ್ಸ್‌ಪೋನಲ್ಲಿ ಚಿನೂಕ್ ಹೆಲಿಕಾಫ್ಟರ್ ನ ಮಾದರಿಯ ಕಳುವು?

ಡಿಫೆನ್ಸ್ ಎಕ್ಸ್‌ಪೋನಲ್ಲಿ ಚಿನೂಕ್ ಹೆಲಿಕಾಫ್ಟರ್ ನ ಮಾದರಿಯ ಕಳುವಾಗಿದೆ ಎಂಬ ಸುದ್ದಿ ಪ್ರಕಟವಾಗಿದ್ದು, ಈ ಬಗ್ಗೆ ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದೆ.
Chinook chopper
ಚಿನೂಕ್ ಹೆಲಿಕಾಫ್ಟರ್online desk

ನವದೆಹಲಿ: ಡಿಫೆನ್ಸ್ ಎಕ್ಸ್‌ಪೋನಲ್ಲಿ ಚಿನೂಕ್ ಹೆಲಿಕಾಫ್ಟರ್ ನ ಮಾದರಿಯ ಕಳುವಾಗಿದೆ ಎಂಬ ಸುದ್ದಿ ಪ್ರಕಟವಾಗಿದ್ದು, ಈ ಬಗ್ಗೆ ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದೆ.

2020 ರ ಡಿಫೆನ್ಸ್ ಎಕ್ಸ್ ಪೋ ನಲ್ಲಿ ಚಿನೂಕ್ ಹೆಲಿಕಾಫ್ಟರ್ ನ ಮಾದರಿಗಳು ಕಳುವಾಗಿದೆ ಎಂಬ ಸುದ್ದಿ ಹರಡಿತ್ತು.

Chinook chopper
ಪಾಕ್, ಚೀನಾ ಗಡಿಗಳಲ್ಲಿ ನಿಯೋಜಿಸಲು 156 ಪ್ರಚಂಡ ಲಘು ಯುದ್ಧ ಹೆಲಿಕಾಫ್ಟರ್ ಖರೀದಿಗೆ ಐಎಎಫ್ ಮುಂದು

ಈ ಬಗ್ಗೆ ರಕ್ಷಣಾ ಸಚಿವಾಲಯದ ವಕ್ತಾರರಾದ ಎ ಭರತ್ ಭೂಷಣ್ ಬಾಬು ಸ್ಪಷ್ಟನೆ ನೀಡಿದ್ದು, ಲಖನೌ ನಲ್ಲಿ ಡಿಆರ್ ಡಿಒ ಹೆಲಿಕಾಫ್ಟರ್ ನ ಮಾದರಿಯನ್ನು ನಿಯೋಜಿಸಿರಲಿಲ್ಲ ಎಂದು ಹೇಳಿದ್ದಾರೆ. ಹೆಲಿಕಾಫ್ಟರ್ ನ ಮಾದರಿ ಕಳುವಾಗಿದೆ ಎಂಬುದು ದಾರಿ ತಪ್ಪಿಸುವಂತಹ ಸುದ್ದಿಯಾಗಿದೆ. DefExpo2020 ರಲ್ಲಿ ಇಂತಹ ಯಾವುದೇ ಘಟನೆಗಳೂ ಸಂಭವಿಸಿಲ್ಲ ಎಂದು ವಕ್ತಾರರು ನೀಡಿರುವ ಹೇಳಿಕೆಯನ್ನು ಟ್ವಿಟರ್ ನಲ್ಲಿ ಸಚಿವಾಲಯ ಪೋಸ್ಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com