ಶಾಂತಿಗಾಗಿ ಶರಣಾಗು: ಕಾಶ್ಮೀರದ ಮತಗಟ್ಟೆಯಿಂದ ಲಷ್ಕರ್ ಉಗ್ರನ ಸಹೋದರನ ಮನವಿ!

ಲೋಕಸಭಾ ಚುನಾವಣೆ 2024 ರ 5 ನೇ ಹಂತದ ಮತದಾನ ಇಂದು ನಡೆಯುತ್ತಿದ್ದು, ಕಾಶ್ಮೀರದಲ್ಲಿ ಮತದಾನ ಮಾಡಿದ ವ್ಯಕ್ತಿಯೋರ್ವ ಲಷ್ಕರ್ ಉಗ್ರ ಸಂಘಟನೆಯಲ್ಲಿರುವ ತನ್ನ ಸಹೋದರನಿಗೆ ಶರಣಾಗುವಂತೆ ಮನವಿ ಮಾಡಿದ್ದಾನೆ.
Kashmir polling booth
online desk
Updated on

ಬಾರಾಮುಲ್ಲಾ: ಲೋಕಸಭಾ ಚುನಾವಣೆ 2024 ರ 5 ನೇ ಹಂತದ ಮತದಾನ ಇಂದು ನಡೆಯುತ್ತಿದ್ದು, ಕಾಶ್ಮೀರದಲ್ಲಿ ಮತದಾನ ಮಾಡಿದ ವ್ಯಕ್ತಿಯೋರ್ವ ಲಷ್ಕರ್ ಉಗ್ರ ಸಂಘಟನೆಯಲ್ಲಿರುವ ತನ್ನ ಸಹೋದರನಿಗೆ ಶರಣಾಗುವಂತೆ ಮನವಿ ಮಾಡಿದ್ದಾನೆ.

"ಶಾಂತಿ ನೆಲೆಸುವುದಕ್ಕಾಗಿ ಶರಣಾಗು" ಎಂದು ಉಗ್ರ ಸಂಘಟನೆಯಲ್ಲಿ ತೊಡಗಿರುವ ತನ್ನ ಸಹೋದರನಿಗೆ ವ್ಯಕ್ತಿ ಕರೆ ನೀಡಿದ್ದಾರೆ.

ಸಹೋದರನಿಗೆ ಶರಣಾಗುವಂತೆ ಕರೆ ನೀಡಿರುವ ವ್ಯಕ್ತಿ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಿಂದ ಮತದಾನ ಮಾಡಿದ್ದಾರೆ.

ಹಲವು ಉಗ್ರ ಕೃತ್ಯಗಳ ಸಂಬಂಧಿತ ಪ್ರಕರಣಗಳಲ್ಲಿ ಆರೋಪಿಯಾಗಿರುವ ಲಷ್ಕರ್ ಉಗ್ರ ಸಂಘಟನೆಯಲ್ಲಿ ಸಕ್ರಿಯವಾಗಿರುವ ಉಮರ್ ಲೋನ್ ಎಂಬಾತನ ಸಹೋದರ ರೌಫ್ ಅಹ್ಮದ್ ಲೋನ್ ಈ ಕರೆ ನೀಡಿದ್ದಾರೆ.

"ಮತದಾನ ನನ್ನ ಹಕ್ಕು, ಹಾಗಾಗಿ ನಾನು ನನ್ನ ಮತವನ್ನು ಚಲಾಯಿಸುತ್ತೇನೆ. ಅಭಿವೃದ್ಧಿ ಕಾರ್ಯಗಳು ನಡೆಯುವುದರಿಂದ ಎಲ್ಲರೂ ಮತ ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ. ಮತಗಟ್ಟೆಗಳಿಗೆ ಬನ್ನಿ ಮತ್ತು ನಿಮ್ಮ ಮತವನ್ನು ವ್ಯರ್ಥ ಮಾಡಬೇಡಿ" ಎಂದು ಲೋನ್ ಸುದ್ದಿಗಾರರ ಮೂಲಕ ಜನತೆಗೆ ತಿಳಿಸಿದ್ದಾರೆ.

Kashmir polling booth
ಜಮ್ಮು-ಕಾಶ್ಮೀರ: ಪೂಂಚ್‌ನಲ್ಲಿ ಮೂವರು ಉಗ್ರರ ಸಹಚರರ ಬಂಧನ

ಮತದಾನ ಮಾಡಿರುವ ಗುರುತನ್ನು ಪ್ರರದರ್ಶಿಸಿರುವ ಅವರು, ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ತನ್ನ ಕುಟುಂಬಕ್ಕೆ ಹಿಂತಿರುಗುವಂತೆ ತನ್ನ ಸಹೋದರನಿಗೆ ಮನವಿ ಮಾಡಿದರು.

"ನಾನು ನನ್ನ ಸಹೋದರ ಉಮರ್‌ಗೆ ಶರಣಾಗಲು (ಭದ್ರತಾ ಪಡೆಗಳ ಮುಂದೆ) ಮನವಿ ಮಾಡುತ್ತೇನೆ, ಅವನು ಹಾಗೆ ಮಾಡಿದರೆ, ಅದು ಹೆಚ್ಚು ಉತ್ತಮವಾಗಿರುತ್ತದೆ, ಅವನು ತನ್ನ ತಾಯಿ ಮತ್ತು ಕುಟುಂಬಕ್ಕೆ ಹಿಂತಿರುಗುತ್ತಾನೆ" ಎಂದು ಲೋನ್ ಹೇಳಿದರು.

ಈ ವರ್ಷದ ಏಪ್ರಿಲ್‌ನಲ್ಲಿ, ಉಮರ್‌ನ ತಾಯಿ ಕೂಡ ಪಡೆಗಳ ಮುಂದೆ ಶರಣಾಗುವಂತೆ ರೌಫ್ ಅಹ್ಮದ್ ಲೋನ್ ಮನವಿ ಮಾಡಿದರು. ಏಪ್ರಿಲ್ ನಲ್ಲೂ ಉಮರ್ ತಾಯಿ ಸೇನಾಡಗಳ ಎದುರು ಹಾಜರಾಗಲು ಉಮರ್ ನ ತಾಯಿ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com