ಜೂನ್ 4ರಂದು ಪ್ರತಿಪಕ್ಷಗಳು ಪಕ್ಕದಲ್ಲಿ ನೀರು ಇಟ್ಟುಕೊಳ್ಳಿ: ಎದುರಾಳಿಗಳಿಗೆ ಪ್ರಶಾಂತ್ ಕಿಶೋರ್ ಸವಾಲು

ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಗೆಲುವಿನ ಮುನ್ಸೂಚನೆ ನೀಡಿದ್ದಾರೆ. ಪ್ರಶಾಂತ್ ಕಿಶೋರ್ ಪ್ರಕಾರ, ಜೂನ್ 4 ರಂದು ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ.
ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್

ನವದೆಹಲಿ: ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಗೆಲುವಿನ ಮುನ್ಸೂಚನೆ ನೀಡಿದ್ದಾರೆ. ಪ್ರಶಾಂತ್ ಕಿಶೋರ್ ಪ್ರಕಾರ, ಜೂನ್ 4 ರಂದು ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಅವರ ಪ್ರಕಾರ, ಚುನಾವಣೆಯಲ್ಲಿ ಬಿಜೆಪಿ 303 ಅಥವಾ ಹೆಚ್ಚಿನ ಸ್ಥಾನಗಳನ್ನು ಪಡೆಯುತ್ತದೆ ಎಂದು ಹೇಳುವ ಮೂಲಕ ಪ್ರಶಾಂತ್ ಕಿಶೋರ್ ತಮ್ಮ ಸಮೀಕ್ಷೆಯನ್ನು ಪ್ರಶ್ನಿಸಿದವರಿಗೆ ತಿರುಗೇಟು ನೀಡಿದ್ದಾರೆ.

ನಮ್ಮ ಸಮೀಕ್ಷೆಗಳನ್ನು ಪ್ರಶ್ನಿಸುತ್ತಿರುವವರು ಜೂನ್‌ 4ರಂದು ಪಕ್ಕದಲ್ಲಿ ನೀರು ಇಟ್ಟುಕೊಂಡಿರಿ. ಕಾರಣ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪ್ರಶಾಂತ್ ಕಿಶೋರ್ ಪೋಸ್ಟ್‌ ಮಾಡಿದ್ದಾರೆ.

ಮೇ 21ರಂದು NDTV ಪ್ರಧಾನ ಸಂಪಾದಕ ಸಂಜಯ್ ಪುಗ್ಲಿಯಾ ಅವರೊಂದಿಗಿನ ವಿಶೇಷ ಸಂವಾದದಲ್ಲಿ, ಪ್ರಶಾಂತ್ ಕಿಶೋರ್ ಅವರು ಪ್ರಸ್ತುತ ಪ್ರತಿಪಕ್ಷಗಳು ಮತ್ತು ಸಾಮಾನ್ಯ ಜನರ ಮೌಲ್ಯಮಾಪನವು ಬಿಜೆಪಿ 370 ಸ್ಥಾನಗಳನ್ನು ಪಡೆಯುತ್ತದೆಯೋ ಇಲ್ಲವೋ ಎಂಬುದರ ಸುತ್ತ ಸುತ್ತುತ್ತಿದೆ ಎಂದು ಹೇಳಿದ್ದರು. 272 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ, ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ, ಆದರೆ ಬಹುಮತದ ಸಂಖ್ಯೆ 272 ಆಗಿದೆ. ಕಿಶೋರ್ ಪ್ರಕಾರ, ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ, ತಮಿಳುನಾಡು, ಕೇರಳದಂತಹ ಪೂರ್ವ ಮತ್ತು ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಹೊಂದಿರುವ ಸ್ಥಾನಗಳ ಸಂಖ್ಯೆ 15-20 ಸ್ಥಾನಗಳಷ್ಟು ಹೆಚ್ಚಾಗುತ್ತದೆ. ಈ ರಾಜ್ಯಗಳಲ್ಲಿ ಬಿಜೆಪಿಯ ಮತ ಪ್ರಮಾಣವೂ ಹೆಚ್ಚಲಿದೆ. ಅಂದರೆ ಎನ್‌ಡಿಎ ಪರಿಸ್ಥಿತಿ ಇವತ್ತಿಗಿಂತ ಚೆನ್ನಾಗಿರಬಹುದು. ಸೀಟು ಕಡಿಮೆಯಾಗುವ ಸಾಧ್ಯತೆ ತೀರಾ ಕಡಿಮೆ ಎನಿಸುತ್ತಿದೆ ಎಂದು ಹೇಳಿದರು.

ಎನ್‌ಡಿಟಿವಿ ಜೊತೆಗಿನ ವಿಶೇಷ ಸಂವಾದದಲ್ಲಿ ಪ್ರಶಾಂತ್ ಕಿಶೋರ್ ನಾಲ್ಕು ಪ್ರಮುಖ ಭವಿಷ್ಯ ನುಡಿದಿದ್ದರು. ಈ ಬಾರಿಯೂ ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದರು. ಆ ಸಮಯದಲ್ಲಿ ಅವರು ಏನು ಹೇಳಿದ್ದಾರೆಂದು ನೋಡೋಣ.

ಪ್ರಶಾಂತ್ ಕಿಶೋರ್
ಪ್ರಧಾನಿ ಹೇಳುತ್ತಿರುವುದನ್ನು ಸಾಮಾನ್ಯನೋರ್ವ ಹೇಳಿದ್ದರೆ, ಆತನಿಗೆ ಮನೋರೋಗ ಚಿಕಿತ್ಸೆಯೇ ಗತಿ: ಮೋದಿ ವಿರುದ್ಧ ರಾಹುಲ್ ವ್ಯಂಗ್ಯ

ಜೂನ್ 4ರಂದು ಯಾರ ಸರ್ಕಾರ ರಚನೆಯಾಗಲಿದೆ?

ಪ್ರಶಾಂತ್ ಕಿಶೋರ್ ಪ್ರಕಾರ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಅವರ ಪ್ರಕಾರ ದೇಶದಲ್ಲಿ ಮೋದಿ ವಿರೋಧಿ ಅಲೆ ಕಾಣುತ್ತಿಲ್ಲ. ಮೋದಿ ಹೆಸರಲ್ಲಿ ಬಿಜೆಪಿ ಈ ಚುನಾವಣೆಯಲ್ಲಿ ಗೆಲ್ಲಲಿದೆ ಎಂದರು.

ಬಿಜೆಪಿಗೆ ಎಷ್ಟು ಸ್ಥಾನ ಸಿಗಲಿದೆ?

400 ಮತ್ತು 370 ದಾಟುವ ಘೋಷಣೆ ಬಿಜೆಪಿಯ ಚುನಾವಣಾ ಆಟವಾಗಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದರು. ಪ್ರತಿಪಕ್ಷಗಳು ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲದೆ ಗೊಂದಲಕ್ಕೀಡಾದರು. 2019ರಂತೆಯೇ ಎನ್‌ಡಿಎ 303 ಸ್ಥಾನಗಳೊಂದಿಗೆ ಅಥವಾ ಇನ್ನೂ ಹೆಚ್ಚು ಸ್ಥಾನಗಳೊಂದಿಗೆ ತೇರ್ಗಡೆಯಾಗಲಿದೆ ಎಂದು ಅವರು ಹೇಳಿದರು.

ಉತ್ತರದಲ್ಲಿ ಬಿಜೆಪಿಗೆ ನಷ್ಟವೇ?

ಉತ್ತರ ಮತ್ತು ಪಶ್ಚಿಮದಲ್ಲಿ ಸುಮಾರು 325 ಲೋಕಸಭಾ ಸ್ಥಾನಗಳಿವೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದರು. 2014ರಿಂದ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿಯೂ ಪಶ್ಚಿಮ ಮತ್ತು ಉತ್ತರದಲ್ಲಿ ಬಿಜೆಪಿಗೆ ಯಾವುದೇ ಗಮನಾರ್ಹ ನಷ್ಟ ಕಂಡುಬರುತ್ತಿಲ್ಲ.

ಪೂರ್ವ-ದಕ್ಷಿಣದಲ್ಲಿ ಬಿಜೆಪಿಗೆ ಅಚ್ಚರಿ?

ಪೂರ್ವ ಮತ್ತು ದಕ್ಷಿಣದಲ್ಲಿ ಸುಮಾರು 225 ಸ್ಥಾನಗಳಿವೆ. ಪ್ರಸ್ತುತ ಈ ರಾಜ್ಯಗಳಲ್ಲಿ ಬಿಜೆಪಿ 50ಕ್ಕಿಂತ ಕಡಿಮೆ ಸ್ಥಾನಗಳನ್ನು ಹೊಂದಿದೆ. ಈ ಹಿಂದೆ ಈ ಸ್ಥಳಗಳಲ್ಲಿ ಬಿಜೆಪಿಯ ಸಾಧನೆ ಚೆನ್ನಾಗಿರದಿದ್ದರೂ ಈ ಬಾರಿಯ ಚುನಾವಣೆಯಲ್ಲಿ ಕಡಿಮೆಯಾಗುವ ಬದಲು ಒಡಿಶಾ, ತೆಲಂಗಾಣ, ಬಿಹಾರ, ಆಂಧ್ರ, ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮುಂತಾದ ಆಗ್ನೇಯ ರಾಜ್ಯಗಳಲ್ಲಿ ಬಿಜೆಪಿಯ ಸ್ಥಾನಗಳು ಹೆಚ್ಚಾಗಲಿವೆ. ಇಲ್ಲಿ ಪಕ್ಷವು ಒಟ್ಟು ಸ್ಥಾನಗಳಲ್ಲಿ 15-20 ಸ್ಥಾನಗಳನ್ನು ಗಳಿಸುತ್ತಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com