ಉತ್ತರಾಖಂಡ್ ಏಮ್ಸ್ ಆಸ್ಪತ್ರೆಗೆ ನುಗ್ಗಿದ ಕಾರು
ಉತ್ತರಾಖಂಡ್ ಏಮ್ಸ್ ಆಸ್ಪತ್ರೆಗೆ ನುಗ್ಗಿದ ಕಾರುonline desk

ಉತ್ತರಾಖಂಡ್: ಆರೋಪಿಯನ್ನು ಹಿಡಿಯಲು AIIMS ವಾರ್ಡ್ ಗೆ ನುಗ್ಗಿದ ಪೊಲೀಸ್ SUV!

ಉತ್ತರಾಖಂಡ್ ನ AIIMS ಆಸ್ಪತ್ರೆಯಲ್ಲಿ ಸಿನಿಮೀಯ ರೀತಿಯ ಘಟನೆ ವರದಿಯಾಗಿದ್ದು, ಪೊಲೀಸರು ಆರೋಪಿಯನ್ನು ಹಿಡಿಯಲು ಆಸ್ಪತ್ರೆಯ ವಾರ್ಡ್ ಗೆ ನುಗ್ಗಿದ್ದಾರೆ.
Published on

ಡೆಹ್ರಾಡೂನ್: ಉತ್ತರಾಖಂಡ್ ನ AIIMS ಆಸ್ಪತ್ರೆಯಲ್ಲಿ ಸಿನಿಮೀಯ ರೀತಿಯ ಘಟನೆ ವರದಿಯಾಗಿದ್ದು, ಪೊಲೀಸರು ಆರೋಪಿಯನ್ನು ಹಿಡಿಯಲು ಆಸ್ಪತ್ರೆಯ ವಾರ್ಡ್ ಗೆ ನುಗ್ಗಿದ್ದಾರೆ.

ರಿಷಿಕೇಶದಲ್ಲಿನ AIIMS ನಲ್ಲಿ ಮಹಿಳಾ ವೈದ್ಯೆಗೆ ನರ್ಸಿಂಗ್ ಅಧಿಕಾರಿ ಕಿರುಕುಳ ನೀಡಿದ್ದ ಆರೋಪ ಮೇ.19 ರಂದು ವರದಿಯಾಗಿತ್ತು.

ಉತ್ತರಾಖಂಡ್ ಏಮ್ಸ್ ಆಸ್ಪತ್ರೆಗೆ ನುಗ್ಗಿದ ಕಾರು
ಉತ್ತರಾಖಂಡ್ ನ ನೈನಿತಾಲ್ ನಲ್ಲಿ ಕಮರಿಗೆ ಉರುಳಿಬಿದ್ದ ವಾಹನ: 8 ಮಂದಿ ಸಾವು

ಈ ಆರೋಪಿಯನ್ನು ಹಿಡಿಯುವುದಕ್ಕಾಗಿ ಪೊಲೀಸರು ಆಸ್ಪತ್ರೆಯೊಳಗೇ ಎಸ್ ಯುವಿಯೊಂದಿಗೆ ನುಗ್ಗಿದ ವಿಡಿಯೋ ಎಲ್ಲೆಡೆ ವೈರಲ್ ಆಗತೊಡಗಿದೆ. ದಿವ್ಯಾ ಗಂದೋತ್ರಾ ಟಂಡನ್ ಮತ್ತು ಇತರರು ಹಂಚಿಕೊಂಡಿರುವ ವೀಡಿಯೊದಲ್ಲಿ, ಸ್ಟ್ರೆಚರ್‌ಗಳ ಮೇಲೆ ರೋಗಿಗಳ ಸಾಲುಗಳ ಮೂಲಕ ವಾರ್ಡ್‌ನೊಳಗೆ ಎಸ್‌ಯುವಿ ಸಾಗುವುದು ಕಂಡುಬಂದಿದೆ. ಗಾರ್ಡ್‌ಗಳು ರೋಗಿಗಳೊಂದಿಗೆ ಸ್ಟ್ರೆಚರ್‌ಗಳನ್ನು ಎಸ್‌ಯುವಿ ಮಾರ್ಗದಿಂದ ಹೊರಗೆ ತಳ್ಳುವುದನ್ನು ಕಾಣಬಹುದಾಗಿದೆ.

ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಪೊಲೀಸರ ನಡೆಯನ್ನು "ಸೂಕ್ಷ್ಮ, ಸಂವೇದನೆ ಇಲ್ಲದ ಪರಮಾವಧಿ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಿರುಕುಳ ಪ್ರಕರಣದ ಶಂಕಿತನನ್ನು ರಾಜಸ್ಥಾನದ ಸತೀಶ್ ಕುಮಾರ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಅಮಾನತುಗೊಳಿಸಿ ನಂತರ ಅವರನ್ನು ಬಂಧಿಸಲಾಯಿತು.

X

Advertisement

X
Kannada Prabha
www.kannadaprabha.com