ಛತ್ತೀಸ್‌ಗಢ: ಇಬ್ಬರು ಮಹಿಳೆಯರು ಸೇರಿದಂತೆ 33 ನಕ್ಸಲೀಯರು ಪೊಲೀಸರಿಗೆ ಶರಣು
ಬಿಜಾಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ 33 ನಕ್ಸಲೀಯರು ಶನಿವಾರ ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ. ಈ ಪೈಕಿ ಮೂವರ ತಲೆಗೆ 5 ಲಕ್ಷ. ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆದಿವಾಸಿಗಳ ಮೇಲೆ ಮಾವೋವಾದಿಗಳು ನಡೆಸಿದ ದೌರ್ಜನ್ಯ ಮತ್ತು "ಪೊಳ್ಳು" ಮಾವೋವಾದಿ ಸಿದ್ಧಾಂತದಲ್ಲಿ ನಿರಾಶೆಯನ್ನು ಉಲ್ಲೇಖಿಸಿ ನಕ್ಸಲೀಯರು ಸಿಆರ್ ಪಿಎಫ್ ಹಿರಿಯ ಅಧಿಕಾರಿಗಳ ಮುಂದೆ ಶರಣಾಗಿರುವುದಾಗಿ ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಯಾದವ್ ಹೇಳಿದ್ದಾರೆ.
ಪೊಲೀಸರ ಪುನರ್ವಸತಿ ನೀತಿಯಿಂದ ಅವರು ಪ್ರಭಾವಿತರಾಗಿದ್ದಾರೆ. ಶರಣಾದ 33 ನಕ್ಸಲೀಯರ ಪೈಕಿ ಪೈಕಿ ಇಬ್ಬರು ಮಹಿಳೆಯರು ಮಾವೋವಾದಿಗಳ ಗಂಗಲೂರು ಪ್ರದೇಶ ಸಮಿತಿಯ ವಿವಿಧ ವಿಭಾಗಗಳಲ್ಲಿ ಸಕ್ರಿಯರಾಗಿದ್ದರು. PLGA (ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ) ಬೆಟಾಲಿಯನ್ ನಂ.1 ನ ರಾಜು ಹೇಮ್ಲಾ ಆಲಿಯಾಸ್ ಠಾಕೂರ್ (35) ಮತ್ತು ಮಾವೋವಾದಿಗಳ ಪ್ಲಟೂನ್ ನಂ 1 ರ ಸಮೋ ಕರ್ಮ, ಅವರ ತಲೆಗೆ ತಲಾ 2 ಲಕ್ಷ ಮತ್ತು ಮಾವೋವಾದಿಗಳ ಆರ್‌ಪಿಸಿ (ಕ್ರಾಂತಿಕಾರಿ ಪಕ್ಷದ ಸಮಿತಿ) ಜನತಾ ಸರ್ಕಾರ್ ಮುಖ್ಯಸ್ಥ ಸುದ್ರು ಪುಣೆಂ ಅವರ ತಲೆಗೆ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಈ ಮೂವರು ಈ ಹಿಂದೆ ಭದ್ರತಾ ಸಿಬ್ಬಂದಿಯ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ