ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ 'ರೆಮಲ್' ಚಂಡಮಾರುತ: ಬಿರುಗಾಳಿ ಸಹಿತ ಮಳೆ, ಜನಜೀವನ ಅಸ್ತವ್ಯಸ್ತ, 1 ಲಕ್ಷ ಮಂದಿ ಸ್ಥಳಾಂತರ

ರೆಮಲ್ ಚಂಡಮಾರುತ ನಿನ್ನೆ ಭಾನುವಾರ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿಯ ನಡುವೆ ಅಪ್ಪಳಿಸಿದ್ದು ತೀವ್ರ ಬಿರುಗಾಳಿಯಿಂದ ಭೂಕುಸಿತ ಉಂಟಾಗಿದೆ, ಗಾಳಿಯ ವೇಗ ಗಂಟೆಗೆ 110-135 ಕಿಮೀ ವೇಗ ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ರೆಮಲ್ ಚಂಡಮಾರುತದ ಮೊದಲು ಬಲವಾದ ಗಾಳಿ ಬೀಸಿ ಮಳೆ ಸುರಿದಿರುವ ದೃಶ್ಯ
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ರೆಮಲ್ ಚಂಡಮಾರುತದ ಮೊದಲು ಬಲವಾದ ಗಾಳಿ ಬೀಸಿ ಮಳೆ ಸುರಿದಿರುವ ದೃಶ್ಯ
Updated on

ಕೋಲ್ಕತ್ತಾ: ರೆಮಲ್ ಚಂಡಮಾರುತ ನಿನ್ನೆ ಭಾನುವಾರ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿಯ ನಡುವೆ ಅಪ್ಪಳಿಸಿದ್ದು ತೀವ್ರ ಬಿರುಗಾಳಿಯಿಂದ ಭೂಕುಸಿತ ಉಂಟಾಗಿದೆ, ಗಾಳಿಯ ವೇಗ ಗಂಟೆಗೆ 110-135 ಕಿಮೀ ವೇಗ ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ರೆಮಲ್ ಚಂಡಮಾರುತದ ಪರಿಣಾಮ ಪಶ್ಚಿಮ ಬಂಗಾಳದ ದಕ್ಷಿಣ ಮತ್ತು ಉತ್ತರ 24 ಪರಗಣಗಳು, ಪುರ್ಬಾ ಮೇದಿನಿಪುರ್, ಕೋಲ್ಕತ್ತಾ ಹೌರಾ ಮತ್ತು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಗಳಲ್ಲಿ ಭಾರೀ ಮಳೆಯನ್ನು ತರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ನಿನ್ನೆ ಮತ್ತು ಇಂದು ರಾಜ್ಯದ ಪಶ್ಚಿಮ ಮೇದಿನಿಪುರ್, ಪುರ್ಬಾ ಬರ್ಧಮಾನ್ ಮತ್ತು ನಾಡಿಯಾ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ.

ಇಂದು ಮತ್ತು ನಾಳೆ ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮೀನುಗಾರರಿಗೆ ನಾಳೆಯವರೆಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಾಗರ ದ್ವೀಪ, ಸುಂದರ್‌ಬನ್ಸ್ ಮತ್ತು ಕಾಕದ್ವೀಪ್ ಸೇರಿದಂತೆ ಕರಾವಳಿ ಪ್ರದೇಶಗಳಿಂದ ಸುಮಾರು 1.10 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.

ಕೋಲ್ಕತ್ತಾ ವಿಮಾನ ನಿಲ್ದಾಣವು ನಿನ್ನೆ ಭಾನುವಾರ ಮಧ್ಯಾಹ್ನದಿಂದ 21 ಗಂಟೆಗಳ ಕಾಲ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಕೋಲ್ಕತ್ತಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂದರು ನಿನ್ನೆ ಭಾನುವಾರ ಸಂಜೆಯಿಂದ 12 ಗಂಟೆಗಳ ಕಾಲ ಎಲ್ಲಾ ಸರಕು ಮತ್ತು ಕಂಟೈನರ್ ನಿರ್ವಹಣೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಆ ಸಮಯದಲ್ಲಿ ಬಂದರು ಪ್ರದೇಶದಲ್ಲಿ ರೈಲ್ವೆ ಕಾರ್ಯಾಚರಣೆಯನ್ನು ಸಹ ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ರೆಮಲ್ ಚಂಡಮಾರುತದ ಮೊದಲು ಬಲವಾದ ಗಾಳಿ ಬೀಸಿ ಮಳೆ ಸುರಿದಿರುವ ದೃಶ್ಯ
‘ರೆಮಲ್’ ಚಂಡಮಾರುತ ನಾಳೆ ಭಾರತದಲ್ಲಿ ತೀವ್ರ: IMD ಮುನ್ಸೂಚನೆ

ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳಿಂದ ತಲಾ 16 ಬೆಟಾಲಿಯನ್‌ಗಳನ್ನು ಕರಾವಳಿ ಪ್ರದೇಶಗಳಲ್ಲಿ ಸ್ಥಳಾಂತರಿಸಲು ಮತ್ತು ಪರಿಹಾರ ಕಾರ್ಯಗಳಿಗೆ ಸಹಾಯ ಮಾಡಲು ನಿಯೋಜಿಸಲಾಗಿದೆ.

ಪ್ರತಿಕ್ರಿಯೆ ಮತ್ತು ಸನ್ನದ್ಧತೆಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ ವಿ ಆನಂದ ಬೋಸ್ ಅವರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸಂಘಟಿತ ಪ್ರತಿಕ್ರಿಯೆಗೆ ರಾಜ್ಯ ಮತ್ತು ಕೇಂದ್ರ ತಜ್ಞರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ರಾಜ್ಯ ಸರ್ಕಾರವು ಕೋಲ್ಕತ್ತಾದ ರಾಜ್ಯ ಸಚಿವಾಲಯದಲ್ಲಿ 24/7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ರಾಜ್ಯ ಸಚಿವಾಲಯದ ಸಹಾಯವಾಣಿ ಸಂಖ್ಯೆಗಳು 1070 ಮತ್ತು (033)-22143526 ಆಗಿವೆ.

ಜನರು ಸುರಕ್ಷಿತವಾಗಿ ಸಾಧ್ಯವಾದಷ್ಟು ಮನೆಯಲ್ಲಿಯೇ ಉಳಿದುಕೊಳ್ಳುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ.

ಚಂಡಮಾರುತದ ಪ್ರಭಾವದ ಹಿನ್ನೆಲೆಯಲ್ಲಿ ಕೋಲ್ಕತ್ತಾ-ಪಾಟ್ನಾ ನಡುವೆ ಹಾರಾಟ ನಡೆಸುತ್ತಿದ್ದ ಎರಡು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇದರಿಂದಾಗಿ 700ಕ್ಕೂ ಹೆಚ್ಚು ಪ್ರಯಾಣಿಕರು ತೊಂದರೆ ಅನುಭವಿಸಿದರು.

ಹವಾಮಾನ ಇಲಾಖೆಯು ಪಶ್ಚಿಮ ಬಂಗಾಳ ಮತ್ತು ಒಡಿಶಾ ಹೊರತುಪಡಿಸಿ ಬಹುತೇಕ ಎಲ್ಲಾ ಈಶಾನ್ಯ ರಾಜ್ಯಗಳಲ್ಲಿ ಬಲವಾದ ಗಾಳಿಯೊಂದಿಗೆ ಮಳೆಯಾಗುತ್ತಿದೆ. ಚಂಡಮಾರುತದ ಪ್ರಭಾವ ಈ ರಾಜ್ಯಗಳಲ್ಲಿ ಒಂದೆರಡು ದಿನ ಇರಬಹುದು. ಸೋಮವಾರ ಹಾಗೂ ಮಂಗಳವಾರ ಅಸ್ಸಾಂ, ಮೇಘಾಲಯ, ಮಣಿಪುರ, ನಾಗಾಲ್ಯಾಂಡ್​, ಅರುಣಾಚಲಪ್ರದೇಶ ಹಾಗೂ ತ್ರಿಪುರಾದಲ್ಲಿ ಭಾರಿ ಮಳೆಯ ನಿರೀಕ್ಷೆ ಇದೆ.

ಚಂಡಮಾರುತದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಸೂಕ್ಷ್ಮ ಪ್ರದೇಶಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಹಾಗೆಯೇ ಅಪಾಯದ ಭೀತಿ ನಡುವೆ ಬಾಂಗ್ಲಾದೇಶದ ಸೂಕ್ಷ್ಮ ಪ್ರದೇಶಗಳಿಂದ ಎಂಟು ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಚಿರಾಂಗ್, ಗೋಲ್ಪಾರಾ, ಬಕ್ಸಾ, ದಿಮಾ ಹಸಾವೊ, ಕ್ಯಾಚಾರ್, ಹೈಲಕಂಡಿ ಮತ್ತು ಕರೀಮ್‌ಗಂಜ್ ಜಿಲ್ಲೆಗಳಿಗೆ ಐಎಂಡಿ ರೆಡ್ ಅಲರ್ಟ್ ನೀಡಿದರೆ, ಧುಬ್ರಿ, ದಕ್ಷಿಣ ಸಲ್ಮಾರಾ, ಬೊಂಗೈಗಾಂವ್, ಬಜಾಲಿ, ತಮುಲ್‌ಪುರ್, ಬಾರ್ಪೇಟಾದಲ್ಲಿ ಆರೆಂಜ್ ಅಲರ್ಟ್ ಜಾರಿಯಲ್ಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com