ರಾಜ್ ಕೋಟ್ ಗೇಮಿಂಗ್ ಝೋನ್ ಅಗ್ನಿ ದುರಂತ: ಮೃತಪಟ್ಟ 28 ಮಂದಿಯಲ್ಲಿ ನವ ವಿವಾಹಿತ ಜೋಡಿ, ವಧುವಿನ ಸೋದರಿ ಸಜೀವ ದಹನ!

ಶನಿವಾರ ಸಂಜೆ ಗುಜರಾತ್‌ನ ರಾಜ್‌ಕೋಟ್‌ನ ಗೇಮ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 28 ಮಂದಿ ಮೃತಪಟ್ಟಿದ್ದರು. ನವ ವಿವಾಹಿತ ದಂಪತಿಯಾದ ಅಕ್ಷಯ್ ಧೋಲಾರಿಯಾ, ಅವರ ಪತ್ನಿ ಖ್ಯಾತಿ ಮತ್ತು ಸೊಸೆ ಹರಿತಾ ಅವರು ರಾಜ್‌ಕೋಟ್‌ನ ಟಿಆರ್‌ಪಿ ಗೇಮಿಂಗ್ ಝೋನ್‌ಗೆ ಮನರಂಜನೆಗೆಂದು ಹೋಗಿದ್ದರು.
ಮೃತಪಟ್ಟ ನವ ವಿವಾಹಿತರು
ಮೃತಪಟ್ಟ ನವ ವಿವಾಹಿತರು

ರಾಜ್ ಕೋಟ್: ರಾಜ್‌ಕೋಟ್ ಗೇಮ್ ಝೋನ್ ಬೆಂಕಿ ದುರಂತದಲ್ಲಿ ಮೃತಪಟ್ಟ 28 ಮಂದಿಯಲ್ಲಿ ನವವಿವಾಹಿತ ದಂಪತಿ, ವಧುವಿನ ಸಹೋದರಿ ಕೂಡ ಸೇರಿದ್ದಾರೆ.

ಶನಿವಾರ ಸಂಜೆ ಗುಜರಾತ್‌ನ ರಾಜ್‌ಕೋಟ್‌ನ ಗೇಮ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 28 ಮಂದಿ ಮೃತಪಟ್ಟಿದ್ದರು. ನವ ವಿವಾಹಿತ ದಂಪತಿಯಾದ ಅಕ್ಷಯ್ ಧೋಲಾರಿಯಾ, ಅವರ ಪತ್ನಿ ಖ್ಯಾತಿ ಮತ್ತು ಸೊಸೆ ಹರಿತಾ ಅವರು ರಾಜ್‌ಕೋಟ್‌ನ ಟಿಆರ್‌ಪಿ ಗೇಮಿಂಗ್ ಝೋನ್‌ಗೆ ಮನರಂಜನೆಗೆಂದು ಹೋಗಿದ್ದರು.

ಕೆನಡಾದಲ್ಲಿ ಓದುತ್ತಿದ್ದ 24 ವರ್ಷದ ಅಕ್ಷಯ್, 20 ವರ್ಷದ ಖ್ಯಾತಿಯನ್ನು ಮದುವೆಯಾಗಲು ರಾಜ್‌ಕೋಟ್‌ಗೆ ಬಂದಿದ್ದರು. ದುರಂತ ಸಂಭವಿಸುವ ಒಂದು ವಾರದ ಮೊದಲಷ್ಟೇ ವಿವಾಹವಾಗಿದ್ದರು. ಅವರ ದೇಹಗಳು ಗುರುತಿಸಲಾಗದಷ್ಟು ಸುಟ್ಟುಹೋಗಿವೆ. ಅಕ್ಷಯ್ ಅವರು ಧರಿಸಿದ್ದ ಉಂಗುರದ ಸಹಾಯದಿಂದ ಗುರುತಿಸಲಾಗಿದೆ.

ಪೊಲೀಸರು ಖ್ಯಾತಿ ಮತ್ತು ಹರಿತಾ ಅವರ ಗುರುತನ್ನು ಖಚಿತಪಡಿಸಲು ಅವರ ಪೋಷಕರಿಂದ ಡಿಎನ್‌ಎ ಮಾದರಿಗಳನ್ನು ಕೇಳಿದ್ದಾರೆ.

ಮೃತಪಟ್ಟ ನವ ವಿವಾಹಿತರು
ರಾಜ್‌ಕೋಟ್‌ ಗೇಮ್‌ ಝೋನ್‌ ಬೆಂಕಿ ದುರಂತ: ಇಬ್ಬರು ಪೊಲೀಸರು, ಪಾಲಿಕೆ ಸಿಬ್ಬಂದಿ ಸೇರಿದಂತೆ 5 ಅಧಿಕಾರಿಗಳು ಅಮಾನತು

ಕೇವಲ 99 ರೂಪಾಯಿಗಳ ಟಿಕೆಟ್‌ ದರದ ವಾರಾಂತ್ಯದ ರಿಯಾಯಿತಿಯ ಕೊಡುಗೆಯಿಂದಾಗಿ ಗೇಮಿಂಗ್ ಝೋನ್ ಜನರಿಂದ ತುಂಬಿಹೋಗಿತ್ತು. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ, ಆದರೆ ನಿಖರವಾದ ಕಾರಣ ತನಿಖೆಯ ನಂತರವಷ್ಟೇ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. .

ಅಧಿಕಾರಿಗಳ ಪ್ರಕಾರ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಸ್ತುತ ಕಳೆದುಹೋದ 28 ಜೀವಗಳಲ್ಲಿ, ಅವರಲ್ಲಿ ನಾಲ್ವರು 12 ವರ್ಷದೊಳಗಿನ ಮಕ್ಕಳು ಸೇರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com