ಕನ್ಯಾಕುಮಾರಿ: ವಿವೇಕಾನಂದ ಸ್ಮಾರಕದಲ್ಲಿ ಮೇ 30ರಿಂದ 3 ದಿನ ಪ್ರಧಾನಿ ಮೋದಿ ಧ್ಯಾನ!

ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ಕಾಗಿ ಕಳೆದ ಎರಡೂವರೆ ತಿಂಗಳಿಂದ ದೇಶಾದ್ಯಂತ ಸಂಚರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೊನೇ ಹಂತದ ಚುನಾವಣಾ ಪ್ರಚಾರ ಮುಗಿದ ಬಳಿಕ, ಮೇ 30ರಂದು ತಮಿಳುನಾಡಿನ ಕನ್ಯಾಕುಮಾರಿಗೆ ಆಧ್ಯಾತ್ಮಿಕ ಪ್ರವಾಸ ಕೈಗೊಳ್ಳಲಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ
Updated on

ನವದೆಹಲಿ: ದೇಶದಲ್ಲಿ ಆರು ಹಂತದಲ್ಲಿ ಲೋಕಸಭೆ ಚುನಾವಣೆಗಳು ಮುಗಿದಿದ್ದು, ಇನ್ನು ಕೇವಲ ಒಂದು ಹಂತದ ಚುನಾವಣಾ ಮತದಾನ ಮಾತ್ರ ಬಾಕಿ ಇದೆ. ಜೂನ್‌ 1 ರಂದು ಕೊನೆಯ ಹಂತದ ಚುನಾವಣೆ ನಡೆಯಲಿದೆ. ಇದಾದ ಬಳಿಕ ಜೂನ್‌ 4 ರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ.

ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ಕಾಗಿ ಕಳೆದ ಎರಡೂವರೆ ತಿಂಗಳಿಂದ ದೇಶಾದ್ಯಂತ ಸಂಚರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೊನೇ ಹಂತದ ಚುನಾವಣಾ ಪ್ರಚಾರ ಮುಗಿದ ಬಳಿಕ, ಮೇ 30ರಂದು ತಮಿಳುನಾಡಿನ ಕನ್ಯಾಕುಮಾರಿಗೆ ಆಧ್ಯಾತ್ಮಿಕ ಪ್ರವಾಸ ಕೈಗೊಳ್ಳಲಿದ್ದಾರೆ.

ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ್ದ ಸ್ಥಳವಾದ ವಿವೇಕಾನಂದ ರಾಕ್‌ ಮೆಮೋರಿಯಲ್‌ಗೆ ಭೇಟಿ ನೀಡಲಿರುವ 73 ವರ್ಷ ವಯಸ್ಸಿನ ಪ್ರಧಾನಿ ನರೇಂದ್ರ ಮೋದಿ, ಅಲ್ಲಿ 48 ಗಂಟೆಗಳ ಕಾಲ ಧ್ಯಾನದಲ್ಲಿ ತಲ್ಲೀನರಾಗಲಿದ್ದಾರೆ. ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರುವ ಗುರಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂಜೆ ಕನ್ಯಾಕುಮಾರಿಯ ವಿವೇಕಾನಂದ ರಾಕ್ ಮೆಮೋರಿಯಲ್‌ಗೆ ಆಗಮಿಸಲಿದ್ದಾರೆ. ಕನ್ಯಾ ಕುಮಾರಿಯ ಕರಾವಳಿಯಿಂದ ಸುಮಾರು 400 ಮೀಟರ್ ದೂರದಲ್ಲಿರುವ ಬಂಡೆಯ ಮೇಲಿರುವ ವಿವೇಕಾನಂದ ರಾಕ್ ಸ್ಮಾರಕದ 'ಧ್ಯಾನ ಮಂಟಪ'ದಲ್ಲಿ ಸುಮಾರು 45 ಗಂಟೆಗಳು (ಮೇ 30 ಸಂಜೆಯಿಂದ ಜೂನ್ 1 ಸಂಜೆ) ಧ್ಯಾನ ಮಾಡಲಿದ್ದಾರೆ.

ನರೇಂದ್ರ ಮೋದಿ
7 ಗಂಟೆಗಳ ಕಾಲ 'ಭಾರತ ಉಳಿಸಿ' ಧ್ಯಾನ ಆರಂಭಿಸಿದ ದೆಹಲಿ ಸಿಎಂ ಕೇಜ್ರಿವಾಲ್

ಈ ಬಂಡೆಯು ಲಕ್ಕಾಡಿವ್ ಸಮುದ್ರದಿಂದ ಆವೃತವಾಗಿದೆ, ಅಲ್ಲಿ ಬಂಗಾಳ ಕೊಲ್ಲಿ, ಹಿಂದೂ ಮಹಾಸಾಗರ ಮತ್ತು ಅರೇಬಿಯನ್ ಸಮುದ್ರಗಳು ಸಂಧಿಸುತ್ತದೆ. ಸ್ವಾಮಿ ವಿವೇಕಾನಂದರು ದಶಕಗಳ ಹಿಂದೆ ಧ್ಯಾನ ಮಾಡಿದ್ದರೆಂದು ನಂಬಲಾದ ಅದೇ ಸ್ಥಳದಲ್ಲಿ ಪ್ರಧಾನಿ ಹಗಲು ರಾತ್ರಿ ಧ್ಯಾನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಿಎಂ ಮೋದಿ ಮೇ 30 ರ ಸಂಜೆ ತಮ್ಮ ಧ್ಯಾನವನ್ನು ಪ್ರಾರಂಭಿಸುತ್ತಾರೆ ಮತ್ತು ಜೂನ್ 1 ರ ಸಂಜೆ ಅದನ್ನು ಮುಕ್ತಾಯಗೊಳಿಸುತ್ತಾರೆ ಎಂದು ಹೇಳಲಾಗಿದೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಕನ್ಯಾಕುಮಾರಿ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದೆ. ಅವರ ತಾತ್ಕಾಲಿಕ ಪ್ರವಾಸ ಕಾರ್ಯಕ್ರಮದ ಪ್ರಕಾರ, ಪ್ರಧಾನಿಯವರು ಮೇ 30 ರಂದು (ಗುರುವಾರ) ತಿರುವನಂತಪುರಂ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ನಲ್ಲಿ 3.55 ಕ್ಕೆ ಹೊರಟು ಸಂಜೆ 4.35 ಕ್ಕೆ ಕನ್ಯಾಕುಮಾರಿ ಹೆಲಿಪ್ಯಾಡ್‌ಗೆ ಆಗಮಿಸುತ್ತಾರೆ. ನಂತರ ಅವರು ಹೆಲಿಪ್ಯಾಡ್ ಬಳಿಯ ರಾಜ್ಯ ಅತಿಥಿ ಗೃಹದಲ್ಲಿ ಸುಮಾರು 30 ನಿಮಿಷಗಳ ಕಾಲ ಕಳೆಯಲಿದ್ದಾರೆ.

ನಂತರ ಅವರು ರಸ್ತೆಯ ಮೂಲಕ ಬೋಟ್ ಜೆಟ್ಟಿಯನ್ನು ತಲುಪಿ ವಿವೇಕಾನಂದ ರಾಕ್‌ಗೆ ದೋಣಿಯಲ್ಲಿ ಹೊರಟು ಸಂಜೆ 5.40 ಕ್ಕೆ ತಲುಪಲಿದ್ದಾರೆ. ಪ್ರಧಾನಿಯವರು ಜೂನ್ 1 (ಶನಿವಾರ) ಮಧ್ಯಾಹ್ನ 3 ಗಂಟೆಯವರೆಗೆ ಅಲ್ಲಿಯೇ ಇರುತ್ತಾರೆ. ನಂತರ ದೋಣಿಯಲ್ಲಿ ಜೆಟ್ಟಿಗೆ ಹಿಂತಿರುಗಿ ರಸ್ತೆ ಮೂಲಕ ಹೆಲಿಪ್ಯಾಡ್ ತಲುಪಿ 3.25ಕ್ಕೆ ಹೆಲಿಕಾಪ್ಟರ್‌ನಲ್ಲಿ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ.

ನರೇಂದ್ರ ಮೋದಿ
LokSabha Election 2024: ಲವ್​ ಜಿಹಾದ್ ಶುರುವಾಗಿದ್ದೇ ಜಾರ್ಖಂಡ್​ನಿಂದ!: JMM ವಿರುದ್ಧ ಪ್ರಧಾನಿ ಮೋದಿ

ಮಂಗಳವಾರ, ತಿರುನಲ್ವೇಲಿ ಡಿಐಜಿ ಪ್ರವೇಶ್ ಕುಮಾರ್ ಅವರು ಎಸ್ಪಿ ಇ ಸುಂದರವತನಂ ಅವರೊಂದಿಗೆ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಸ್ಮಾರಕ ಬಂಡೆ, ಬೋಟ್ ಜೆಟ್ಟಿ, ಹೆಲಿಪ್ಯಾಡ್ ಮತ್ತು ರಾಜ್ಯ ಅತಿಥಿ ಗೃಹದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ವಿವೇಕಾನಂದ ಕೇಂದ್ರದ ಆವರಣದಲ್ಲಿ ಪ್ರಧಾನಿ ಭೇಟಿಗೆ ಸಂಬಂಧಿಸಿದ ವ್ಯವಸ್ಥೆಗಳ ಕುರಿತು ಆರೋಗ್ಯ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಯಿತು.

ಪ್ರಧಾನಿಯವರ ಪ್ರಮುಖ ಭದ್ರತಾ ತಂಡ ಕೂಡ ಸ್ಥಳಕ್ಕೆ ತಲುಪಿದೆ. ಹೆಲಿಕಾಪ್ಟರ್‌ನ ಪ್ರಾಯೋಗಿಕ ಲ್ಯಾಂಡಿಂಗ್ ಅನ್ನು ಹೆಲಿಪ್ಯಾಡ್‌ನಲ್ಲಿ ನಡೆಸಲಾಯಿತು. ಕನ್ಯಾ ಕುಮಾರಿ ಮತ್ತು ಸುತ್ತಮುತ್ತ 2,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಧಾನಿಯವರು 45 ಗಂಟೆಗಳ ಕಾಲ ರಾಕ್ ಸ್ಮಾರಕದಲ್ಲಿ ತಂಗಲಿರುವುದರಿಂದ, ಕರಾವಳಿ ಭದ್ರತಾ ಗುಂಪು, ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ), ಮತ್ತು ಭಾರತೀಯ ನೌಕಾಪಡೆಯು ಕನ್ಯಾಕುಮಾರಿಗೆ ಸೂಕ್ತ ಭದ್ರತೆ ಕಲ್ಪಿಸಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com