
ಕನ್ಯಾಕುಮಾರಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಧ್ಯಾನದ ಅಂಗವಾಗಿ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಕಲ್ಲಿನ ಸ್ಮಾರಕದಲ್ಲಿ ಶುಕ್ರವಾರ ಸೂರ್ಯೋದಯದ ಸಮಯದಲ್ಲಿ 'ಸೂರ್ಯ ಅರ್ಘ್ಯ' ನೀಡಿದರು.
'ಸೂರ್ಯ ಅರ್ಘ್ಯ' ಎಂಬ ಧಾರ್ಮಿಕ ಆಚರಣೆಗೆ ಸಂಬಂಧಿಸಿದ ಸರ್ವಶಕ್ತನಿಗೆ ನಮಸ್ಕಾರಗಳನ್ನು ಒಳಗೊಂಡಿರುವ ಒಂದು ಆಚರಣೆಯನ್ನು ನಡೆಸಿದರು, ನಂತರ ಕೈ ಜೋಡಿಸಿ ಪ್ರಾರ್ಥನೆಗಳನ್ನು ಸಲ್ಲಿಸಿದರು.
'ಸೂರ್ಯೋದಯ, ಸೂರ್ಯ ಅರ್ಘ್ಯ, ಆಧ್ಯಾತ್ಮಿಕತೆ' ಎಂಬ ಕಿರು ವೀಡಿಯೊ ಕ್ಲಿಪ್ ನ್ನು ಬಿಜೆಪಿ ತನ್ನ 'ಎಕ್ಸ್' ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದು, ಪ್ರಧಾನ ಮಂತ್ರಿಯವರು ಸಾಂಪ್ರದಾಯಿಕವಾಗಿ ಚೆಂಬಿನಲ್ಲಿ ಸಣ್ಣ ಪಾತ್ರೆಯಿಂದ ಸ್ವಲ್ಪ ನೀರನ್ನು ಸಮುದ್ರಕ್ಕೆ ನೈವೇದ್ಯವಾಗಿ (ಅರ್ಘ್ಯ) ನೀಡಿ ಪ್ರಾರ್ಥಿಸುತ್ತಾರೆ. ಪ್ರಾರ್ಥನಾ ಮಣಿಗಳನ್ನು (ಜಪ ಮಾಲಾ) ಬಳಸಿ ಜಪ ಮಾಡುತ್ತಾರೆ.
ಕೇಸರಿ ಅಂಗಿ, ಶಾಲು ಮತ್ತು ಧೋತಿ ಧರಿಸಿ ಧ್ಯಾನ ಮಂಟಪದಲ್ಲಿ ಧ್ಯಾನದಲ್ಲಿ ಮಗ್ನರಾಗಿರುವ ಪ್ರಧಾನಿಯವರ ಮುಂದೆ ಧೂಪದ್ರವ್ಯದ ತುಂಡುಗಳು ನಿಧಾನವಾಗಿ ಉರಿಯುತ್ತಿರುವುದನ್ನು ಕಾಣಬಹುದು. ಮೋದಿ ಕೂಡ ಜಪ ಮಾಲೆಯನ್ನು ಕೈಯಲ್ಲಿ ಹಿಡಿದುಕೊಂಡು ಮಂಟಪವನ್ನು ಸುತ್ತಿದರು. ಧ್ಯಾನ ಭಂಗಿಯಲ್ಲಿರುವ ಮೋದಿಯವರ ಫೋಟೋ-ವಿಡಿಯೊಗಳು ಸಾಕಷ್ಟು ಹರಿದಾಡುತ್ತಿವೆ.
ಕನ್ಯಾಕುಮಾರಿಯು ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದೆ. ವಿವೇಕಾನಂದ ಸ್ಮಾರಕವು ತೀರದ ಸಮೀಪವಿರುವ ಒಂದು ಸಣ್ಣ ದ್ವೀಪದಲ್ಲಿದೆ. ವಿವೇಕಾನಂದ ಸ್ಮಾರಕದಲ್ಲಿ ನಿನ್ನೆ ಸಂಜೆ ಪ್ರಧಾನಮಂತ್ರಿಯವರು ಧ್ಯಾನ ಪ್ರಾರಂಭಿಸಿದ್ದು, ನಾಳೆ ಜೂನ್ 1 ರ ಸಂಜೆ ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ.
Advertisement