ನವದೆಹಲಿ: ದೀಪಾವಳಿಯಲ್ಲಿ ಪಟಾಕಿ ಅವಘಡದಿಂದ ರಾಷ್ಟ್ರ ರಾಜಧಾನಿಯ ಅನೇಕ ಆಸ್ಪತ್ರೆಗಳಲ್ಲಿ 280 ಸುಟ್ಟ ಗಾಯದ ಪ್ರಕರಣಗಳು ವರದಿಯಾಗಿರುವುದಾಗಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ದೇಶದಲ್ಲಿಯೇ ಅತಿ ಹೆಚ್ಚು ಸುಟ್ಟ ಗಾಯದ ಘಟಕ ಹೊಂದಿರುವ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಗುರುವಾರ ಅತಿ ಹೆಚ್ಚು 117 ಪ್ರಕರಣ ವರದಿಯಾಗಿದ್ದರೆ, ನಂತರ ಏಮ್ಸ್ ನಲ್ಲಿ 48, LNJP ಆಸ್ಪತ್ರೆಯಲ್ಲಿ 19 ಪ್ರಕರಣಗಳು ವರದಿಯಾಗಿವೆ.
ಒಟ್ಟು ಗಾಯಾಳುಗಳ ಪೈಕಿ 102 ಮಂದಿ ಅಲ್ಪ ಪ್ರಮಾಣದ ಸುಟ್ಟಗಾಯದಿಂದ ಬಳಲುತ್ತಿದ್ದು, ಅವರನ್ನು ಹೊರರೋಗಿಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗತ್ತಿದೆ. ಗಂಭೀರವಾಗಿ ಗಾಯಗೊಂಡಿರುವ 15 ಮಂದಿ ಆಸ್ಪತ್ರೆಗೆ ದಾಖಲಾಗಿದೆ ಎಂದು ಆಸ್ಪತ್ರೆಗಳು ತಿಳಿಸಿವೆ.
20 ರೋಗಿಗಳು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದಾರೆ. 86 ಪ್ರಕರಣಗಳು ಪಟಾಕಿ ಮತ್ತು 31 ಹಣತೆಯಿಂದ ಸುಟ್ಟ ಗಾಯದ ಪ್ರಕರಣಗಳಾಗಿವೆ. ಪಟಾಕಿ ಸಿಡಿತದಿಂದ ಕೈಗೆ ತೀವ್ರ ಪೆಟ್ಟಾದ ಕಾರಣ ಐವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ದೀಪಾವಳಿಗೂ ಮುನ್ನಾ ಅಕ್ಟೋಬರ್ 30 ರಂದು ಸಫ್ದರ್ಜಂಗ್ ಆಸ್ಪತ್ರೆಯಲ್ಲಿ 18 ಸುಟ್ಟಗಾಯದ ಪ್ರಕರಣಗಳು ದಾಖಲಾಗಿತ್ತು. AIIMS ನಲ್ಲಿ ನಿನ್ನೆ ಸಂಜೆ 7 ಗಂಟೆಯಿಂದ ಇಂದು ಬೆಳಗ್ಗೆಯವರೆಗೂ 48 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 32 ಕೇಸ್ ಗಳು ಪಟಾಕಿ ಸಿಡಿತದಿಂದ ಆಗಿವೆ ಎಂದು ಪ್ರೊಫೆಸರ್ ಡಾ.ರಿಮಾ ಡಾಡಾ ತಿಳಿಸಿದ್ದಾರೆ.
ಈ ಮಧ್ಯೆ LNJP ಆಸ್ಪತ್ರೆಯಲ್ಲಿ ದೀಪಾವಳಿ ಆಚರಣೆ ವೇಳೆಯಲ್ಲಿ 19 ಸುಟ್ಟ ಗಾಯದ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
Advertisement