ದಿಂಡಿಗಲ್: ನದಿಯನ್ನು ಕಾಲ್ನಡಿಗೆ ಮೂಲಕ ಕಷ್ಟಪಟ್ಟು ದಾಟಿ ಹೋಗಿ ದಿಂಡುಗಲ್ ನಾಥಂನಲ್ಲಿರುವ ಸ್ಮಶಾನದಲ್ಲಿ ಸಂಜೆ 12 ಕ್ಕೂ ಹೆಚ್ಚು ಗ್ರಾಮಸ್ಥರು ಸಂಬಂಧಿಕರೊಂದಿಗೆ ಹೋಗಿ ವೃದ್ಧರೊಬ್ಬರ ಅಂತಿಮ ಕಾರ್ಯ ನಡೆಸಿದ ಘಟನೆ ನಡೆದಿದೆ. 10 ಲಕ್ಷ ರೂಪಾಯಿ ವೆಚ್ಚದಲ್ಲಿ ನದಿಗೆ ಅಡ್ಡಲಾಗಿ ಲೋಹದ ಸೇತುವೆ ನಿರ್ಮಿಸಲು ಜಿಲ್ಲಾಡಳಿತ ಮುಂದಾಗಿದ್ದರೂ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ನಾಥಂ ಸಮೀಪದ ಸಮುದ್ರಪಟ್ಟಿ ಗ್ರಾಮದಲ್ಲಿ 1,500 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಗ್ರಾಮದ ನಿವಾಸಿ ಪೆರಿಯಂ ಪಿಳ್ಳೈ (73ವ) ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾಗಿದ್ದಾರೆ. ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಗ್ರಾಮಸ್ಥರು ಎದುರು ಭಾಗದಲ್ಲಿರುವ ತಿರುಮಣಿಮುತ್ತರ್ ನದಿಯ ದಡದಲ್ಲಿರುವ ಸ್ಮಶಾನವನ್ನು ಮೃತ ಶರೀರಗಳ ಅಂತಿಮ ಕಾರ್ಯವಿಧಾನಕ್ಕೆ ಬಳಸುತ್ತಿದ್ದರು. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳು ಪ್ರತ್ಯೇಕ ಸ್ಮಶಾನಗಳನ್ನು ಹೊಂದಿದ್ದರೆ, ಹಿಂದೂಗಳು ಸಮಾಧಿಗಾಗಿ ನದಿಯನ್ನು ದಾಟಿ ಹೋಗಬೇಕು.
ಪೆರಿಯಂ ಪಿಳ್ಳೈ ಅವರ ಪಾರ್ಥಿವ ಶರೀರವನ್ನು ಸಾಗಿಸುವ ಮೊದಲು ಕೆಲವು ಹಳ್ಳಿಗರು ನೀರು ಕಡಿಮೆಯಾಗುವವರೆಗೆ ಕಾಯಲು ನಿರ್ಧರಿಸಿದರು. ಆದರೆ, ಬೇರೆ ಸಮಾಧಿ ಸ್ಥಳ ಇಲ್ಲದ ಕಾರಣ ಹಲವರು ಆತಂಕಗೊಂಡಿದ್ದರು. ದೇಹವು ಕೊಳೆಯುವ ಸಾಧ್ಯತೆಯಿರುವುದರಿಂದ, ಅಪಾಯದ ಹೊರತಾಗಿಯೂ ಅವರು ನದಿಯನ್ನು ದಾಟಿ ಹೋಗಿ ಶವಸಂಸ್ಕಾರ ನಡೆಸಲು ನಿರ್ಧರಿಸಿದರು.
ಗ್ರಾಮಸ್ಥರೊಂದಿಗೆ ಎಂಟು ಕುಟುಂಬ ಸದಸ್ಯರು ನದಿಗೆ ಇಳಿದರು. ನೀರು ಎದೆಯ ಮಟ್ಟಕ್ಕೆ ಬಂದಿತ್ತು. ಅಪಾಯಸ್ಥಿತಿಯಲ್ಲಿಯೂ ನದಿಯಲ್ಲಿ ಗ್ರಾಮಸ್ಥರು ದಾಟಿಹೋಗಿ ಸಂಜೆಯ ವೇಳೆಗೆ ವೃದ್ಧರ ಸಮಾಧಿ ಮಾಡಿದರು.
ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಜೊತೆಗೆ ಮಾತನಾಡಿದ ಜಿಲ್ಲಾಡಳಿತದ ಉನ್ನತ ಅಧಿಕಾರಿಯೊಬ್ಬರು, ‘ಗ್ರಾಮಸ್ಥರ ಸಮಸ್ಯೆ ಬಹುಕಾಲದಿಂದ ಬಾಕಿ ಉಳಿದಿದ್ದು, ನದಿಯು ಪಿಡಬ್ಲ್ಯುಡಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. 10 ಲಕ್ಷ ರೂಪಾಯಿ ವೆಚ್ಚದಲ್ಲಿ ಲೋಹದ ಸೇತುವೆ ನಿರ್ಮಿಸುವ ಪ್ರಸ್ತಾವನೆಯನ್ನು ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳು ಒಪ್ಪಿಕೊಂಡಿದ್ದರು. ನದಿಯು ಒಂದು ಸ್ಥಳದಲ್ಲಿ ಲಂಬವಾಗಿ ಬಾಗಿದಂತಾಗುತ್ತದೆ, ಆದ್ದರಿಂದ ಸೇತುವೆಯನ್ನು ನಿರ್ಮಿಸುವುದು ಕಷ್ಟ. ಹರಿಯುವ ಕಣಿವೆಯಿಂದ ಕೆಲವು ಮೀಟರ್‌ಗಳ ಮುಂದೆ ಸೇತುವೆಯನ್ನು ನಿರ್ಮಿಸುವುದು ಅಥವಾ ಮೃತಪಟ್ಟವರ ಸಮಾಧಿ ಸ್ಥಳ ಬೇರೆಡೆಗೆ ಸ್ಥಳಾಂತರಿಸುವುದು ಇರುವ ಮಾರ್ಗವಾಗಿದೆ ಎಂದರು.
Advertisement