ಜಮ್ಮು-ಕಾಶ್ಮೀರ: ಶ್ರೀನಗರದ ಜನನಿಬಿಡ ಮಾರುಕಟ್ಟೆ ಮೇಲೆ ಗ್ರೆನೇಡ್ ದಾಳಿ, 12 ಮಂದಿಗೆ ಗಂಭೀರ ಗಾಯ!

ಕಳೆದ ಕೆಲವು ದಿನಗಳಿಂದ ಕಣಿವೆಯ ಕೆಲವು ಭಾಗಗಳಲ್ಲಿ ಉಗ್ರ ದಾಳಿಗಳು ಮತ್ತು ಎನ್‌ಕೌಂಟರ್‌ಗಳು ಹೆಚ್ಚಾಗುತ್ತಿವೆ. ಶ್ರೀನಗರದ 'ಸಂಡೇ ಮಾರ್ಕೆಟ್'ನಲ್ಲಿ ಮುಗ್ಧ ವ್ಯಾಪಾರಿಗಳ ಮೇಲೆ ಗ್ರೆನೇಡ್ ದಾಳಿಯ ಸುದ್ದಿಯು ತೀವ್ರ ಕಳವಳಕಾರಿಯಾಗಿದೆ.
ಜಮ್ಮು-ಕಾಶ್ಮೀರ: ಶ್ರೀನಗರದ ಜನನಿಬಿಡ ಮಾರುಕಟ್ಟೆ ಮೇಲೆ ಗ್ರೆನೇಡ್ ದಾಳಿ, 12 ಮಂದಿಗೆ ಗಂಭೀರ ಗಾಯ!
TNIE
Updated on

ಶ್ರೀನಗರ: ಶ್ರೀನಗರದ ಪ್ರವಾಸಿ ಸ್ವಾಗತ ಕೇಂದ್ರ (ಟಿಆರ್‌ಸಿ) ಬಳಿ ಗ್ರೆನೇಡ್ ಸ್ಫೋಟದಲ್ಲಿ ಕನಿಷ್ಠ 12 ನಾಗರಿಕರು ಗಾಯಗೊಂಡಿದ್ದಾರೆ. ವಾರಕ್ಕೊಮ್ಮೆ ನಡೆಯುವ 'ಸಂಡೇ ಮಾರ್ಕೆಟ್‌'ಗೆ ಈ ಪ್ರದೇಶದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದಾಗ ಸ್ಫೋಟ ಸಂಭವಿಸಿದೆ.

ಘಟನೆಯ ಕುರಿತು ಅಧಿಕಾರಿಯೊಬ್ಬರು, ಜನನಿಬಿಡ ಮಾರುಕಟ್ಟೆ ಮೇಲೆ ಭಯೋತ್ಪಾದಕರು ಗ್ರೆನೇಡ್ ಎಸೆದು ಪರಾರಿಯಾಗಿದ್ದಾರೆ. ಗ್ರೆನೇಡ್ ದಾಳಿಯಲ್ಲಿ ಅನೇಕ ನಾಗರಿಕರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ SMHS ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಲಾಗಿದ್ದು ಪ್ರದೇಶವನ್ನು ಸುತ್ತುವರಿಯಲಾಗಿದೆ. ದಾಳಿಕೋರರನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ ಎಂದು ಹೇಳಿದರು. ಗಾಯಗೊಂಡವರೆಲ್ಲರೂ ಸ್ಥಿರವಾಗಿದ್ದಾರೆ ಎಂದು ಶ್ರೀನಗರದ ಎಸ್‌ಎಂಎಚ್‌ಎಸ್‌ನ ವೈದ್ಯರು ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಕಣಿವೆಯ ಕೆಲವು ಭಾಗಗಳಲ್ಲಿ ಉಗ್ರ ದಾಳಿಗಳು ಮತ್ತು ಎನ್‌ಕೌಂಟರ್‌ಗಳು ಹೆಚ್ಚಾಗುತ್ತಿವೆ. ಶ್ರೀನಗರದ 'ಸಂಡೇ ಮಾರ್ಕೆಟ್'ನಲ್ಲಿ ಮುಗ್ಧ ವ್ಯಾಪಾರಿಗಳ ಮೇಲೆ ಗ್ರೆನೇಡ್ ದಾಳಿಯ ಸುದ್ದಿಯು ತೀವ್ರ ಕಳವಳಕಾರಿಯಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ಜಮ್ಮು-ಕಾಶ್ಮೀರ: ಶ್ರೀನಗರದ ಜನನಿಬಿಡ ಮಾರುಕಟ್ಟೆ ಮೇಲೆ ಗ್ರೆನೇಡ್ ದಾಳಿ, 12 ಮಂದಿಗೆ ಗಂಭೀರ ಗಾಯ!
ಜಮ್ಮು-ಕಾಶ್ಮೀರ: ಪ್ರತ್ಯೇಕ ಎನ್ ಕೌಂಟರ್, ಮೂವರು ಉಗ್ರರ ಹತ್ಯೆ, ನಾಲ್ವರು ಭದ್ರತಾ ಸಿಬ್ಬಂದಿಗೆ ಗಾಯ

ನಿನ್ನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಓರ್ವ ಪಾಕ್ ಭಯೋತ್ಪಾದಕ ಸೇರಿ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದ ಬೆನ್ನಲ್ಲೇ ಈ ಗ್ರೆನೇಡ್ ದಾಳಿ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com