ಪಕ್ಷಪಾತ ಮತ್ತು ತಪ್ಪು ಮಾಹಿತಿ ಆರೋಪ: ವಿಕಿಪೀಡಿಯಾಗೆ ಕೇಂದ್ರ ಸರ್ಕಾರ ನೊಟೀಸ್

ವಿಕಿಪೀಡಿಯಾವನ್ನು ಮಧ್ಯವರ್ತಿಯಾಗಿ ಪರಿಗಣಿಸುವ ಬದಲು ಪ್ರಕಾಶಕ ಎಂದು ಏಕೆ ಪರಿಗಣಿಸಬಾರದು ಎಂದು ಕೇಂದ್ರವು ತನ್ನ ನೋಟಿಸ್‌ನಲ್ಲಿ ಕೇಳಿದೆ.
Wikipedia
ವಿಕಿಪೀಡಿಯಾ
Updated on

ನವದೆಹಲಿ: ಪ್ರಮುಖ ಸರ್ಚ್ ತಾಣ ವಿಕಿಪೀಡಿಯಾಕ್ಕೆ ಕೇಂದ್ರ ಸರ್ಕಾರವು ಮಂಗಳವಾರ ನೊಟೀಸ್ ನೀಡಿದ್ದು, ಸೈಟ್‌ನಲ್ಲಿ ಪಕ್ಷಪಾತ ಮತ್ತು ತಪ್ಪುಗಳು ಪ್ರಕಟವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದೆ. ವಿಕಿಪೀಡಿಯಾ ಸಂಪಾದಕೀಯ ನಿಯಂತ್ರಣವನ್ನು ಒಂದು ಸಣ್ಣ ಗುಂಪು ಹಿಡಿದಿಟ್ಟುಕೊಂಡಿದೆ ಎಂದು ಹೇಳಿದೆ.

ವಿಕಿಪೀಡಿಯಾವನ್ನು ಮಧ್ಯವರ್ತಿಯಾಗಿ ಪರಿಗಣಿಸುವ ಬದಲು ಪ್ರಕಾಶಕ ಎಂದು ಏಕೆ ಪರಿಗಣಿಸಬಾರದು ಎಂದು ಕೇಂದ್ರವು ತನ್ನ ನೋಟಿಸ್‌ನಲ್ಲಿ ಕೇಳಿದೆ.

ವಿಕಿಪೀಡಿಯಾ ತನ್ನನ್ನು ಉಚಿತ ಆನ್‌ಲೈನ್ ವಿಶ್ವಕೋಶವಾಗಿ ಪ್ರಸ್ತುತಪಡಿಸುತ್ತದೆ, ಬಳಕೆದಾರರು ವಿವಿಧ ವಿಷಯಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಮೇಲೆ ಪುಟಗಳನ್ನು ರಚಿಸಲು ಮತ್ತು ತಿದ್ದಲು ಅವಕಾಶ ನೀಡುತ್ತದೆ. ಹೀಗೆ ವ್ಯಾಪಕವಾಗಿ ಬಳಸಲಾಗುವ ವೇದಿಕೆಯು ಪ್ರಸ್ತುತ ಭಾರತದಲ್ಲಿ ಕಾನೂನು ಹೋರಾಟಗಳಲ್ಲಿ ಸಿಕ್ಕಿಹಾಕಿಕೊಂಡಿದೆ, ತಪ್ಪಾದ ಮತ್ತು ಮಾನಹಾನಿಕರ ವಿಷಯವನ್ನು ವಿಕಿಪೀಡಿಯಾ ಜನತೆಗೆ ನೀಡುತ್ತಿದೆ ಎಂದು ಆರೋಪಗಳನ್ನು ಎದುರಿಸುತ್ತಿದೆ.

ವಿಕಿಪೀಡಿಯಾದ ಮುಕ್ತ ತಿದ್ದುವಿಕೆ ಗುಣ 'ಅಪಾಯಕಾರಿ' ಎಂದು ಟೀಕಿಸಿದ ದೆಹಲಿ ಹೈಕೋರ್ಟ್ ಸೆಪ್ಟೆಂಬರ್‌ನಲ್ಲಿ ನೀಡಿದ ತೀರ್ಪನ್ನು ಅನುಸರಿಸಿ ಈ ಸೂಚನೆ ನೀಡಲಾಗಿದೆ. ವೇದಿಕೆಯ ವಿರುದ್ಧ ಸುದ್ದಿ ಸಂಸ್ಥೆಯೊಂದು ಸಲ್ಲಿಸಿದ ಮಾನನಷ್ಟ ಮೊಕದ್ದಮೆಯ ಸಂದರ್ಭದಲ್ಲಿ ನ್ಯಾಯಾಲಯದ ಈ ಹೇಳಿಕೆ ಬಂದಿದೆ, ಅಲ್ಲಿ ನ್ಯಾಯಾಧೀಶರು 'ಯಾರಾದರೂ' ವಿಕಿಪೀಡಿಯಾ ಪುಟವನ್ನು ತಿದ್ದಬಹುದು. ಅನಿರ್ಬಂಧಿತ ತಿದ್ದುವಿಕೆ, ಸಂಪಾದನೆಗೆ ಸಂಬಂಧಿಸಿದ ಸಂಭಾವ್ಯ ಅಪಾಯಗಳನ್ನು ನ್ಯಾಯಾಲಯವು ಉಲ್ಲೇಖಿಸಿದೆ.

ನ್ಯಾಯಾಲಯದ ಕಳವಳಗಳಿಗೆ ಪ್ರತಿಕ್ರಿಯೆಯಾಗಿ, ವಿಕಿಪೀಡಿಯದ ಕಾನೂನು ಪ್ರತಿನಿಧಿಗಳು, ವಿಷಯವನ್ನು ರಚಿಸುವಾಗ ಅಥವಾ ನವೀಕರಿಸುವಾಗ ಕಾನೂನು ಮಾರ್ಗಸೂಚಿಗಳಿಗೆ ಬದ್ಧವಾಗಿರಬೇಕು ಎಂದು ಭರವಸೆ ನೀಡಿದರು. ಬಳಕೆದಾರರ ಕೊಡುಗೆಗಳನ್ನು ನಿಯಂತ್ರಿಸಲು ಮತ್ತು ಕಾನೂನಿನ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಪ್ಲಾಟ್‌ಫಾರ್ಮ್ ನೀತಿಗಳನ್ನು ಸ್ಥಾಪಿಸಿದೆ ಎಂದು ಉಲ್ಲೇಖಿಸಿದೆ.

2000 ದಶಕದ ಆರಂಭದಲ್ಲಿ ಪ್ರಾರಂಭವಾದ ವಿಕಿಪೀಡಿಯಾವು ಜನತೆಗೆ ಜ್ಞಾನ ಮತ್ತು ಮಾಹಿತಿಯನ್ನು ಸುಲಭವಾಗಿ ನೀಡಲು ವಿನ್ಯಾಸಗೊಳಿಸಲಾಗಿದೆ. ಕಳೆದ ಎರಡು ದಶಕಗಳಲ್ಲಿ, ವೇದಿಕೆಯು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಇಂದು, ವಿಕಿಪೀಡಿಯಾವು 300 ಕ್ಕೂ ಹೆಚ್ಚು ಭಾಷೆಗಳಲ್ಲಿ 56 ಮಿಲಿಯನ್ ಲೇಖನಗಳನ್ನು ಹೊಂದಿದೆ, ಅದರ ಸರಿಸುಮಾರು ಶೇಕಡಾ 89ರಷ್ಟು ವಿಷಯವು ಇಂಗ್ಲಿಷ್ ಹೊರತುಪಡಿಸಿ ಇತರ ಭಾಷೆಗಳಲ್ಲಿ ಲಭ್ಯವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com