ಜಾರ್ಖಂಡ್ ಆದಿವಾಸಿಗಳಿಗೆ ಸೇರಿದ್ದು, ಈ ರಾಜ್ಯವನ್ನು ಅವರೇ ಆಳುತ್ತಾರೆ: ಸಿಎಂ ಸೊರೆನ್

JMM ಕಾರ್ಯಕಾರಿ ಅಧ್ಯಕ್ಷರೂ ಆಗಿರುವ ಸೊರೆನ್ ಅವರು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
Hemant Soren
ಸಿಎಂ ಹೇಮಂತ್ ಸೊರೆನ್
Updated on

ಚೈಬಾಸಾ: ಜಾರ್ಖಂಡ್ ಆದಿವಾಸಿಗಳು ಸೇರಿದ್ದು, ಈ ರಾಜ್ಯವನ್ನು ಅವರೇ ಆಳುತ್ತಾರೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಹೇಳಿದ್ದಾರೆ.

JMM ಕಾರ್ಯಕಾರಿ ಅಧ್ಯಕ್ಷರೂ ಆಗಿರುವ ಸೊರೆನ್ ಅವರು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಯಾವುದೇ ಹಿಂದೂ ಅಪಾಯದಲ್ಲಿಲ್ಲ. ಆದರೆ ಬಿಜೆಪಿ ಹಿಂದೂ-ಮುಸ್ಲಿಂರ ನಡುವೆ ಸಂಘರ್ಷವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

"ನಾವು ಪ್ರತ್ಯೇಕ ಜಾರ್ಖಂಡ್ ರಾಜ್ಯಕ್ಕಾಗಿ ಹೋರಾಡಿದ್ದೇವೆ ಮತ್ತು ನಮ್ಮ ಹಕ್ಕುಗಳನ್ನು ಪಡೆಯಲು ನಾವು ಹೋರಾಡುತ್ತೇವೆ. ಜಾರ್ಖಂಡ್ ಬುಡಕಟ್ಟು ಜನಾಂಗದವರಿಗೆ ಸೇರಿದ್ದರಿಂದ ಇಲ್ಲಿ ಆದಿವಾಸಿಗಳು ಆಳ್ವಿಕೆ ನಡೆಸುತ್ತಾರೆ" ಎಂದು ಸೊರೆನ್ ಅವರು ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಚೋಟಾನಾಗ್ರಾದಲ್ಲಿ ಹೇಳಿದ್ದಾರೆ.

Hemant Soren
ಒಂದು ಮತ, ಏಳು ಗ್ಯಾರಂಟಿ: ಜಾರ್ಖಂಡ್ ಚುನಾವಣೆಗೆ INDIA ಬ್ಲಾಕ್ ಪ್ರಣಾಳಿಕೆ ಬಿಡುಗಡೆ

ಜನರ ಬೆಂಬಲದೊಂದಿಗೆ ತಮ್ಮ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಮುಂದೆಯೂ ಇದನ್ನು ಮುಂದುವರಿಸಲಿದೆ ಎಂದು ಸೊರೆನ್ ತಿಳಿಸಿದ್ದಾರೆ.

"ಬಿಜೆಪಿಯವರು ಸಿಬಿಐ ಮತ್ತು ಇಡಿ ಜತೆ ಶಾಮೀಲಾಗಿ ನನ್ನನ್ನು ಬೆದರಿಸುತ್ತಿದ್ದಾರೆ ಮತ್ತು ಸುಳ್ಳು ಆರೋಪಗಳನ್ನು ಹೊರಿಸಿ ಜೈಲಿಗೆ ಕಳುಹಿಸಿದ್ದರು. ಆದರೆ ನಾನು ಜಾರ್ಖಂಡ್ ಮಣ್ಣಿನ ಮಗ, ನಾನು ಹೆದರುವುದಿಲ್ಲ ಮತ್ತು ಎಂದಿಗೂ ತಲೆಬಾಗುವುದಿಲ್ಲ" ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

2011 ರ ಜನಗಣತಿಯ ಪ್ರಕಾರ, ಜಾರ್ಖಂಡ್ ಒಟ್ಟು 32,988,134 ಜನಸಂಖ್ಯೆಯನ್ನು ಹೊಂದಿದೆ. ಅವರಲ್ಲಿ ಶೇ. 26.21 ರಷ್ಟು (8,645,042) ಆದಿವಾಸಿಗಳಿದ್ದಾರೆ.

2000ರಲ್ಲಿ ಜಾರ್ಖಂಡ್ ರಾಜ್ಯ ರಚನೆಯಾದ ನಂತರ ರಘುಬರ್ ದಾಸ್ ಅವರನ್ನು ಹೊರತುಪಡಿಸಿ, ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳು ಬುಡಕಟ್ಟು ಸಮುದಾಯಗಳಿಗೆ ಸೇರಿದವರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com