Ruckus in J-K Assembly as opposition MLAs raise slogans in protest over the special status resolution, in Srinagar, Friday
ಶುಕ್ರವಾರ ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ವಿಶೇಷ ಸ್ಥಾನಮಾನ ನಿರ್ಣಯದ ವಿರುದ್ಧ ವಿರೋಧ ಪಕ್ಷದ ಶಾಸಕರು ಘೋಷಣೆಗಳನ್ನು ಎತ್ತುತ್ತಿದ್ದಂತೆ ಗದ್ದಲ-ಕೋಲಾಹಲ ಉಂಟಾಯಿತು

ವಿಶೇಷ ಸ್ಥಾನಮಾನ ನಿರ್ಣಯ: ಜಮ್ಮು-ಕಾಶ್ಮೀರ ಅಸೆಂಬ್ಲಿಯಲ್ಲಿ ಸತತ ಮೂರನೇ ದಿನವೂ ಗದ್ದಲ-ಕೋಲಾಹಲ; ಬಿಜೆಪಿ ಶಾಸಕರ ಪ್ರತಿಭಟನೆ

ಸದನದಲ್ಲಿ ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರು 'ಪಾಕಿಸ್ತಾನಿ ಅಜೆಂಡಾ ನಹೀ ಚಲೇಗಾ' ಎಂಬ ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗೆ ಜಿಗಿದ ನಂತರ ಸ್ಪೀಕರ್ ಅಬ್ದುಲ್ ರಹೀಮ್ ರಾಥರ್ ಅವರನ್ನು ಮಾರ್ಷಲ್ ಮಾಡುವಂತೆ ಸೂಚಿಸಿದರು.
Published on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಗದ್ದಲ-ಕೋಲಾಹಲ ಮುಂದುವರಿದಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನಿರ್ಣಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಸದಸ್ಯರು ಪ್ರತಿಭಟಿಸಿದ್ದರಿಂದ ಸ್ಪೀಕರ್ ಅವರು 12 ಮಂದಿ ಪ್ರತಿಪಕ್ಷ ಶಾಸಕರು ಮತ್ತು ಲಾಂಗೇಟ್ ಶಾಸಕ ಶೇಖ್ ಖುರ್ಷಿದ್ ಅವರನ್ನು ಪ್ರತ್ಯೇಕಗೊಳಿಸಿದರು.

ಸದನದಲ್ಲಿ ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರು 'ಪಾಕಿಸ್ತಾನಿ ಅಜೆಂಡಾ ನಹೀ ಚಲೇಗಾ' ಎಂಬ ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗೆ ಜಿಗಿದ ನಂತರ ಸ್ಪೀಕರ್ ಅಬ್ದುಲ್ ರಹೀಮ್ ರಾಥರ್ ಅವರನ್ನು ಮಾರ್ಷಲ್ ಮಾಡುವಂತೆ ಸೂಚಿಸಿದರು.

ಅವರನ್ನು ಉಚ್ಚಾಟಿಸಿದ ಕೂಡಲೇ ಇತರ 11 ಬಿಜೆಪಿ ಶಾಸಕರು ಪ್ರತಿಭಟಿಸಿ ಸದನದಿಂದ ಹೊರನಡೆದರು. ಸಂವಿಧಾನ ವಿಧಿ 360ರ ಮೇಲೆ ನಿರ್ಣಯ ಅಂಗೀಕಾರದ ನಂತರ ಬಿಜೆಪಿ ಶಾಸಕರು ತೀವ್ರ ಪ್ರತಿಭಟನೆ ನಡೆಸುತ್ತಿರುವುದರಿಂದ ಕಳೆದ ಎರಡು ದಿನಗಳಿಂದ ಸದನದಲ್ಲಿ ತೀವ್ರ ಕೋಲಾಹಲ ಸೃಷ್ಟಿಯಾಗಿದೆ.

ಉಪ ಮುಖ್ಯಮಂತ್ರಿ ಸುರೀಂದರ್ ಚೌಧರಿ ಅವರು ಮೊನ್ನೆ ಮಂಗಳವಾರ ನಿರ್ಣಯವನ್ನು ಮಂಡಿಸಿದ್ದರು. ಅದರಲ್ಲಿ ಈ ವಿಧಾನಸಭೆಯು ಜಮ್ಮು ಮತ್ತು ಕಾಶ್ಮೀರದ ಜನರ ಗುರುತು, ಸಂಸ್ಕೃತಿ ಮತ್ತು ಹಕ್ಕುಗಳನ್ನು ರಕ್ಷಿಸುವ ವಿಶೇಷ ಸ್ಥಾನಮಾನ ಮತ್ತು ಸಾಂವಿಧಾನಿಕ ಖಾತರಿಗಳ ಪ್ರಾಮುಖ್ಯತೆಯನ್ನು ಪುನರುಚ್ಚರಿಸುತ್ತದೆ ವಿಶೇಷ ಸ್ಥಾನಮಾನ ತೆಗೆದುಹಾಕಿದ್ದ ಏಕಪಕ್ಷೀಯ ನಿರ್ಧಾರ ಬಗ್ಗೆ ಕಳವಳ ಹೊಂದಿದೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ಸಾಂವಿಧಾನಿಕ ಖಾತರಿಗಳ ಮರುಸ್ಥಾಪನೆಗಾಗಿ ಈ ಪ್ರದೇಶದ ಚುನಾಯಿತ ಪ್ರತಿನಿಧಿಗಳೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸಲು ಮತ್ತು ಅದಕ್ಕಾಗಿ ಸಾಂವಿಧಾನಿಕ ಕಾರ್ಯವಿಧಾನಗಳನ್ನು ರೂಪಿಸಲು ವಿಧಾನಸಭೆಯು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತದೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪನೆಗಾಗಿ ಯಾವುದೇ ಪ್ರಕ್ರಿಯೆಯು ರಾಷ್ಟ್ರೀಯ ಏಕತೆ ಮತ್ತು ಜಮ್ಮು ಮತ್ತು ಕಾಶ್ಮೀರದ ಜನರ ಕಾನೂನುಬದ್ಧ ಆಕಾಂಕ್ಷೆಗಳನ್ನು ರಕ್ಷಿಸಬೇಕು ಎಂದು ಈ ಅಸೆಂಬ್ಲಿ ಒತ್ತಿಹೇಳುತ್ತದೆ" ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com