ನಾಗ್ಪುರ: ಪ್ರಚೋದನಾಕಾರಿ ಭಾಷಣ ಮತ್ತು ಸುಳ್ಳಿನ ಸರಮಾಲೆಯಿಂದ ಬಿಜೆಪಿ ನಾಯಕರು ಜನರ ಗಮನವನ್ನ ಬೇರೆಡೆ ಸೆಳೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಹೇಳಿದ್ದಾರೆ.
ಮಹಾರಾಷ್ಟ್ರ ಚುನಾವಣೆ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ರಾಜ್ಯಕ್ಕೆ ಮತ್ತೆ ಅಭಿವೃದ್ಧಿ ಪಥಕ್ಕೆ ತರುವ, ಉತ್ತಮ ಆಡಳಿತದ ಸರ್ಕಾರದ ಅಗತ್ಯವಿದ್ದು, ಮಹಾ ವಿಕಾಸ್ ಆಘಾಡಿ ಸರ್ಕಾರ ಚುನಾವಣೆಯಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಯೋಗಿ ಆದಿತ್ಯನಾಥ್ ಅವರ ವಿಭಜನೆಯಾದ್ರೆ, ಮುಗಿಸ್ತಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ನಾವು ಒಗ್ಗಟ್ಟಾಗಿದ್ದರೆ ಸುರಕ್ಷತೆ ಎಂಬ ಘೋಷಣೆ ಕುರಿತು ಪ್ರತಿಕ್ರಿಯಿಸಿದ ಖರ್ಗೆ, ಯೋಗಿ ಘೋಷಣೆ ಅನುಸರಿಸಬೇಕೋ ಅಥವಾ ಮೋದಿ ಘೋಷಣೆ ಅನುಸರಿಸಬೇಕೋ ಎಂಬುದನ್ನು ಮೊದಲು ನಿಮ್ಮೊಳಗೆ ನಿರ್ಧರಿಸಿ. ಬಿಜೆಪಿ ಪ್ರಚೋದನಾಕಾರಿ ಹಾಗೂ ಸುಳ್ಳಿನ ಭಾಷಣಗಳ ಮೂಲಕ ಅನೇಕ ವಿಚಾರಗಳಿಂದ ಜನರ ಗಮನ ಬೇರೆಡೆ ಸೆಳೆಯುತ್ತಿದೆ ಎಂದು ಆರೋಪಿಸಿದರು.
ಕಳೆದ 11 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಯಾವ ಕೆಲಸ ಮಾಡಿದೆ ಎಂಬುದನ್ನು ಕಾಂಗ್ರೆಸ್ ಜೊತೆಗೆ ಚರ್ಚೆಯಲ್ಲಿ ತಿಳಿಸಲಿ. 55 ವರ್ಷಗಳಲ್ಲಿ ಮಾಡಿರುವ ಕೆಲಸಗಳ ಬಗ್ಗೆ ನಾವು ಹೇಳುತ್ತಿವೆ ಎಂದರು.
Advertisement