ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಗೆ ಶಾಕ್: ಆಪ್ತ ಕಾರ್ಯದರ್ಶಿಗೆ ಸೇರಿದ ಸ್ಥಳಗಳ ಮೇಲೆ ಐಟಿ ದಾಳಿ

ರಾಂಚಿಯಲ್ಲಿ ಏಳು ಮತ್ತು ಜಮ್ಶೆಡ್‌ಪುರದ ಒಂಬತ್ತು ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ. ಸುನಿಲ್ ಶ್ರೀವಾಸ್ತವ ಅವರ ನಿವಾಸವು ರಾಂಚಿಯ ಅಶೋಕ್ ನಗರ ರಸ್ತೆ ಸಂಖ್ಯೆ 4 ರ ಮುಂಭಾಗದಲ್ಲಿದೆ.
Representational image
ಸಾಂದರ್ಭಿಕ ಚಿತ್ರ
Updated on

ರಾಂಚಿ: ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಹೇಮಂತ್ ಸೊರೆನ್‌ಗೆ ದೊಡ್ಡ ಹೊಡೆತ ನೀಡುವ ಘಟನೆ ನಡೆದಿದ್ದು, ಆದಾಯ ತೆರಿಗೆ ಇಲಾಖೆ ಶನಿವಾರ ರಾಂಚಿ ಮತ್ತು ಜೆಮ್‌ಶೆಡ್‌ಪುರದಲ್ಲಿ ಅವರ ಆಪ್ತ ಕಾರ್ಯದರ್ಶಿ ಸುನಿಲ್ ಶ್ರೀವಾಸ್ತವ್‌ಗೆ ಸಂಬಂಧಿಸಿದ ಕನಿಷ್ಠ 17 ಸ್ಥಳಗಳ ಮೇಲೆ ದಾಳಿ ಮಾಡಿದೆ.

ಆರಂಭಿಕ ವರದಿಗಳ ಪ್ರಕಾರ, ರಾಂಚಿಯಲ್ಲಿ ಏಳು ಮತ್ತು ಜಮ್ಶೆಡ್‌ಪುರದ ಒಂಬತ್ತು ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ. ಸುನಿಲ್ ಶ್ರೀವಾಸ್ತವ ಅವರ ನಿವಾಸವು ರಾಂಚಿಯ ಅಶೋಕ್ ನಗರ ರಸ್ತೆ ಸಂಖ್ಯೆ 4 ರ ಮುಂಭಾಗದಲ್ಲಿದೆ. ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಹವಾಲಾ ಮೂಲಕ ಹಣದ ವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಇದಕ್ಕೂ ಮುನ್ನ ಅಕ್ಟೋಬರ್ 26 ರಂದು ರಾಂಚಿ, ಜಮ್‌ಶೆಡ್‌ಪುರ, ಗಿರಿದಿಹ್ ಮತ್ತು ಕೋಲ್ಕತ್ತಾದ 35 ಸ್ಥಳಗಳಲ್ಲಿ ಐಟಿ ದಾಳಿ ನಡೆಸಿತ್ತು, ಈ ಸಂದರ್ಭದಲ್ಲಿ ಸುಮಾರು 150 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಮತ್ತು ಹೂಡಿಕೆ ಸಂಬಂಧಿತ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ದಾಳಿ ವೇಳೆ ಪತ್ತೆಯಾದ ಮೊತ್ತವನ್ನು ವರ್ತಕರ ಖಾತೆ ಪುಸ್ತಕಗಳೊಂದಿಗೆ ತಾಳೆ ಹಾಕಿ 70 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡು ಬ್ಯಾಂಕ್ ಗೆ ಜಮಾ ಮಾಡಲಾಗಿದೆ. ಆದರೆ, ಯಾವುದೇ ಅಧಿಕೃತ ದೃಢೀಕರಣವಿಲ್ಲ, ಇಂದಿನ ದಾಳಿಗಳು ಸಹ ಅದಕ್ಕೆ ಸಂಬಂಧಿಸಿವೆ ಎಂದು ಹೇಳಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com