'ಅಯೋಧ್ಯೆಯ ಅಡಿಪಾಯವನ್ನೇ ಅಲ್ಲಾಡಿಸುತ್ತೇನೆ...': ರಾಮ ಮಂದಿರಕ್ಕೆ ನೇರ ಬೆದರಿಕೆ ಹಾಕಿದ ಖಲಿಸ್ತಾನಿ ಭಯೋತ್ಪಾದಕ ಪನ್ನು!

ನವೆಂಬರ್ 16 ಮತ್ತು 17ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಹಿಂಸಾಚಾರ ನಡೆಯಲಿದೆ ಎಂದು ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಸಿಖ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಪನ್ನು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.
Gurpatwant Singh Pannun
ಗುರ್ಪತ್‌ವಂತ್ ಸಿಂಗ್ ಪನ್ನು
Updated on

ನವದೆಹಲಿ: ಕೆನಡಾದ ಪ್ರಚೋದನೆಯಿಂದಾಗಿ ಖಾಲಿಸ್ತಾನಿಗಳ ಧೈರ್ಯವು ಎಷ್ಟು ಹೆಚ್ಚಾಗಿದೆಯೆಂದರೆ, ಈಗ ಅವರು ಹಿಂದೂಗಳ ನಂಬಿಕೆಯ ಅತಿದೊಡ್ಡ ಕೇಂದ್ರವಾದ ಅಯೋಧ್ಯೆಯ ರಾಮಮಂದಿರವನ್ನು ಗುರಿಯಾಗಿಸುವ ಬೆದರಿಕೆಯನ್ನು ಹಾಕುತ್ತಿದ್ದಾರೆ. ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನು ವಿಡಿಯೋ ಬಿಡುಗಡೆ ಮಾಡಿದ್ದು, ರಾಮಮಂದಿರವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಪನ್ನು ಕೆನಡಾದ ಹಿಂದೂ ಸಂಸದ ಚಂದ್ರ ಆರ್ಯಗೂ ಜೀವ ಬೆದರಿಕೆ ಹಾಕಿದ್ದಾನೆ.

'ನವೆಂಬರ್ 16 ಮತ್ತು 17ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಹಿಂಸಾಚಾರ ನಡೆಯಲಿದೆ' ಎಂದು ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಸಿಖ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಪನ್ನು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ. ಕೆನಡಾದ ಬ್ರಾಂಪ್ಟನ್‌ನಲ್ಲಿ ಪನ್ನು ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋದಲ್ಲಿ ರಾಮ ಮಂದಿರ ಹಾಗೂ ಇತರ ಹಲವು ಹಿಂದೂ ಧಾರ್ಮಿಕ ಸ್ಥಳಗಳ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಬೆದರಿಕೆಯನ್ನೂ ಹಾಕಲಾಗಿದೆ.

'ಹಿಂದುತ್ವ ಸಿದ್ಧಾಂತದ ಜನ್ಮಸ್ಥಳವಾದ ಅಯೋಧ್ಯೆಯ ಅಡಿಪಾಯವನ್ನು ನಾವು ಅಲ್ಲಾಡಿಸುತ್ತೇವೆ' ಎಂದು ಪನ್ನು ವಿಡಿಯೋದಲ್ಲಿ ಹೇಳಿದ್ದಾನೆ. ಪನ್ನುವಿನ ಈ ಬೆದರಿಕೆಯನ್ನು ಭಾರತದ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾದ ರಾಮ ಮಂದಿರಕ್ಕೆ ದೊಡ್ಡ ಬೆದರಿಕೆಯಾಗಿ ನೋಡಲಾಗುತ್ತಿದೆ. ಪನ್ನು ವೀಡಿಯೋದಲ್ಲಿ ಪ್ರಧಾನಿ ಮೋದಿಯವರು ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾರ್ಥನೆ ಮಾಡುತ್ತಿರುವ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾನೆ. ಕೆನಡಾದಲ್ಲಿ ನೆಲೆಸಿರುವ ಭಾರತೀಯರಿಗೆ ಹಿಂದೂ ದೇವಾಲಯಗಳ ಮೇಲೆ ಖಲಿಸ್ತಾನಿ ದಾಳಿಯಿಂದ ದೂರವಿರುವಂತೆ ಪನ್ನು ಬೆದರಿಕೆ ಹಾಕಿದ್ದಾನೆ.

Gurpatwant Singh Pannun
ಅಮಿತ್ ಶಾ ವಿದೇಶ ಪ್ರವಾಸದ ಮಾಹಿತಿ ನೀಡಿದ್ರೆ 10 ಲಕ್ಷ ಡಾಲರ್ ಬಹುಮಾನ: ಖಲಿಸ್ತಾನಿ ಉಗ್ರ Pannun ಘೋಷಣೆ

ಭಾರತದಿಂದ ತಲೆಮರೆಸಿಕೊಂಡಿರುವ ಪನ್ನು ಭಾರತದ ವಿರುದ್ಧ ವಿಷ ಉಗುಳುತ್ತಲೇ ಇದ್ದಾನೆ. ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕರ ವಿರುದ್ಧ ಹಿಂಸಾಚಾರ ಎಸಗಲು ಆತ ಖಲಿಸ್ತಾನಿಗಳನ್ನು ಪ್ರಚೋದಿಸುವುದನ್ನು ಮುಂದುವರೆಸಿದ್ದಾನೆ. ಈ ಹಿಂದೆ ಖಲಿಸ್ತಾನಿ ಭಯೋತ್ಪಾದಕ ಪನ್ನು ಭಾರತಕ್ಕೆ ಬೆದರಿಕೆಯೊಡ್ಡಿದ್ದ ಮತ್ತು ವಿಮಾನ ಸ್ಫೋಟಿಸುವ ಬಗ್ಗೆ ಮಾತನಾಡಿದ್ದ. ಸಿಖ್ ಗಲಭೆ ನಡೆದು 40 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ವಿಮಾನದ ಮೇಲೆ ದಾಳಿ ನಡೆಯಬಹುದು ಎಂದು ಪನ್ನು ಹೇಳಿದ್ದನು. ನವೆಂಬರ್ 1ರಿಂದ 19ರವರೆಗೆ ಏರ್ ಇಂಡಿಯಾದಲ್ಲಿ ಹಾರಾಟ ನಡೆಸದಂತೆ ಪನ್ನು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com