ಮುಂಬೈನ ಅಪಾರ್ಟ್ಮೆಂಟ್ ತಿಂಗಳಿಗೆ 20 ಲಕ್ಷ ರೂ ಬಾಡಿಗೆಗೆ ನೀಡಿದ ನಟ ಶಾಹಿದ್ ಕಪೂರ್!
ಮುಂಬೈ: ಸ್ಕ್ವೇರ್ ಯಾರ್ಡ್ಸ್ ಪ್ರಕಾರ, ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತು ಅವರ ಪತ್ನಿ ಮುಂಬೈನ ತಮ್ಮ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ತಿಂಗಳಿಗೆ 20 ಲಕ್ಷ ರೂಪಾಯಿಗೆ ಬಾಡಿಗೆಗೆ ನೀಡಿದ್ದಾರೆ.
ಶಾಹಿದ್ ಕಪೂರ್ ಮತ್ತು ಮೀರಾ ಕಪೂರ್ ಅವರು ಕಳೆದ ಮೇ ನಲ್ಲಿ 58.6 ಕೋಟಿ ರೂಪಾಯಿಗೆ ಈ ಅಪಾರ್ಟ್ಮೆಂಟ್ ಅನ್ನು ಖರೀದಿಸಿದ್ದರು.
ಮಂಗಳವಾರದ ಪ್ರಕಟಣೆಯಲ್ಲಿ, ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ಸ್ಕ್ವೇರ್ ಯಾರ್ಡ್ಸ್, ಶಾಹಿದ್ ಕಪೂರ್ ಅವರು ಇತ್ತೀಚೆಗೆ ವರ್ಲಿಯ 'ತ್ರೀ ಸಿಕ್ಸ್ಟಿ ವೆಸ್ಟ್' ನಲ್ಲಿರುವ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ನೀಡಿದೆ ಎಂದು ತಿಳಿಸಲಾಗಿದೆ.
ಆಸ್ತಿಯು 5,395 ಚದರ ಅಡಿ ಕಾರ್ಪೆಟ್ ಪ್ರದೇಶ ಮತ್ತು 6,175.42 ಚದರ ಅಡಿ ಬಿಲ್ಟ್-ಅಪ್ ಪ್ರದೇಶವನ್ನು ಹೊಂದಿದೆ. ಮೂರು ಮೀಸಲಾದ ಕಾರ್ ಪಾರ್ಕಿಂಗ್ ಸ್ಥಳಗಳನ್ನು ಹೊಂದಿದೆ.
ಒಬೆರಾಯ್ ರಿಯಾಲ್ಟಿ ಅಭಿವೃದ್ಧಿಪಡಿಸಿದ 'ತ್ರೀ ಸಿಕ್ಸ್ಟಿ ವೆಸ್ಟ್' ಯೋಜನೆಯು 1.58 ಎಕರೆಗಳಷ್ಟು ವಿಸ್ತಾರವಾದ ಒಂದು ಉನ್ನತ-ಮಟ್ಟದ ವಸತಿ ಯೋಜನೆಯಾಗಿದ್ದು, 4 ಮತ್ತು 5 BHK ರೆಡಿ-ಟು-ಮೂವ್-ಅಪಾರ್ಟ್‌ಮೆಂಟ್‌ಗಳನ್ನು ಮಾರಾಟ ಮಾಡುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ