ಮತ್ತೆ ಮೋದಿ ಕಾಲಿಗೆ ಬೀಳಲು ಮುಂದಾದ ಬಿಹಾರ ಸಿಎಂ; ನಿತೀಶ್‌ ನಡೆಗೆ ತೇಜಸ್ವಿ ಲೇವಡಿ

ನಿತೀಶ್ ಕುಮಾರ್ ಅವರು ಮೋದಿಯವರಿಗೆ ಕೈಮುಗಿಯುತ್ತಾ ಅವರ ಕಾಲನ್ನು ಮುಟ್ಟಿ ನಮಿಸಲು ಯತ್ನಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮೋದಿ ಕಾಲಿಗೆ ಬೀಳಲು ಮುಂದಾದ ಬಿಹಾರ ಸಿಎಂ
ಮೋದಿ ಕಾಲಿಗೆ ಬೀಳಲು ಮುಂದಾದ ಬಿಹಾರ ಸಿಎಂ
Updated on

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬುಧವಾರ ಮತ್ತೆ ಪ್ರಧಾನಿ ನರೇಂದ್ರ ಮೋದಿಯವರ ಕಾಲಿಗೆ ಬೀಳಲು ಯತ್ನಿಸಿದ ಘಟನೆ ದರ್ಬಾಂಗಾದಲ್ಲಿ ನಡೆದಿದೆ.

ಇಂದು ದರ್ಭಾಂಗಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿತೀಶ್ ಕುಮಾರ್ ಅವರು ಮೋದಿಯವರಿಗೆ ಕೈಮುಗಿಯುತ್ತಾ ಅವರ ಕಾಲನ್ನು ಮುಟ್ಟಿ ನಮಿಸಲು ಯತ್ನಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ನಿತೀಶ್ ಕುಮಾರ್ ಅವರು ತಮ್ಮ ಕಾಲನ್ನು ಮುಟ್ಟಲು ಪ್ರಯತ್ನಿಸುತ್ತಿರುವಾಗ ಪ್ರಧಾನಿ ಮೋದಿ ಅದನ್ನು ತಡೆದಿದ್ದು, ಅವರ ಕೈ ಕುಲುಕಿದ್ದಾರೆ.

ಮೋದಿ ಕಾಲಿಗೆ ಬೀಳಲು ಮುಂದಾದ ಬಿಹಾರ ಸಿಎಂ
ನಿತೀಶ್ ಕುಮಾರ್ ಬಿಹಾರವನ್ನು ಜಂಗಲ್ ರಾಜ್‌ನಿಂದ ಹೊರ ತಂದಿದ್ದಾರೆ: ಪ್ರಧಾನಿ ಮೋದಿ

73 ವರ್ಷದ ಜೆಡಿಯು ಮುಖ್ಯಸ್ಥರ ಈ ವರ್ತನೆಯ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಹಾರ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು, ತಮಗಿಂತ ಒಂದು ವರ್ಷ ದೊಡ್ಡವರಾದ ಮೋದಿಗೆ ಕಾಲಿಗೆ ಬೀಳುವುದು ಹೊಸ ವಿಚಾರ ಏನಲ್ಲ ಎಂದಿದ್ದಾರೆ.

ಇದರಲ್ಲಿ ವಿಶೇಷವಾದದ್ದು ಏನು ಇದೆ? ಅವರು(ಸಿಎಂ) ಎಲ್ಲರ ಕಾಲಿಗೆ ಬೀಳುವುದು ತಡವಾಗಿದೆ. ಅವರು ತಮ್ಮ ಸರ್ಕಾರದ ಅಧಿಕಾರಿಗಳಿಗೂ ಹಾಗೆ ಮಾಡಿದ್ದಾರೆ" ಎಂದು ಆರ್ ಜೆಡಿ ನಾಯಕ ವ್ಯಂಗ್ಯವಾಡಿದ್ದಾರೆ.

ಈ ವರ್ಷದ ಆರಂಭದಲ್ಲಿ ಕೆಲವು ಕಾರ್ಯಕ್ರಮಗಳಲ್ಲಿ ನಿತೀಶ್ ಕುಮಾರ್ ಅವರು ಐಎಎಸ್ ಅಧಿಕಾರಿಗಳು ಮತ್ತು ಖಾಸಗಿ ಕಂಪನಿಯ ಎಂಜಿನಿಯರ್‌ಗಳಿಗೆ ನಿಮ್ಮ ಕಾಲಿಗೆ ಬೀಳುತ್ತೇನೆ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಎಂದಿದ್ದರು.

ಇನ್ನು ಈ ವರ್ಷದ ಜೂನ್‌ನಲ್ಲಿ ನಿತೀಶ್ ಕುಮಾರ್ ಅವರು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಮೋದಿಯವರ ಕಾಲನ್ನು ಮುಟ್ಟಿ ನಮಸ್ಕರಿಸಲು ಪ್ರಯತ್ನಿಸಿದ್ದರು. ಅಷ್ಟೆ ಅಲ್ಲದೆ, ಏಪ್ರಿಲ್‌ ವೇಳೆ ನವಾಡದಲ್ಲಿ ನಡೆದ ಲೋಕಸಭಾ ಚುನಾವಣಾ ರ್ಯಾಲಿಯಲ್ಲಿ ಕೂಡಾ ಪ್ರಧಾನಿ ಮೋದಿಯವರ ಕಾಲನ್ನು ಮುಟ್ಟಿ ನಮಸ್ಕರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com