ಪಣಜಿ: ಗೋವಾ ಸರ್ಕಾರವು ಆನ್‌ಲೈನ್ ಲಾಟರಿ ಆರಂಭಿಸುತ್ತಿದ್ದು, ನವೆಂಬರ್ 24 ರಂದು ಮೊದಲ ಡ್ರಾ ನಡೆಯಲಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಗೇಮಿಂಗ್ ಮತ್ತು ಮನರಂಜನೆಯ ಒಂದು ಭಾಗವಾಗಿ ಆನ್‌ಲೈನ್ ಲಾಟರಿ ಆರಂಭಿಸಲಾಗುತ್ತಿದೆ ಮತ್ತು ಈ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರುತ್ತದೆ ಎಂದು ಗೋವಾ ಸರ್ಕಾರದ ಸಣ್ಣ ಉಳಿತಾಯ ಮತ್ತು ಲಾಟರಿಗಳ ನಿರ್ದೇಶಕ ನಾರಾಯಣ ಗಡ್ ಅವರು ಹೇಳಿದ್ದಾರೆ.
“ತಂತ್ರಜ್ಞಾನದ ಮೂಲಕ ನಮ್ಮ ಆನ್‌ಲೈನ್ ಲಾಟರಿ ಸುವ್ಯವಸ್ಥಿತ ಪ್ರಕ್ರಿಯೆಗಳೊಂದಿಗೆ ಲಾಟರಿ ಉದ್ಯಮದಲ್ಲಿ ಹೊಸ ಮಾನದಂಡವನ್ನು ಹೊಂದಲಿದೆ. ತಂತ್ರಜ್ಞಾನ ಆಧಾರಿತ ಆನ್‌ಲೈನ್ ಲಾಟರಿಯು ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಮತ್ತು ಕಾರ್ಯಾಚರಣೆಗಳ ಸುಧಾರಿತ ಮೇಲ್ವಿಚಾರಣೆ ಮತ್ತು ನಿಯಂತ್ರಣವನ್ನು ಖಚಿತಪಡಿಸುತ್ತದೆ” ಎಂದು ಅವರು ತಿಳಿಸಿದ್ದಾರೆ.
ಲಾಟರಿಯ ಮೊದಲ ಡ್ರಾ ನವೆಂಬರ್ 24 ರಂದು ನಡೆಯಲಿದೆ ಎಂದು ಗಡ್ ಹೇಳಿದ್ದಾರೆ.
"ಗೋವಾ ಸರ್ಕಾರದ ಸಣ್ಣ ಉಳಿತಾಯ ಮತ್ತು ಲಾಟರಿಗಳ ನಿರ್ದೇಶನಾಲಯ ನೀಡಿದ ಮಾರ್ಕೆಟಿಂಗ್ ಪರವಾನಗಿಯೊಂದಿಗೆ, 'ಗ್ರೇಟ್ ಗೋವಾ ಗೇಮ್ಸ್' ಭಾರತದ ಲಾಟರಿ ಉದ್ಯಮದಲ್ಲಿ ಟ್ರೇಲ್‌ಬ್ಲೇಜರ್ ಆಗಲು ಸಿದ್ಧವಾಗಿದೆ. ಇದು ಸಂಪೂರ್ಣ ಕಾಗದ ರಹಿತವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಆನ್‌ಲೈನ್ ಲಾಟರಿ ವ್ಯವಸ್ಥೆಯು ಸಂಪೂರ್ಣವಾಗಿ ಕಾಗದರಹಿತವಾಗಿರುತ್ತದೆ, ಭಾರತದಾದ್ಯಂತ ಲಾಟರಿ ಪ್ರಿಯರಿಗೆ ತಡೆರಹಿತ ಅವಕಾಶವನ್ನು ಖಚಿತಪಡಿಸಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುವುದು ಎಂದು ಸರ್ಕಾರದ ವಕ್ತಾರರು ಹೇಳಿದ್ದಾರೆ.
"ಭಾರತದಾದ್ಯಂತ ಸಂಪೂರ್ಣ ತಂತ್ರಜ್ಞಾನ ಆಧಾರಿತ ಆನ್‌ಲೈನ್ ಲಾಟರಿ ಬ್ರ್ಯಾಂಡ್, ಗ್ರೇಟ್ ಗೋವಾ ಗೇಮ್ಸ್ ಅನ್ನು ಆರಂಭಿಸಲು ನಾವು ಉತ್ಸುಕರಾಗಿದ್ದೇವೆ" ಎಂದು ಈ ಆನ್ ಲೈನ್ ಲಾಟರಿಯ ಮಾರುಕಟ್ಟೆ ಮತ್ತು ಮಾರಾಟ ಪರವಾನಗಿ ಪಡೆದಿರುವ ರಿತಿ ಸ್ಪೋರ್ಟ್ಸ್‌ನ ಸಂಸ್ಥಾಪಕ ಅರುಣ್ ಪಾಂಡೆ ಅವರು ತಿಳಿಸಿದ್ದಾರೆ.
Advertisement