ಕೋಲ್ಕತ್ತಾಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಪ್ರಯಾಣಿಕನ ಬಂಧನ

ಮೂರು ಗಂಟೆಗಳ ಕಾಲ ಅಧಿಕಾರಿಗಳು ಮತ್ತು ಬಾಂಬ್ ಸ್ಕ್ವಾಡ್‌ನಿಂದ ಸಂಪೂರ್ಣ ವಿಮಾನದ ತಪಾಸಣೆಯ ನಂತರ ವಿಮಾನವು ಕೋಲ್ಕತ್ತಾಗೆ ಹೊರಟಿತು.
Indigo Casual Images
ಇಂಡಿಗೋ ವಿಮಾನದ ಸಾಂದರ್ಭಿಕ ಚಿತ್ರ
Updated on

ರಾಯ್‌ಪುರ: ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಕೋಲ್ಕತ್ತಾಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಗುರುವಾರ ಬೆಳಗ್ಗೆ ರಾಯ್‌ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ತಿಳಿದುಬಂದಿದೆ.

ಮೂರು ಗಂಟೆಗಳ ಕಾಲ ಅಧಿಕಾರಿಗಳು ಮತ್ತು ಬಾಂಬ್ ಸ್ಕ್ವಾಡ್‌ನಿಂದ ಸಂಪೂರ್ಣ ವಿಮಾನದ ತಪಾಸಣೆಯ ನಂತರ ವಿಮಾನವು ಕೋಲ್ಕತ್ತಾಗೆ ಹೊರಟಿತು.

“ಆರೋಪಿಯು ಅದೇ ವಿಮಾನದಲ್ಲಿದ್ದ ಪ್ರಯಾಣಿಕ ನಿಲೇಶ್ ಮಂಡಲ್(40)ನನ್ನು ಬಂಧಿಸಲಾಗಿದೆ. ವಿಮಾನದೊಳಗೆ ಡೈನಮೈಟ್ ಇರಿಸಲಾಗಿದೆ ಎಂದು ಮಂಡಲ್ ವಿಮಾನದ ಸಿಬ್ಬಂದಿಯೊಬ್ಬರಿಗೆ ತಿಳಿಸಿದ್ದರು. ಬಾಂಬ್ ಬೆದರಿಕೆಯ ನಂತರ ಕೋಲ್ಕತ್ತಾಗೆ ಹೋಗುತ್ತಿದ್ದ ವಿಮಾನವನ್ನು ರಾಯ್‌ಪುರಕ್ಕೆ ತಿರುಗಿಸಲಾಯಿತು.

Indigo Casual Images
ನಾಗ್ಪುರ- ಕೋಲ್ಕತ್ತಾ ಮಾರ್ಗದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಸಂದೇಶ!

ಬಂಧಿತ ಆರೋಪಿಯನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ರಾಯ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ತಿಳಿಸಿದ್ದಾರೆ.

ವಿಮಾನ ನಿಲ್ದಾಣ ಪ್ರಾಧಿಕಾರದ ಕಂಪ್ಲೈಂಟ್‌ನ ನಂತರ ರಾಯ್‌ಪುರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಆರೋಪಿ ಮಂಡಲ್ ನನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಮತ್ತು ಶೀಘ್ರದಲ್ಲೇ ಅವರನ್ನು ರಾಯ್‌ಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com