ಸೋನಿಯಾ ಗಾಂಧಿಯ 'ರಾಹುಲ್ ವಿಮಾನ' ಮತ್ತೆ ಪತನವಾಗಲಿದೆ: ಅಮಿತ್ ಶಾ

ಕರ್ನಾಟಕದ ವಕ್ಫ್ ಮಂಡಳಿಯು ಪ್ರಾಚೀನ ದೇವಾಲಯಗಳ ಭೂಮಿಯನ್ನು ಕಿತ್ತುಕೊಂಡಿದೆ. ಅದನ್ನು ತಡೆಯಲು ಕಾನೂನಿನಲ್ಲಿ ತಿದ್ದುಪಡಿ ಮಾಡಲಾಗುವುದು ಎಂದು ತಿಳಿಸಿದರು.
ಅಮಿತ್ ಶಾ
ಅಮಿತ್ ಶಾ
Updated on

ರಾಂಚಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಸೋನಿಯಾ ಗಾಂಧಿ ಅವರು ತಮ್ಮ ಮಗನನ್ನು ಲಾಂಚ್ ಮಾಡಲು 20 ಬಾರಿ ಪ್ರಯತ್ನಿಸಿದರು. ಆದರೆ ಯಾವುದೇ ಪ್ರಯೋಜನೆ ಆಗಲಿಲ್ಲ. ಈಗ "ರಾಹುಲ್ ವಿಮಾನ" ಜಾರ್ಖಂಡ್‌ನಲ್ಲಿ 21ನೇ ಪ್ರಯತ್ನದಲ್ಲೂ ಪತನವಾಗಲಿದೆ ಎಂದು ಗುರುವಾರ ಹೇಳಿದ್ದಾರೆ.

ಇಂದು ಜಾರ್ಖಂಡ್‌ನ ಗಿರಿದಿಹ್‌ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಕರ್ನಾಟಕದ ವಕ್ಫ್ ಮಂಡಳಿಯು ಪ್ರಾಚೀನ ದೇವಾಲಯಗಳ ಭೂಮಿಯನ್ನು ಕಿತ್ತುಕೊಂಡಿದೆ. ಅದನ್ನು ತಡೆಯಲು ಕಠಿಣ ವಿರೋಧದ ನಡುವೆಯೂ ಕಾನೂನಿನಲ್ಲಿ ತಿದ್ದುಪಡಿ ಮಾಡಲಾಗುವುದು ಎಂದು ತಿಳಿಸಿದರು.

"ಸೋನಿಯಾ-ಜಿ ತನ್ನ ಮಗನನ್ನು ಲಾಂಚ್ ಮಾಡಲು ಇಷ್ಟಪಡುತ್ತಾರೆ. ಸೋನಿಯಾ-ಜಿ ಅವರ 'ರಾಹುಲ್ ವಿಮಾನ'ಲಾಂಚ್ ಮಾಡಲು 20 ಬಾರಿ ಪ್ರಯತ್ನಿಸಿದರು. ಆದರೆ ಅದು ಲ್ಯಾಂಡ್ ಆಗಲು ವಿಫಲವಾಗಿದೆ. ಅದು 20 ಬಾರಿ ಅಪಘಾತಕ್ಕೀಡಾಯಿತು. ಈ 21ನೇ ಬಾರಿ ದಿಯೋಘರ್ ವಿಮಾನ ನಿಲ್ದಾಣದಲ್ಲಿ ಪತನವಾಗಲಿದೆ" ಎಂದು ಟೀಕಿಸಿದರು.

ಅಮಿತ್ ಶಾ
ಇಂದಿರಾ ಗಾಂಧಿ ಮರಳಿ ಬಂದರೂ ಆರ್ಟಿಕಲ್ 370 ಮರುಸ್ಥಾಪನೆ ಆಗಲ್ಲ: ಅಮಿತ್ ಶಾ

ವಕ್ಫ್ ಬೋರ್ಡ್ ಕೃಷಿ ಭೂಮಿಯನ್ನು ಕಿತ್ತುಕೊಳ್ಳುತ್ತಿದೆ. ಈ ವಕ್ಫ್ ಮಂಡಳಿಗೆ ಭೂಮಿ ಕಬಳಿಸುವ ಅಭ್ಯಾಸವಿದೆ. ಕರ್ನಾಟಕದಲ್ಲಿ ಇಡೀ ಗ್ರಾಮಗಳ ಆಸ್ತಿ ಕಬಳಿಸಿದ್ದು, 500 ವರ್ಷಗಳಷ್ಟು ಹಳೆಯದಾದ ದೇವಸ್ಥಾನಗಳನ್ನು ಕಬಳಿಸಿದ್ದಾರೆ. ಕೃಷಿ ಭೂಮಿಯನ್ನು ಕಬಳಿಸಿದ್ದಾರೆ. ವಕ್ಫ್ ಮಂಡಳಿಯಲ್ಲಿ ಬದಲಾವಣೆ ಬೇಕೋ ಬೇಡವೋ ಹೇಳಿ. ಹೇಮಂತ್-ಬಾಬು ಮತ್ತು ರಾಹುಲ್ ಗಾಂಧಿ ವಿರೋಧಿಸಿದರೂ ಬಿಜೆಪಿ ವಕ್ಫ್ ಬೋರ್ಡ್ ಕಾಯ್ದೆಗೆ ತಿದ್ದುಪಡಿ ತರಲು ಸಂಸತ್ತಿನಲ್ಲಿ ಮಸೂದೆ ಮಂಡಿಸಿ ಅಂಗೀಕರಿಸುತ್ತದೆ ಮತ್ತು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಆಡಳಿತಾರೂಢ ಜೆಎಂಎಂ ನೇತೃತ್ವದ ಒಕ್ಕೂಟವು ಒಳನುಸುಳುಕೋರರನ್ನು ತನ್ನ "ವೋಟ್ ಬ್ಯಾಂಕ್" ಆಗಿ ಮಾಡಿಕೊಂಡಿದೆ. ಆದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಕ್ರಮ ವಲಸಿಗರನ್ನು ಪರಿಶೀಲಿಸುವುದಾಗಿ ಅಮಿತ್ ಶಾ ಹೇಳಿದರು.

"ನಾವು ಜಾರ್ಖಂಡ್‌ನಿಂದ ನಕ್ಸಲಿಸಂ ಮತ್ತು ಒಳನುಸುಳುವಿಕೆಯನ್ನು ಸಂಪೂರ್ಣ ಅಳಿಸಿ ಹಾಕುತ್ತೇವೆ. ಪ್ರತಿಯೊಬ್ಬ ನುಸುಳುಕೋರರನ್ನು ಗಡೀಪಾರು ಮಾಡುವುದಾಗಿ ಅಮಿತ್ ಶಾ ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com