ಜಮ್ಮು-ಕಾಶ್ಮೀರ: ಡ್ರಗ್ಸ್ ಹಾವಳಿ; ಪೆಡ್ಲರ್ ಗಳಿಂದ ಡ್ರೋನ್ ಬಳಕೆ!

ಕೆಲವು ದಿನಗಳ ಹಿಂದೆ ಶ್ರೀನಗರದ ಡೌನ್‌ಟೌನ್‌ನ ಸಫಾ ಕಡಲ್ ಪ್ರದೇಶದಲ್ಲಿ ಬೈಕ್ ನಲ್ಲಿ ಚಲಿಸುತ್ತಿದ್ದ ಮೂವರನ್ನು ಪೊಲೀಸರು ತಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Security personnel with Pakistan drone captured in Srinagar.
ಶ್ರೀನಗರದಲ್ಲಿ ವಶಪಡಿಸಿಕೊಂಡ ಪಾಕಿಸ್ತಾನದ ಡ್ರೋನ್ ಜೊತೆ ಭದ್ರತಾ ಸಿಬ್ಬಂದಿ
Updated on

ಶ್ರೀನಗರ: ದೇಶಾದ್ಯಂತ ಮಾದಕ ವಸ್ತುಗಳ ಬಳಕೆ ಹೆಚ್ಚಾಗುತ್ತಿರುವಂತೆ ಮಾದಕ ವಸ್ತು ಪೂರೈಕೆ ದಂಧೆಕೋರರು ಡ್ರಗ್ಸ್ ಗಳನ್ನು ಪೂರೈಸಲು ಇತ್ತೀಚೆಗೆ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ, ಗ್ರಾಹಕರ ಚಲನವಲನವನ್ನು ಮೇಲ್ವಿಚಾರಣೆ ಮಾಡಲು ಮತ್ತು ಪೊಲೀಸರ ಚಲನವಲನದ ಮೇಲೆ ನಿಗಾ ಇಡಲು ತಮ್ಮ ವ್ಯಾಪಾರಕ್ಕೆ ಅನುಕೂಲವಾಗಲು ಡ್ರೋನ್‌ಗಳನ್ನು ಬಳಸುತ್ತಿದ್ದ ಮೂವರು ಡ್ರಗ್ ಪೆಡ್ಲರ್‌ಗಳ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ. ಜಮ್ಮು-ಕಾಶ್ಮೀರದ ಡ್ರಗ್ಸ್ ಪೆಡ್ಲರ್‌ಗಳ ವಶದಲ್ಲಿ ಡ್ರೋನ್ ಪತ್ತೆಯಾಗಿರುವುದು ಇದೇ ಮೊದಲು.

ಕೆಲವು ದಿನಗಳ ಹಿಂದೆ ಶ್ರೀನಗರದ ಡೌನ್‌ಟೌನ್‌ನ ಸಫಾ ಕಡಲ್ ಪ್ರದೇಶದಲ್ಲಿ ಬೈಕ್ ನಲ್ಲಿ ಚಲಿಸುತ್ತಿದ್ದ ಮೂವರನ್ನು ಪೊಲೀಸರು ತಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶ್ರೀನಗರದ ನಿವಾಸಿಗಳಾದ ಏಜಾಜ್ ಅಹ್ಮದ್ ಗನಿ, ಓವೈಸ್ ಅಹ್ಮದ್ ಗೊಜ್ರಿ ಮತ್ತು ಮೀರ್ ರೋಮನ್ ಎಂಬ ಮೂವರನ್ನು ಪೊಲೀಸರು ಕೂಲಂಕಷವಾಗಿ ಶೋಧಿಸಿದ್ದಾರೆ.

ಶೋಧದ ಸಮಯದಲ್ಲಿ, ಒಂದು ಬಾಕ್ಸ್‌ನಲ್ಲಿ ಬಚ್ಚಿಟ್ಟ 140 ಕೊಡೈನ್ ಫಾಸ್ಫೇಟ್ ಬಾಟಲಿಗಳು, 38,530 ರೂಪಾಯಿ ನಗದು, 1 ಡ್ರೋನ್ ಮತ್ತು 3 ಸೆಲ್‌ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪೆಡ್ಲರ್‌ಗಳು ಖರೀದಿದಾರರ ಚಲನವಲನವನ್ನು ಮೇಲ್ವಿಚಾರಣೆ ಮಾಡಲು ಡ್ರೋನ್‌ಗಳನ್ನು ಬಳಸುತ್ತಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಡ್ರೋನ್ ಕಣ್ಗಾವಲು ಮೂಲಕ, ಖರೀದಿದಾರರು ಪೊಲೀಸರ ಜೊತೆಗಿಲ್ಲ ಎಂದು ತಿಳಿದುಬಂದಿದೆ. ಮಾದಕ ವಸ್ತುಗಳನ್ನು ಸಾಗಿಸಲು ಡ್ರೋನ್‌ಗಳನ್ನು ಬಳಸಲಾಗಿದೆಯೇ ಎಂಬ ಬಗ್ಗೆ ಭದ್ರತಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಎಲ್ಲಾ ಕೋನಗಳಿಂದ ತನಿಖೆ ಮಾಡಲಾಗುತ್ತಿದೆ. ಡ್ರೋನ್‌ನ ಮೂಲವನ್ನು ಸಹ ಕಂಡುಹಿಡಿಯಲಾಗುತ್ತಿದೆ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com