ಅಪ್ರಾಪ್ತ ವಯಸ್ಸಿನ ಪತ್ನಿಯೊಂದಿಗೆ ಸಮ್ಮತಿಯಿಲ್ಲದೆ ಲೈಂಗಿಕ ಕ್ರಿಯೆ ಅತ್ಯಾಚಾರ: ಬಾಂಬೆ ಹೈಕೋರ್ಟ್

ಅಪ್ರಾಪ್ತ ವಯಸ್ಸಿನ ಪತ್ನಿ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಪೋಕ್ಸೊ ಕಾಯ್ದೆಯಡಿ ಸೆಷನ್ಸ್ ನ್ಯಾಯಾಲಯ ನೀಡಿದ್ದ 2021ರ ತೀರ್ಪಿನ ವಿರುದ್ಧ 24 ವರ್ಷದ ಯುವಕ ಸಲ್ಲಿಸದ ಮೇಲ್ಮನವಿಯನ್ನು ನ್ಯಾಯಮೂರ್ತಿ ಜಿ ಎ ಸನಪ್ ಅವರಿದ್ದ ನಾಗ್ಪುರ ಪೀಠ ವಜಾಗೊಳಿಸಿದೆ.
Casual Images
ಸಾಂದರ್ಭಿಕ ಚಿತ್ರ
Updated on

ಮುಂಬೈ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿಯೊಂದಿಗೆ ಸಮ್ಮತಿಯಿಲ್ಲದ ಸಂಭೋಗ ಅತ್ಯಾಚಾರದ ಅಪರಾಧವಾಗಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿದ್ದು, ಅಪರಾಧಕ್ಕಾಗಿ ವ್ಯಕಿಯೊಬ್ಬರಿಗೆ 10 ವರ್ಷ ಶಿಕ್ಷೆಯ ಆದೇಶವನ್ನು ಎತ್ತಿಹಿಡಿದಿದೆ.

ಅಪ್ರಾಪ್ತ ವಯಸ್ಸಿನ ಪತ್ನಿ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಪೋಕ್ಸೊ ಕಾಯ್ದೆಯಡಿ ಸೆಷನ್ಸ್ ನ್ಯಾಯಾಲಯ ನೀಡಿದ್ದ 2021ರ ತೀರ್ಪಿನ ವಿರುದ್ಧ 24 ವರ್ಷದ ಯುವಕ ಸಲ್ಲಿಸದ ಮೇಲ್ಮನವಿಯನ್ನು ನ್ಯಾಯಮೂರ್ತಿ ಜಿ ಎ ಸನಪ್ ಅವರಿದ್ದ ನಾಗ್ಪುರ ಪೀಠ ವಜಾಗೊಳಿಸಿದೆ.

ತನ್ನ ಅಪ್ರಾಪ್ತ ಪತ್ನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಸೆಷನ್ಸ್ ನ್ಯಾಯಾಲಯದಿಂದ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿ, ಸಂತ್ರಸ್ತೆ ತನ್ನ ಹೆಂಡತಿಯಾಗಿರುವುದರಿಂದ, ಅವರ ಲೈಂಗಿಕ ಸಂಬಂಧವನ್ನು ಅತ್ಯಾಚಾರ ಎಂದು ಕರೆಯಲಾಗುವುದಿಲ್ಲ ಎಂದು ಹೇಳಿ ಆರೋಪಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ.

ಆದಾಗ್ಯೂ, ಪತ್ನಿಯ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇದ್ದಾಗ ಹೆಂಡತಿಯೊಂದಿಗೆ ಸಮ್ಮತಿಯ ಲೈಂಗಿಕತೆಯ ಪ್ರತಿವಾದವನ್ನು ತೆಗೆದುಕೊಳ್ಳಲಾಗುವುದಿಲ್ಲ. ಆಕೆ ಮದುವೆಯಾಗಿರಲಿ ಅಥವಾ ಆಗದೇ ಇರಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿ ಮೇಲೆ ಅತ್ಯಾಚಾರವಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿಯೊಂದಿಗೆ ಸಮ್ಮತಿಯಿಲ್ಲದ ಸಂಭೋಗ ಅತ್ಯಾಚಾರ ಎಂದು ನ್ಯಾಯಪೀಠ ಹೇಳಿತು.

ಈ ಸಂಬಂಧ 2019ರಲ್ಲಿ ದೂರು ದಾಖಲಿಸಿದ್ದ ಮಹಿಳೆ, ಸಂಬಂಧ ಹೊಂದಿದ್ದ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕ ನಿರಾಕರಿಸಿದ್ದರೂ ಆತ ಅತ್ಯಾಚಾರ ಮಾಡಿ, ಗರ್ಭಣಿ ಮಾಡಿದ್ದಾನೆ. ನಂತರ ಇಬ್ಬರೂ ಒಟ್ಟಿಗೆಯಿದ್ದು, ಮದುವೆಯಾದ್ದೇವು. ಆದರೆ ಆತ ಗರ್ಭಪಾತಕ್ಕೆ ಒತ್ತಾಯಿಸುತ್ತಿದ್ದ. ಮದುವೆ ನೆಪದಲ್ಲಿ ಪದೇ ಪದೇ ಅತ್ಯಾಚಾರ ಮಾಡಿ, ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಳು. ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, DNA ಪ್ರಕಾರ ಆರೋಪಿ ಹಾಗೂ ಮಹಿಳೆ ಪೋಷಕರು ಎಂಬುದನ್ನು ನ್ಯಾಯಾಲಯ ಪರಿಗಣಿಸಿತು.

Casual Images
ಮಂಗಳೂರು: 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣ; ಮೂವರಿಗೆ ಗಲ್ಲು ಶಿಕ್ಷೆ

ತಾನು ಮುಗ್ದನಾಗಿದ್ದು, ದೂರುದಾರ ಪತ್ನಿಯೊಂದಿಗಿನ ದೈಹಿಕ ಸಂಭೋಗವನ್ನು ಅತ್ಯಾಚಾರ ಎಂದು ಪರಿಗಣಿಸಬಾರದು. ಅದು ಒಪ್ಪಿತ ಸಂಪರ್ಕವಾಗಿತ್ತು. ಅದು ನಡೆದಾಗ ಮಹಿಳೆ ಅಪ್ರಾಪ್ತೆಯಾಗಿರಲಿಲ್ಲ ಎಂದು ಆರೋಪಿತ ವ್ಯಕ್ತಿಯಲ್ಲಿ ಅರ್ಜಿಯಲ್ಲಿ ಹೇಳಿಕೊಂಡಿದ್ದರು. ಆದಾಗ್ಯೂ, ಆತನ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಸಾಕ್ಷಿಪುರಾವೆಗಳ ಪ್ರಕಾರ ದೂರುದಾರ ಮಹಿಳೆ 2002ರಲ್ಲಿ ಜನಿಸಿದ್ದು, 2019ರಲ್ಲಿ ಘಟನೆ ನಡೆದಾಗ ಆಕೆ ಅಪ್ರಾಪ್ತೆಯಾಗಿದ್ದರು ಎಂದು ನ್ಯಾಯಾಲಯ ಹೇಳಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com