ಶಬರಿಮಲೆ ಮಾರ್ಗದ KSRTC ಬಸ್‌ಗೆ ಬೆಂಕಿ; ಯಾವುದೇ ಪ್ರಾಣಾಪಾಯ ಇಲ್ಲ

ವಾಹನದಿಂದ ಹೊಗೆ ಮತ್ತು ಬೆಂಕಿಯ ಜ್ವಾಲೆಗಳು ಹೊರಹೊಮ್ಮುತ್ತಿರುವುದನ್ನು ಗಮನಿಸಿದ ಚಾಲಕ ತಕ್ಷಣವೇ ವಾಹನವನ್ನು ನಿಲ್ಲಿಸಿದ್ದಾನೆ.
ಕೆಎಸ್ ಆರ್ ಟಿಸಿ ಬಸ್
ksrtc bbus
Updated on

ತಿರುವನಂತಪುರಂ: ಕೇರಳದ ಶಬರಿಮಲೆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಭಾನುವಾರ ಮುಂಜಾನೆ ಬೆಂಕಿ ಹೊತ್ತಿಕೊಂಡಿದೆ. ಶಬರಿಮಲೆ ಯಾತ್ರಾರ್ಥಿಗಳನ್ನು ಕರೆದುಕೊಂಡು ಹೋಗಲು ಪಂಪಾದಿಂದ ನಿಲಕ್ಕಲ್‌ಗೆ ತೆರಳುತ್ತಿದ್ದ ಖಾಲಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಚಳಕ್ಕಯಂ ಮತ್ತು ನಿಲಕ್ಕಲ್ ನಡುವಿನ ಅರಣ್ಯದಲ್ಲಿ ಬೆಳಿಗ್ಗೆ 5.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ.

ವಾಹನದಿಂದ ಹೊಗೆ ಮತ್ತು ಬೆಂಕಿಯ ಜ್ವಾಲೆಗಳು ಹೊರಹೊಮ್ಮುತ್ತಿರುವುದನ್ನು ಗಮನಿಸಿದ ಚಾಲಕ ತಕ್ಷಣವೇ ವಾಹನವನ್ನು ನಿಲ್ಲಿಸಿದ್ದಾನೆ. ಬಸ್ಸಿಗೆ ಭಾಗಶಃ ಹಾನಿಯಾಗಿದ್ದರೂ ಯಾವುದೇ ಪ್ರಾಣಾಪಾಯದ ವರದಿಯಾಗಿಲ್ಲ.

ಘಟನೆ ಮಾಹಿತಿ ತಿಳಿದ ಕೂಡಲೇ ಪಂಪಾ ಮತ್ತು ನಿಲಕ್ಕಲ್‌ನ ಅಗ್ನಿಶಾಮಕ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ತ್ವರಿತಗತಿಯಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ. ಘಟನೆ ಹಿನ್ನೆಲೆಯಲ್ಲಿ ದೇವಸ್ವಂ ಮಂಡಳಿ ಸದಸ್ಯ ಎ.ಅಜಿಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.

ನಿಗದಿತ ಬಸ್‌ಗಳಲ್ಲಿ ಶಬರಿಮಲೆಗೆ ಭಕ್ತರು ಪ್ರಯಾಣಿಸಲು ಅವಕಾಶ ನೀಡದಂತೆ ಕೆಎಸ್‌ಆರ್‌ಟಿಸಿಗೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ. ಫಿಟ್‌ನೆಸ್ ಪ್ರಮಾಣಪತ್ರ ಹೊಂದಿರುವ ಬಸ್‌ಗಳನ್ನು ಮಾತ್ರ ಬಳಸಬೇಕೆಂದು ಅದು ಕಡ್ಡಾಯಗೊಳಿಸಿದೆ.

ಈ ಮಧ್ಯೆ ತೀರ್ಥಯಾತ್ರಾ ಕಾಲದಲ್ಲಿ ಶಬರಿಮಲೆ ದೇವಸ್ಥಾನವನ್ನು ಪ್ರತಿದಿನ 18 ಗಂಟೆಗಳ ಕಾಲ ತೆರೆದಿಡಲು ದೇವಸ್ಥಾನದ ತಂತ್ರಿ (ಮುಖ್ಯ ಅರ್ಚಕ) ನಿರ್ಧರಿಸಿದ್ದಾರೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಪ್ರಕಟಿಸಿದೆ. ಸನ್ನಿದಾನಂ, ಪಂಪಾ ಮತ್ತು ನಿಲಕ್ಕಲ್‌ನಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ. ಅಲ್ಲದೇ ವಿವಿಧ ಕಡೆಗಳಲ್ಲಿ ಚುಕ್ಕುವೆಲ್ಲಾ (ಒಣಗಿದ ಶುಂಠಿಯೊಂದಿಗೆ ಬೇಯಿಸಿದ ನೀರು)' ವಿತರಿಸಲಾಗುತ್ತಿದೆ. ಈ ವರ್ಷದ ಶಬರಿಮಲೆ ತೀರ್ಥಯಾತ್ರೆಯು ನವೆಂಬರ್ 15 ರಂದು ಪ್ರಾರಂಭವಾಯಿತು. ಇದು ಮಲಯಾಳಂ ತಿಂಗಳ ವೃಶ್ಚಿಕಂನ ಆರಂಭವನ್ನು ಸೂಚಿಸುತ್ತದೆ.

ಕೆಎಸ್ ಆರ್ ಟಿಸಿ ಬಸ್
ಬೆಂಗಳೂರು: ಇದೇ ಮೊದಲ ಬಾರಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ತೃತೀಯಲಿಂಗಿ ಮಹಿಳೆ!

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಪ್ರತಿ ವರ್ಷ ಲಕ್ಷಾಂತರ ಯಾತ್ರಾರ್ಥಿಗಳು ಆಗಮಿಸುತ್ತಾರೆ. ಭಕ್ತರಿಗೆ ದೇವರ ದರ್ಶನ ಸುಲಭಗೊಳಿಸಲು ವರ್ಚುವಲ್ ಬುಕಿಂಗ್ ಅನ್ನು TDB ಪರಿಚಯಿಸಿದೆ. ದಿನಕ್ಕೆ ಸುಮಾರು 70,000 ಭಕ್ತರಿಗೆ ಅವಕಾಶ ನೀಡುತ್ತದೆ. ಅನುಕೂಲಕ್ಕಾಗಿ ಸ್ಪಾಟ್ ಬುಕಿಂಗ್ ಸೌಲಭ್ಯಗಳನ್ನು ಸಹ ಪರಿಚಯಿಸಲಾಗಿದೆ.

ಬೇರೆ ರಾಜ್ಯಗಳಿಂದ ಆಗಮಿಸುವ ಭಕ್ತರಿಗಾಗಿ ವಿಶೇಷ ಶಬರಿಮಲೆ ಯಾತ್ರಾರ್ಥಿ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪಂಪಾ, ವಂಡಿಪೆರಿಯಾರ್ ಮತ್ತು ಎರುಮೇಲಿಯಲ್ಲಿ ಸ್ಪಾಟ್ ಬುಕ್ಕಿಂಗ್‌ಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಇಲ್ಲದ ಯಾತ್ರಾರ್ಥಿಗಳು ತಮ್ಮ ಮತದಾರರ ಗುರುತಿನ ಚೀಟಿ ಅಥವಾ ಪಾಸ್‌ಪೋರ್ಟ್ ಅನ್ನು ಬಳಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com