ಥಾಣೆ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಥಾಣೆ ಜಿಲ್ಲೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿ, ಮತದಾರರು ಒಂದು ಕ್ಲಿಕ್ ನಲ್ಲಿ ಬೂತ್‌ಗಳಿಗೆ ತೆರಳಲು QR ಕೋಡ್ ಸೌಲಭ್ಯವನ್ನು ಪರಿಚಯಿಸಲಾಗಿದೆ.
ಮತದಾರರು ತಮ್ಮ ಮತದಾನ ಕೇಂದ್ರ ಯಾವುದು ಎಂದು ತಿಳಿದುಕೊಳ್ಳಲು QR ಕೋಡ್‌ಗಳನ್ನು ಸ್ಕ್ಯಾನ್ ಮಾಡಿದರೆ ಸಾಕು ಎಂದು ಥಾಣೆ ಕಲೆಕ್ಟರ್ ಮತ್ತು ಚುನಾವಣಾ ಅಧಿಕಾರಿ ಅಶೋಕ್ ಶಿಂಗಾರೆ ಅವರು ಹೇಳಿದ್ದಾರೆ.
ಈ ಉಪಕ್ರಮವು ಮತದಾರರ ಅನುಕೂಲ ಮತ್ತು ಭಾಗವಹಿಸುವಿಕೆಯನ್ನು ಹೆಚ್ಚಿಸುವ ಗುರಿ ಹೊಂದಿದೆ. ವಿಶೇಷವಾಗಿ ಥಾಣೆ ಮತ್ತು ಕಲ್ಯಾಣ್ ಪ್ರದೇಶಗಳಲ್ಲಿ ಕಡಿಮೆ ಮತದಾನದ ಬಗ್ಗೆ ಚುನಾವಣಾ ಆಯೋಗವು ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದರು.
18 ವಿಧಾನಸಭಾ ಕ್ಷೇತ್ರಗಳ ಮತದಾರರಿಗೆ ಮಾರ್ಗದರ್ಶನ ನೀಡುವ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಪರಿಚಯಿಸುವುದು ಸೇರಿದಂತೆ ಮತದಾರರನ್ನು ಮತದಾನ ಕೇಂದ್ರಗಳಿಗೆ ಸೆಳೆಯಲು ಮತ್ತು ಒಟ್ಟಾರೆ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಜಿಲ್ಲಾಡಳಿತ ಹಲವಾರು ಕ್ರಮಗಳನ್ನು ಜಾರಿಗೆ ತಂದಿದೆ ಎಂದು ಅವರು ಹೇಳಿದರು.
QR ಕೋಡ್‌ಗಳು ಮತದಾರರನ್ನು ಅವರ ಗೊತ್ತುಪಡಿಸಿದ ಮತಗಟ್ಟೆಗಳಿಗೆ ಕರೆದುಕೊಂಡು ಹೋಗುತ್ತವೆ. ಅವರಿಗೆ ನಿಖರವಾದ ಸ್ಥಳ ಮತ್ತು ವಿಳಾಸದಂತಹ ನಿರ್ಣಾಯಕ ಮಾಹಿತಿಯನ್ನು QR ಕೋಡ್ ಒದಗಿಸುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆವರೆಗೆ ಥಾಣೆ ಜಿಲ್ಲೆಯ ಒಟ್ಟು 7.2 ಮಿಲಿಯನ್ ಮತದಾರರಲ್ಲಿ, 3.27 ಮಿಲಿಯನ್(ಸುಮಾರು ಶೇ. 50 ರಷ್ಟು) ಮತದಾರರು ಈಗಾಗಲೇ ಚುನಾವಣಾ ಇಲಾಖೆಯ ವೆಬ್‌ಸೈಟ್‌ನಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಿದ ಕೆಲವು ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಿದ್ದಾರೆ ಎಂದು ಶಿಂಗರೆ ಅವರು ತಿಳಿಸಿದ್ದಾರೆ.
Advertisement