ಇಸ್ರೋದ GSAT-N2 ಸಂವಹನ ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ಸ್ಪೇಸ್‌ಎಕ್ಸ್; Video

ಫಾಲ್ಕನ್ 9 ರಾಕೆಟ್‌ ನೆರವಿನಿಂದ 4,700 ಕೆಜಿ ತೂಕದ GSAT-N2 ಹೈ-ಥ್ರೂಪುಟ್(HTS) ಉಪಗ್ರಹವನ್ನು ನಿಗದಿತ ಜಿಯೋ-ಸಿಂಕ್ರೊನಸ್ ಟ್ರಾನ್ಸ್ ಫರ್ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಯಿತು.
SpaceX launches ISRO's GSAT-N2 communication satellite
GSAT-N2 ಸಂವಹನ ಉಪಗ್ರಹ ಉಡಾವಣೆ
Updated on

ಬೆಂಗಳೂರು: ದೇಶದ ಇತ್ತೀಚಿನ ಸಂವಹನ ಉಪಗ್ರಹ ಜಿಸ್ಯಾಟ್-ಎನ್2 ಅನ್ನು ಬಿಲಿಯನೇರ್ ಎಲೋನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಅಮೆರಿಕದ ಕೇಪ್ ಕೆನವೆರಲ್‌ನಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ ಎಂದು ಇಸ್ರೋದ ವಾಣಿಜ್ಯ ವಿಭಾಗ ಎನ್‌ಎಸ್‌ಐಎಲ್ ತಿಳಿಸಿದೆ.

ಫಾಲ್ಕನ್ 9 ರಾಕೆಟ್‌ ನೆರವಿನಿಂದ 4,700 ಕೆಜಿ ತೂಕದ GSAT-N2 ಹೈ-ಥ್ರೂಪುಟ್(HTS) ಉಪಗ್ರಹವನ್ನು ನಿಗದಿತ ಜಿಯೋ-ಸಿಂಕ್ರೊನಸ್ ಟ್ರಾನ್ಸ್ ಫರ್ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಯಿತು ಎಂದು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್(NSIL) ತಿಳಿಸಿದೆ.

GSAT-N2 ಹೈ-ಥ್ರೂಪುಟ್ (HTS) ಸಂವಹನ ಉಪಗ್ರಹವನ್ನು ನವೆಂಬರ್ 19, 2024 ರಂದು ಅಮೆರಿಕದ ಕೇಪ್ ಕ್ಯಾನವೆರಲ್‌ನಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. 4700 ಕೆಜಿ ತೂಕದ GSAT-N2 ಅನ್ನು ನಿಗದಿತ ಜಿಯೋ-ಸಿಂಕ್ರೊನಸ್ ಟ್ರಾನ್ಸ್‌ಫರ್ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಯಿತು. ಉಪಗ್ರಹ ಉತ್ತಮ ಸ್ಥಿತಿಯಲ್ಲಿದ್ದು, ಇಸ್ರೋದ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ(ಎಂಸಿಎಫ್) ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ಪ್ರಾಥಮಿಕ ಮಾಹಿತಿಯು ಸೂಚಿಸುತ್ತದೆ" ಎಂದು NSIL 'X' ನಲ್ಲಿ ಪೋಸ್ಟ್‌ ಮಾಡಿದೆ.

"ಜಿಎಸ್‌ಎಟಿ-ಎನ್2 ಬ್ಯಾಂಡ್ ಹೈ ಥ್ರೋಪುಟ್ ಸಂವಹನ ಉಪಗ್ರಹವಾಗಿದ್ದು, ದೇಶದ ಬ್ರಾಡ್‌ಬ್ಯಾಂಡ್ ಸೇವೆಗಳು ಮತ್ತು ವಿಮಾನದಲ್ಲಿ ಕನೆಕ್ಟಿವಿಟಿ ಹೆಚ್ಚಿಸುತ್ತದೆ" ಎಂದು ಎನ್‌ಎಸ್‌ಐಎಲ್ ಹೇಳಿದೆ.

ಈ ಉಪಗ್ರಹವು 14 ವರ್ಷ ಕಾರ್ಯಾಚರಣೆಯ ಅವಧಿಯನ್ನು ಹೊಂದಿದೆ ಮತ್ತು 32 ಬಳಕೆದಾರ ಕಿರಣಗಳನ್ನು ಹೊಂದಿದ್ದು, ಈಶಾನ್ಯ ಪ್ರದೇಶದಲ್ಲಿ ಎಂಟು ಕಿರಿದಾದ ಸ್ಪಾಟ್ ಕಿರಣಗಳು ಮತ್ತು ಭಾರತದ ಉಳಿದ ಭಾಗಗಳಲ್ಲಿ 24 ವಿಶಾಲ ಸ್ಪಾಟ್ ಕಿರಣಗಳನ್ನು ಒಳಗೊಂಡಿದೆ.

4,700 ಕೆ.ಜಿ ತೂಗುವ ಜಿಸ್ಯಾಟ್-2 ಉಪಗ್ರಹವು ಭಾರತದ ಸ್ವಂತ ರಾಕೆಟ್‌ಗಳ ಹೊತ್ತೊಯ್ಯುವ ಸಾಮರ್ಥ್ಯವನ್ನು ಮೀರಿದೆ. ಹೀಗಾಗಿ ಇಸ್ರೋ ಅದರ ಉಡಾವಣೆಗಾಗಿ ಸ್ಪೇಸ್‌ ಎಕ್ಸ್‌ನ್ನು ಆಯ್ಕೆ ಮಾಡಿಕೊಂಡಿದೆ.

SpaceX launches ISRO's GSAT-N2 communication satellite
ಖರ್ಚು ಮಾಡಿದ ಪ್ರತಿ ರೂಪಾಯಿಗೆ ಸಮಾಜಕ್ಕೆ 2.50 ರೂಪಾಯಿ ವಾಪಸ್ ಕೊಟ್ಟಿದೆ.. ಇದು ISRO ಬದ್ಧತೆ: ಇಸ್ರೋ ಮುಖ್ಯಸ್ಥ Somnath

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com