ವಿಶಾಖಪಟ್ಟಣಂ: ಕಾನೂನು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಕೆಲವು ವೀಡಿಯೊಗಳೊಂದಿಗೆ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ
ಐಟಿ ಆಕ್ಟ್ 2000 ರಿಂದ 2008 ರ ಸೆಕ್ಷನ್ 67 (ಎ) ಸೇರಿದಂತೆ BNS ಸೆಕ್ಷನ್ 70(1), 77, 351(2), 69 ಮತ್ತು 75(1) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಸಂತ್ರಸ್ತೆಯ ಗೆಳೆಯ (ವಂಶಿ) ಮತ್ತು ಆತನ ಮೂವರು ಆಪ್ತರು ಆರೋಪಿಗಳಾಗಿದ್ದಾರೆ ಎಂದು ವಿಶಾಖಪಟ್ಟಣಂ ಪೊಲೀಸ್ ಕಮಿಷನರ್ ಶಂಕ ಬ್ರತಾ ಬಾಗ್ಚಿ ತಿಳಿಸಿದ್ದಾರೆ.
ಪ್ರಮುಖ ಆರೋಪಿ ವಂಶಿ ಮತ್ತು ಕಾನೂನು ವಿದ್ಯಾರ್ಥಿಯು ಒಂದು ವರ್ಷಕ್ಕೂ ಹೆಚ್ಚು ಕಾಲ ಸಂಬಂಧ ಹೊಂದಿದ್ದರು. ಆಗಸ್ಟ್ 13, 2024 ರಂದು ಕೃಷ್ಣ ನಗರದಲ್ಲಿನ ತನ್ನ ಸ್ನೇಹಿತನ ಕೊಠಡಿಗೆ ಯುವತಿಯನ್ನು ಕರೆದೊಯ್ದಿದ್ದ ವಂಶಿ ಅಲ್ಲಿ ಆಕೆ ಮೇಲೆ ಅತ್ಯಾಚಾರ ನಡೆಸಿದ್ದಾನೆ. ನಂತರ ಇತರ ಆರೋಪಿಗಳು ಸ್ಥಳಕ್ಕೆ ಆಗಮಿಸಿ ವಂಶಿ ಮತ್ತು ಯುವತಿಯ ಆತ್ಮೀಯ ಕ್ಷಣಗಳನ್ನು ಚಿತ್ರೀಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯ ಬಾಯ್ ಫ್ರೆಂಡ್ ಸಹಾಯದಿಂದ ಆರೋಪಿಗಳು ಅಶ್ಲೀಲ ವಿಡಿಯೋ ತೋರಿಸಿ ಕಾನೂನು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ತಿಂಗಳುಗಟ್ಟಲೇ ನೀಡಿದ ಕಿರುಕುಳದ ನಂತರ, ಹುಡುಗಿ ನವೆಂಬರ್ 18 ರಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಆಕೆಯ ತಂದೆ ರಕ್ಷಿಸಿದ್ದು, ಆಗ ನಡೆದ ವಿಚಾರವನ್ನು ಮನೆಯವೊಂದಿಗೆ ಯುವತಿ ಹಂಚಿಕೊಂಡಿದ್ದಾಳೆ. ನಂತರ ಪೊಲೀಸರಿಗೆ ದೂರು ನೀಡಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement